ಬೆಂಗಳೂರು:ಮುಡಾ ನಿವೇಶನ ಹಂಚಿಕೆ ಹಗರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿರುವ ಹೊತ್ತಲ್ಲೇ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಅರ್ಹರು? ಯಾರಿಗೆ ಅವಕಾಶ ಕೊಡಬೇಕಿತ್ತು? ಸೀನಿಯಾರಿಟಿ ಯಾರಿಗಿದೆ? ಎಂಬಿತ್ಯಾದಿ ಚರ್ಚೆ ಬಿರುಸು ಪಡೆದುಕೊಂಡಿದೆ.
ಸಿಎಂ ಸಿದ್ದರಾಮಯ್ಯಗೆ ಹೊರಗೆ ಬೆಂಬಲ ವ್ಯಕ್ತಪಡಿಸುತ್ತಲೇ ಒಳಗೆ ಸಿಎಂ ಪದವಿ ಮೇಲೆ ಕಣ್ಣಿಟ್ಟಿದ್ದ ನಾಯಕರು ಈಗ ಒಬ್ಬೊಬ್ಬರಾಗಿಯೇ ತೆರೆಮರೆಯಿಂದ ಹೊರಬರಲಾರಂಭಿಸಿದ್ದಾರೆ. ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬರಬಾರದೆಂದು ಕಾಂಗ್ರೆಸ್ ಹೈಕಮಾಂಡ್ ಶತಪ್ರಯತ್ನ ನಡೆಸುತ್ತಿದ್ದರೂ ಕಾಂಗ್ರೆಸ್ ನಾಯಕರು ಮೌನ ಮುರಿದಿರುವುದು ಇದು ಆಂತರಿಕ ಕಿತ್ತಾಟದ ಮುನ್ನುಡಿಯೇ ಎಂಬ ಆತಂಕಕ್ಕೆ ಕಾರಣವಾಗಿದೆ.
ಸಿಎಂ ಬದಲಾವಣೆ ಕುರಿತು ಪಕ್ಷದೊಳಗೆ ಏನೇ ಚರ್ಚೆ ನಡೆದರೂ ಅದು ಸಾರ್ವಜನಿಕಗೊಳ್ಳಬಾರದೆಂಬುದು ಕಾಂಗ್ರೆಸ್ ಹೈಕಮಾಂಡ್ ಆಶಯವಾಗಿತ್ತು. ದೂರಗಾಮಿ ಲೆಕ್ಕಾಚಾರ, ಅಸ್ಥಿರತೆ ತಲೆದೋರದಂತೆ ನೋಡಿಕೊಳ್ಳುವುದು, ಗುಂಪುಗಾರಿಕೆ ಉಂಟಾಗದಂತೆ ಮುಂಜಾಗ್ರತೆ ವಹಿಸುವುದು ಹೈಕಮಾಂಡ್ ಪ್ರಧಾನ ಉದ್ದೇಶವಾಗಿತ್ತು. ಆದರೀಗ ಒಬ್ಬೊಬ್ಬರೇ ನಾಯಕರು ತಮ್ಮ ಮನೋಭಿಲಾಷೆ ಹೊರಹಾಕುತ್ತಿದ್ದಾರೆ. ಹೈಕಮಾಂಡ್ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ ಕೆಲವು ನಾಯಕರಿಗೆ ಕರೆ ಮಾಡಿ ಚರ್ಚೆಗೆ ಕಡಿವಾಣ ಹಾಕಿ ಎಂದು ಸೂಚನೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಕಳೆದ ವಾರವಷ್ಟೇ ತಮ್ಮ ಮನದಿಂಗಿತ ಹೊರಹಾಕಿದ್ದರು. ಈ ಮಾತು ಕೈ ನಾಯಕರಿಗೆ ಕಸಿವಿಸಿ ಉಂಟುಮಾಡಿತ್ತು. ಅಷ್ಟರಲ್ಲಾಗಲೇ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಸಿಎಂ ಆಗೋಕೆ ಸೀನಿಯಾರಿಟಿ ಬೇಕಿಲ್ಲ. ಕಾಂಗ್ರೆಸ್​ನಲ್ಲಿ ನಾನು ಕೂಡ ಸಿಎಂ ಆಗುತ್ತೇನೆ ಎಂದರು. ಜತೆಗೆ ಸಿಎಂ ಬದಲಾವಣೆಯಂತಹ ಸನ್ನಿವೇಶ ಸದ್ಯಕ್ಕಂತೂ ಬಂದಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾರೆ, ಇರುತ್ತಾರೆ. ನಾನು ಕೂಡ ಹಿರಿಯ ಸದಸ್ಯನಿದ್ದೇನೆ, ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತೇನೆ ಎಂದರು. ಇನ್ನೊಂದೆಡೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಜಾಲತಾಣದಲ್ಲಿ ಪೋಸ್ಟ್ ಹಾಕಲು ಆರಂಭಿಸಿದರು. ಈ ಚರ್ಚೆಗೆ ಬ್ರೇಕ್ ಹಾಕಲು ಸತೀಶ್ ಅವರೇ ಮಾಧ್ಯಮದ ಮುಂದ ಬರಬೇಕಾಯಿತು. ಅನೇಕರು ಈಗಾಗಲೇ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎನ್ನುವ ನಂಬಿಕೆ ನನ್ನದು ಎಂದರು. ಈಗ ನಾನು ಸಿಎಂ ಕನಸು ಕಂಡಿಲ್ಲ ಎಂದ ಅವರು ಸಿಎಂ ಬದಲಾವಣೆ ಪ್ರಶ್ನೆ ಬರಲ್ಲ ಎನ್ನುವ ವಿಶ್ವಾಸ ಇದೆ. ಎಲ್ಲಿಯೂ ನಾನೇ ಸಿಎಂ ಆಗುತ್ತೇನೆ ಎಂದು ಯಾರೂ ಹೇಳಿಲ್ಲ. ಇಂತಹ ಹೇಳಿಕೆ ಪರಿಣಾಮ ಬೀರುವುದಿಲ್ಲ ಎಂದು ಸಮಜಾಯಿಷಿ ನೀಡಿದರು.
ತೀವ್ರಗೊಂಡ ಜಟಾಪಟಿ:ವಿಜಯಪುರದಿಂದ ಸಿಎಂ ಆದರೆ ನಾನೇ ಆಗುವುದು. ಶಿವಾನಂದ ಪಾಟೀಲ್ ಅಂತೂ ಆಗಲ್ಲ. ಅವರು ಜನತಾ ದಳದಿಂದ ಕಾಂಗ್ರೆಸ್​ಗೆ ಬಂದಿದ್ದಾರೆ ಎಂಬ ಸಚಿವ ಎಂ.ಬಿ.ಪಾಟೀಲ್ ಮಾತು ಸಚಿವ ಶಿವಾನಂದ ಪಾಟೀಲರನ್ನು ಕೆರಳಿಸಿದೆ. ಅವರೂ ಸಹ ತಿರುಗೇಟು ನೀಡಿದ್ದಾರೆ. ಸಿಎಂ ಆಗಲು ಸೀನಿಯಾರಿಟಿ ಮಾನದಂಡವಲ್ಲ ಎಂಬುದು ನನಗೂ ಗೊತ್ತಿದೆ. ಆದರೆ, ಪಕ್ಷದಲ್ಲಿ ಅನೇಕರು ಹಿರಿತನದ ಜವಾಬ್ದಾರಿ ಹೊತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಕಟ್ಟಿದ್ದಾರೆ. ಅವರಿಗೆಲ್ಲ ಸಿಎಂ ಆಗುವ ಆಸೆ ಇತ್ತು. ಆದರೆ, ಬೇರೆಯವರು ಆದರು. ಅಂಥವರು ಇನ್ನೂ ಬಹಳಷ್ಟು ಸೀನಿಯರ್ಸ್ ಇದ್ದಾರೆ. ಜೂನಿಯರ್ ಆದ ನಾವು ಅಂಥವರ ಬಗ್ಗೆ ಕನಸು ಕಾಣಬೇಕಲ್ಲವೆ ಎಂದು ಸಚಿವ ಶಿವಾನಂದ ಪಾಟೀಲ ಕುಟುಕಿದ್ದಾರೆ. ಈ ಜಟಾಪಟಿ ಜೋರಾಗುತ್ತಿದ್ದಂತೆ ಎಂ.ಬಿ.ಪಾಟೀಲ್ ತಮ್ಮ ಸಿಎಂ ಆಸೆಯ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು. ಮುಂದೊಂದು ದಿನ ನಾನೂ ಸಿಎಂ ಆಗುವೆ. ನನಗೂ ಆಸೆ ಇದೆ. ದುರಾಸೆ ಇಲ್ಲ ಎಂದು ವಿಷಯ ಮುಗಿಸುವ ತವಕ ತೋರಿಸಿದರು.
ಪ್ರತಿಪಕ್ಷ ಗೇಲಿಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಆತಂಕ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸುಳಿವು ಸಿಗುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೇರಲು ಸೂಟ್ ಹೊಲಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗ ತೊಡಗಿದೆ ಎಂದು ಪ್ರತಿಪಕ್ಷ ಬಿಜೆಪಿ ಆಡಳಿತ ಪಕ್ಷದ ಕಾಲೆಳೆದಿದೆ. ನಾವೆಲ್ಲರೂ ಸಿದ್ದರಾಯ್ಯನವರ ಬೆಂಬಲಕ್ಕೆ ಬಂಡೆಯಂತೆ ನಿಲ್ಲುತ್ತೇವೆ ಎಂದು ಹೇಳುತ್ತಿದ್ದವರೇ ಈಗ ತಾವು ಸಿಎಂ ಹುದ್ದೆಯ ಆಕಾಂಕ್ಷಿಗಳು ಎನ್ನತೊಡಗಿದ್ದಾರೆ. ಹೀಗಾಗಿ, ಸಿದ್ದರಾಮಯ್ಯನವರ ಕುರ್ಚಿಗೆ ಬಂದಿರುವ ಕಂಟಕವನ್ನು ಸ್ವತಃ ಆ ವಿಘ್ನ ವಿನಾಯಕನೂ ತಪ್ಪಿಸಲಾರ ಎಂದು ಹಾಸ್ಯ ಮಾಡಿದೆ. ಹಿರಿಯ ಶಾಸಕ ದೇಶಪಾಂಡೆ ಎಪಿಸೋಡ್ ಮುಗಿಯು ತ್ತಿದ್ದಂತೆ ಎಂ.ಬಿ.ಪಾಟೀಲ್ ತಾವು ಸಿಎಂ ಆಕಾಂಕ್ಷಿಯೆಂದು ಡಂಗೂರ ಸಾರುತ್ತಿದ್ದಾರೆ. ಹೊರಗೆ ಬೆಂಬಲ, ಒಳಗೆ ಹಂಬಲವಿಟ್ಟುಕೊಂಡಿ ರುವ ಕೆಲ ಕಾಂಗ್ರೆಸ್ಸಿಗರೆಲ್ಲಾ ಸಿದ್ದರಾಮಯ್ಯನವರು ಯಾವಾಗ ಕುರ್ಚಿ ಖಾಲಿ ಮಾಡುತ್ತಾರೆ ಎಂಬುದನ್ನೇ ಕಾಯುತ್ತಿದ್ದಾರೆ ಎಂದು ವಿಶ್ಲೇಷಿಸಿದೆ.
ಕಾಂಗ್ರೆಸ್​ನಲ್ಲಿ ನಾ ಮುಂದು, ತಾ ಮುಂದು ಎನ್ನುತ್ತ ಒಬ್ಬರ ಮೇಲೊಬ್ಬರು ಸಿಎಂ ರೇಸ್​ನಲ್ಲಿ ಇದ್ದಾರೆ. ಸಿಎಂ ಪರ ಬಂಡೆಯಂತೆ ನಿಂತಿದ್ದೇವೆ ಎನ್ನುವವರು ಒಳ ಗೊಳಗೇ ಸಿದ್ದರಾಮಯ್ಯ ಕುರ್ಚಿ ಶೇಕ್ ಮಾಡ್ತಿದ್ದಾರೆ.
| ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಕಾಂಗ್ರೆಸ್ ಬೆಳವಣಿಗೆ
* ರಾಜ್ಯ ನಾಯಕರ ನಡುವೆ ಗೌಪ್ಯ ಸಭೆ
* ಆಕಾಂಕ್ಷಿಗಳಿಂದ ದೆಹಲಿ ದಂಡಯಾತ್ರೆ
* ಖರ್ಗೆ ರಾಜ್ಯಕಾರಣಕ್ಕಿಲ್ಲವೆಂದು ಸ್ಪಷ್ಟನೆ
* ಹೈಕಮಾಂಡ್ ಜತೆ ಸಮಾಲೋಚನೆ
* ರಾಜ್ಯದ ಮೇಲೆ ನಿಗಾ ಇಟ್ಟ ವರಿಷ್ಠರು
* ಡ್ಯಾಮೇಜ್ ಕಂಟ್ರೋಲ್ ಯತ್ನ ಶುರು
ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ದೇಶ ಪಾಂಡೆ ಅನೇಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. 2028ಕ್ಕೆ ಸಿಎಂ ಆಗುವ ತಯಾರಿ ಇದೆ ನಮ್ಮದು. ಅಲ್ಲಿಯವರೆಗೆ ಅಭಿಮಾನಿಗಳು ಕಾಯಬೇಕು.
| ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವ
ಸಿಎಂ ಸ್ಥಾನಕ್ಕೆ ಸದ್ಯ ಯಾವುದೇ ಬದಲಾವಣೆ ಇಲ್ಲ. ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ.
| ಶಿವಾನಂದ ಪಾಟೀಲ್ ಸಕ್ಕರೆ ಸಚಿವ
ಸತೀಶ ಜಾರಕಿ ಹೊಳಿಗಿಂತಲೂ ನಾನು ಸೀನಿಯರ್. ನಾನು, ಡಿಕೆಶಿ, ಪರಮೇಶ್ವರ್ ಒಂದೇ ಕೆಟಗರಿಯಲ್ಲಿ ದ್ದೇವೆ. ಮುಂದೊಂದು ದಿನ ನಾನೂ ಸಿಎಂ ಆಗುವೆ. ನನಗೂ ಆಸೆ ಇದೆ. ದುರಾಸೆ ಇಲ್ಲ.
| ಎಂ.ಬಿ.ಪಾಟೀಲ್ ಕೈಗಾರಿಕೆ ಸಚಿವ
ಹುಟ್ಟುಹಬ್ಬದಂದು ಹಸೆಮಣೆ ಏರಲು ಸಜ್ಜಾದ ಸ್ಯಾಂಡಲ್​ವುಡ್​ ಕ್ವೀನ್​!? ರಮ್ಯಾ ಕೈಹಿಡಿಯುವ ವರನ್ಯಾರು ಗೊತ್ತೇ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + eleven =
Remember me
