ಉಡುಪಿ:ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾವೇರಿದ್ದು, ಒಂದೆಡೆ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ, ಇನ್ನೊಂದೆಡೆ ಕೇಂದ್ರ ಗೃಹಸಚಿವ ಅಮಿತ್ ಷಾ ಬಹಿರಂಗ ಸಭೆಗಳನ್ನು ಉದ್ದೇಶಿಸಿ ಮಾತನಾಡಿ ಮತ ಯಾಚನೆ ಮಾಡುತ್ತಿದ್ದಾರೆ. ಸದ್ಯ ಉಡುಪಿ ಜಿಲ್ಲೆಯ ಸಿದ್ಧಾಪುರದಲ್ಲಿ ಅಮಿತ್ ಷಾ ಪ್ರಚಾರದಲ್ಲಿ ತೊಡಗಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರವಾಗಿ ಸಿದ್ಧಾಪುರದಲ್ಲಿ ಮತ ಯಾಚಿಸುತ್ತಿರುವ ಅಮಿತ್ ಷಾ, ಮೋದಿಜಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಬೈಂದೂರು ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು. ಅಲ್ಲದೆ ಬೈಂದೂರು ಅಭ್ಯರ್ಥಿಯ ಗೆಲುವಿನ ಅಂತರ 25,000ಕ್ಕಿಂತ ಜಾಸ್ತಿ ಆಗಬೇಕು. ಅದು 50 ಸಾವಿರಕ್ಕೂ ಅಧಿಕವಿದ್ದರೆ ನಾನು ವಿಜಯೋತ್ಸವ ಆಚರಣೆಗೂ ಬರುತ್ತೇನೆ ಎಂದರು.
ಇದನ್ನೂ ಓದಿ:ವಾಹನದಲ್ಲಿ ಸಿಕ್ತು ಕೋಟಿಗಟ್ಟಲೆ ಹಣ; ದಾಖಲೆ ಇಲ್ಲದ 5 ಕೋಟಿ ರೂ. ಜಪ್ತಿ
ಕರಾವಳಿ ಕರ್ನಾಟಕವನ್ನು ರಕ್ಷಣೆ ಮಾಡುವಂಥ ಕೆಲಸ ಭಾರತೀಯ ಜನತಾ ಪಾರ್ಟಿ ಮಾಡುತ್ತಿದೆ. ಕರ್ನಾಟಕ ಕರಾವಳಿಯನ್ನು ರಕ್ಷಣೆ ಮಾಡುವ ಉದ್ದೇಶ ನಿಮಗಿದ್ದಲ್ಲಿ ಭಾರತೀಯ ಜನತಾ ಪಾರ್ಟಿಗೇ ಮತ್ತೆ ಮತ ನೀಡಿ ಎಂದು ಅಮಿತ್ ಷಾ ಕರೆ ನೀಡಿದರು.
ಇದನ್ನೂ ಓದಿ:ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಅಡಿಕೆ ಬೆಲೆ ಇಳಿಕೆಯಾದಾಗ ಬಿಜೆಪಿ ಸರ್ಕಾರ ಅಡಿಕೆ ಬೆಳೆಗಾರರ ನೆರವಿಗೆ ಬಂದಿತ್ತು. ಮೀನುಗಾರರಿಗೆ ಹೊಸ ಬಂದರುಗಳನ್ನು ನಿರ್ಮಿಸುವ ಮೂಲಕ ಸಹಾಯ ನೀಡಿತು. ಎನ್​ಎಐಯನ್ನು ಬಳಸಿಕೊಂಡು ದೇಶದ್ರೋಹಿಗಳನ್ನು ಬಿಜೆಪಿ ಮಟ್ಟ ಹಾಕಿದೆ. ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಕೊಲೆಗಡುಕರನ್ನು ಹುಡುಕಿ ಜೈಲಿಗೆ ತಳ್ಳಲಾಗಿದೆ ಎಂದು ಸಿದ್ಧಾಪುರದಲ್ಲಿ ನಡೆದ ರೋಡ್ ಶೋನಲ್ಲಿ ಮಾತನಾಡಿದರು.
ಸಂಬಂಧಿಯಿಂದಲೇ ಭೀಕರ ಕೃತ್ಯ: ಅಣ್ಣನ ಹೆಂಡತಿ ಹಾಗೂ ಮಗನನ್ನು ಹೊಡೆದು ಕಡಿದು ಕೊಂದ

ಭ್ರಷ್ಟ ಅಧಿಕಾರಿಗೆ 15 ವರ್ಷಗಳ ಬಳಿಕ 2 ವರ್ಷ ಸಜೆ, 60 ಲಕ್ಷ ರೂ. ದಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 8 =
Remember me
