|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಕೊನೇ ಘಳಿಗೆಯಲ್ಲಿ ಅಭ್ಯರ್ಥಿ ಘೋಷಿಸಿ ಗೊಂದಲ ಮಾಡಿಕೊಂಡು ಕ್ಷೇತ್ರ ಕಳೆದುಕೊಳ್ಳುವ ಬದಲು ಚುನಾವಣೆಗೆ 4-5 ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ‘ನಿರ್ದಿಷ್ಟ ಕ್ಷೇತ್ರ’ದ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್​ನಲ್ಲಿ ಎರಡು ಹಂತದಲ್ಲಿ ಸರ್ವೆ ನಡೆಸಿ, ಜನರ ಅಭಿಪ್ರಾಯ ಹೆಕ್ಕಿ ತೆಗೆಯಲು ಬಯಸಿದೆ. ಇದೇ ವೇಳೆ ಪಕ್ಷದಲ್ಲಿ ಸರ್ವೆ ರಾಜಕೀಯವೂ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತ್ಯೇಕ ಸರ್ವೆ ಮಾಡಿಸುತ್ತಿದ್ದಾರೆ. ಹೈಕಮಾಂಡ್ ಸೂಚನೆ ಅನುಸಾರ ಸಿದ್ದರಾಮಯ್ಯ ಒಂದು ಸರ್ವೆ ಮಾಡಿಸುತ್ತಿದ್ದಾರೆ. ಹೈಕಮಾಂಡ್ ನೇರವಾಗಿ ಕ್ಷೇತ್ರ ಸಮೀಕ್ಷೆ ಮಾಡಿಸಿ ವರದಿ ಪಡೆದುಕೊಳ್ಳಲು ಬಯಸಿದೆ.
ಇದಿಷ್ಟೇ ಅಲ್ಲದೆ, ಪಕ್ಷವು ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು, ಡಿಜಿಟಲ್ ಸದಸ್ಯತ್ವದ ಮುಖಾಂತರ ಆಪ್ ಬಳಸಿ ಅಭ್ಯರ್ಥಿ ಯಾರಾದರೆ ಸೂಕ್ತ ಎಂದು ಕ್ಷೇತ್ರವಾರು ಪಕ್ಷದ ಮುಖಂಡರ ಅಭಿಪ್ರಾಯವನ್ನು ನೇರವಾಗಿ ಪಡೆದುಕೊಳ್ಳುವ ದಾರಿಯನ್ನು ಸಹ ಸಿದ್ಧಪಡಿಸುತ್ತಿದೆ.
ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಬಳಗವು ಏಪ್ರಿಲ್​ನಲ್ಲಿ ಸರ್ವೆ ಮಾಡಿಸಿ ಜೂನ್- ಜುಲೈ ಬಳಿಕ ಕ್ಷೇತ್ರವಾರು ಸಂಭಾವ್ಯ ಅಭ್ಯರ್ಥಿಗಳ ಪೈಕಿ ಯಾರು ಬೆಸ್ಟ್ ಎಂಬ ವರದಿ ಇಟ್ಟುಕೊಂಡು ಅಖಾಡಕ್ಕಿಳಿಯಲು ನಿರ್ಧರಿಸಲಾಗಿದೆ. ಹಾಲಿ ಪಕ್ಷದ ಶಾಸಕರಿರುವ ಕ್ಷೇತ್ರ ಹೊರತುಪಡಿಸಿ ಉಳಿದ 155 ಕಡೆಗಳಲ್ಲಿ 3-4 ಸಂಭಾವ್ಯ ಅಭ್ಯರ್ಥಿಗಳನ್ನು ಪಟ್ಟಿ ಮಾಡಿ, ಯಾರು ಗೆಲ್ಲಲು ಸಮರ್ಥರು ಎಂಬುದನ್ನು ಅಂತಿಮಗೊಳಿಸಿ ಹೈಕಮಾಂಡ್ ಗಮನಕ್ಕೆ ತರಲಿದ್ದಾರೆ. ಸದ್ಯದ ಸನ್ನಿವೇಶನದಲ್ಲಿ 69 ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಿದ್ದು ಅವರಿಗೆಲ್ಲ ಟಿಕೆಟ್ ಖಚಿತ ಎಂದು ಹೇಳಲಾಗುತ್ತಿದೆ. ಆದರೆ, ಈ ವಿಚಾರದಲ್ಲಿ ಪಕ್ಷದಲ್ಲಿ ಬೇರೆ ಅಭಿಪ್ರಾಯಗಳಿವೆ. ಅನುಕಂಪದ ಆಧಾರದಲ್ಲಿ ಚುನಾವಣೆ ಎದುರಿಸಿ ಗೆದ್ದವರು, ವಯೋಸಹಜ ಸಮಸ್ಯೆ ಎದುರಿಸುತ್ತಿರುವವರು, ತೀರಾ ಗೆಲ್ಲಲು ಸಾಧ್ಯವಾಗದೇ ಇರುವ 10-12 ಮಂದಿ ಬದಲು ಹೊಸ ಮುಖಗಳನ್ನು ಕಣಕ್ಕಿಳಿಸಬಹುದು ಎಂಬ ಲೆಕ್ಕಾಚಾರವೂ ಇದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ ಅವಧಿಪೂರ್ವ ಚುನಾವಣೆ ನಡೆಯದೇ ನಿಗದಿತ ಸಮಯಕ್ಕೆ ನಡೆಯುವುದಾದರೆ 2023ರ ಮಾರ್ಚ್ ಏಪ್ರಿಲ್​ನಲ್ಲಿ ಚುನಾವಣೆ ಘೋಷಣೆ ಆಗಲಿದೆ. ಹೀಗಾದಲ್ಲಿ ಅಕ್ಟೋಬರ್- ನವೆಂಬರ್ ವೇಳೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಚುನಾವಣೆ ಕಣ ಸಿದ್ಧಪಡಿಸಿಕೊಳ್ಳಲು ಅವಕಾಶ ಕೊಡುವ ಬಗ್ಗೆ ಪಕ್ಷದಲ್ಲಿ ಚಿಂತನೆ ಇದೆ.
ನಿರ್ದಿಷ್ಟ ಗಮನ:224 ಸದಸ್ಯ ಬಲದ ವಿಧಾನಸಭೆಯಲ್ಲಿ ಅಧಿಕಾರಕ್ಕೇರಲು 113 ಶಾಸಕರು ಆಯ್ಕೆಯಾಗಬೇಕಾಗುತ್ತದೆ. ಪ್ರಸ್ತುತ ಪಕ್ಷದ 69 ಶಾಸಕರಿರುವ ಕ್ಷೇತ್ರವೂ ಸೇರಿ ಪಕ್ಷ ಗೆಲ್ಲಬಹುದಾದ 150-160 ಕ್ಷೇತ್ರಗಳಿಗೆ ಹೆಚ್ಚಿನ ಗಮನ ಹಾಗೂ ಆದ್ಯತೆ ಕೊಡಲು ಉದ್ದೇಶಿಸಲಾಗಿದೆ. ಇದಿಷ್ಟು ಕ್ಷೇತ್ರಗಳಲ್ಲಿ ಸಮೀಕರಣಗಳನ್ನು ಮಾಡಲು ಒತ್ತುಕೊಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಲೇ ಅಸಮಾಧಾನ:ಡಿ.ಕೆ.ಶಿವಕುಮಾರ್ ಈಗಾಗಲೆ ರಾಜ್ಯ ಪ್ರವಾಸ ನಡೆಸುತ್ತಿದ್ದು, ಹಲವು ಕಡೆಗಳಲ್ಲಿ ಸಂಭಾವ್ಯರಿಗೆ ಕಣಕ್ಕಿಳಿಯಲು ತಯಾರಿ ಮಾಡಿಕೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆಂಬ ಬಗ್ಗೆ ಅಸಮಾಧಾನವೂ ಕೇಳಿಬಂದಿದೆ. ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡವರು ಯಾವುದೇ ಷರತ್ತಿಲ್ಲದೇ ಪಕ್ಷ ಸೇರಿದ್ದಾರೆಂದು ಹೇಳಿದರೂ, ಒಳಗೊಳಗೆ ನಿರ್ದಿಷ್ಟ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡೇ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ ಎಂಬ ಮಾತಿದೆ.
ಜೆಡಿಎಸ್ ಜತೆ ಪೈಪೋಟಿ:ಅಲ್ಪಸಂಖ್ಯಾತರನ್ನು ಗಮನದಲ್ಲಿ ಇಟ್ಟುಕೊಂಡು ಆಯ್ದ ಕ್ಷೇತ್ರಗಳಿಗೆ ಜೆಡಿಎಸ್ ಏಪ್ರಿಲ್, ಮೇನಲ್ಲಿ ಅಭ್ಯರ್ಥಿಯನ್ನು ಅಂತಿಮ ಗೊಳಿಸಬಹುದು. ಇದರಿಂದ ಕಾಂಗ್ರೆಸ್​ಗೆ ಪೆಟ್ಟಾಗಬಹುದೆಂದು ಅಂದಾಜಿಸಿಯೇ ಕಾಂಗ್ರೆಸ್ ಮುಸ್ಲಿಂ ನಾಯಕರ ತಂಡ ರಾಜ್ಯ ಪ್ರವಾಸ ನಡೆಸಿದ್ದು, ಅಲ್ಪಸಂಖ್ಯಾತರು ಹೆಚ್ಚಿರುವ ಅಥವಾ ನಿರ್ಣಾಯಕರಾಗಿರುವ ಕ್ಷೇತ್ರ ಪಕ್ಷ ಗೆಲ್ಲಬಹುದಾದ ಕ್ಷೇತ್ರಗಳ ಪಟ್ಟಿ ಮಾಡಿದ್ದಾರೆ. ಇಂತಹ ಕಡೆಗಳಲ್ಲಿ ಜೆಡಿಎಸ್​ಗೆ ನೆಲೆಯೂರಲು ಅವಕಾಶ ಕೊಡಬಾರದೆಂಬ ಲೆಕ್ಕಾಚಾರದಲ್ಲೇ ಪ್ರಯತ್ನ ನಡೆಯುತ್ತಿದೆ.
ಚುನಾವಣೆಗೆ ಕಾಂಗ್ರೆಸ್ ರೆಡಿ:ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದ್ದು, ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯದ ರಾಜಕೀಯ ಬೆಳವಣಿಗೆ, ಬಿಜೆಪಿಯ ಆಂತರಿಕ ಸಮೀಕ್ಷೆ ಗಮನಿಸಿದರೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ. ಮುಂಬರುವ ಶಿಕ್ಷಕರ ಮತ್ತು ಪದವೀಧರ ಪರಿಷತ್ ಕ್ಷೇತ್ರಗಳ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ತಿಂಗಳಾಂತ್ಯದ ಒಳಗಾಗಿ ಘೊಷಣೆ ಮಾಡಲಾಗುವುದು. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ತಿಳಿಸಿದರು.
ಮುಂಚೆಯೇ ಅಭ್ಯರ್ಥಿ ನಿಗದಿ ಏಕೆ?:ಚುನಾವಣೆ ಘೋಷಣೆಯಾದ ನಂತರ ಅಭ್ಯರ್ಥಿ ಆಯ್ಕೆ ಮಾಡಿದರೆ ಗೊಂದಲ ಸೃಷ್ಟಿಯಾಗಬಹುದು, ಅಭ್ಯರ್ಥಿಗೂ ಇಡೀ ಕ್ಷೇತ್ರವನ್ನು ಕಡಿಮೆ ಕಾಲಾವಧಿಯಲ್ಲಿ ಸುತ್ತಾಡಲು, ಓರೆಕೋರೆ ತಿದ್ದಿಕೊಳ್ಳಲು ಅವಕಾಶ ಸಿಗುವುದಿಲ್ಲ. ಒಂದೆರೆಡು ತಿಂಗಳು ಮುಂಚಿತವಾಗಿ ಹೆಸರು ಅಂತಿಮಗೊಳಿಸಿ ಬಹಿರಂಗ ವಾಗಿ ಘೋಷಿಸದೇ ಇದ್ದರೂ ಅಭ್ಯರ್ಥಿಯಾದವರು ಪಕ್ಷದ ಸಂಘಟನೆ ಜತೆ ಸೇರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಬಹುದು ಎಂಬುದು ಲೆಕ್ಕಾಚಾರ.
ನಂದಿಗಿರಿಧಾಮಕ್ಕೆ ವಿಧಿಸಿದ್ದ ವೀಕೆಂಡ್ ಕರ್ಪ್ಯೂ ತೆರವು; ಆದ್ರೆ ಈ ಷರತ್ತುಗಳು ಅನ್ವಯ!

ಪಠ್ಯದಲ್ಲಿ ‌ಭಗವದ್ಗೀತೆ; ನಾವ್ಯಾಕೆ ವಿರೋಧ ಮಾಡ್ಲಿ, ಅದು ನಮ್ಮ ಧರ್ಮ: ಡಿಕೆಶಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 12 =
Remember me
