ಬೆಂಗಳೂರು:ಅತ್ತ ಕರೊನಾ ಕೇಸ್​ಗಳನ್ನು ನಿಯಂತ್ರಣದಲ್ಲಿಡಲು ಹೈ ಅಲರ್ಟ್ ಆಗಿರುವ ಸರ್ಕಾರ, ಇನ್ನೂ 14 ದಿನಗಳ ಕಾಲ ಲಾಕ್​ಡೌನ್​ ವಿಸ್ತರಣೆ ಮಾಡಿದ್ದರೆ ಇತ್ತ ಸೋಂಕಿತರ ದೈನಂದಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಒಂದೇ ದಿನದಲ್ಲಿ ದೃಢಪಟ್ಟ ಸೋಂಕಿನ ಪ್ರಮಾಣಕ್ಕಿಂತಲೂ 20 ಸಾವಿರಕ್ಕೂ ಅಧಿಕ ಮಂದಿ ಸೋಂಕುಮುಕ್ತರಾಗಿ ಬಿಡುಗಡೆ ಆಗಿದ್ದಾರೆ.
ಇಂದಿನ ಕೋವಿಡ್-19 ಬುಲೆಟಿನ್ ಪ್ರಕಾರ ಒಂದೇ ದಿನದಲ್ಲಿ ಅಂದರೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 52,581 ಮಂದಿ ಗುಣಮುಖರಾಗಿ ವಿವಿಧ ಕೋವಿಡ್​ ಆಸ್ಪತ್ರೆ ಹಾಗೂ ಆರೈಕೆ ಕೇಂದ್ರಗಳಿಂದ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣವಾದವರ ಸಂಖ್ಯೆ 18,29,276ಕ್ಕೆ ತಲುಪಿದೆ.
ಇದನ್ನೂ ಓದಿ:ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
ಇನ್ನೊಂದೆಡೆ ರಾಜ್ಯದಲ್ಲಿ ಒಂದೇ ದಿನದಲ್ಲಿ ಹೊಸದಾಗಿ 32,218 ಕೋವಿಡ್​-19 ಪ್ರಕರಣಗಳು ದೃಢಪಟ್ಟಿದ್ದು, ಇದುವರೆಗಿನ ಕೋವಿಡ್​ ಸೋಂಕಿತರ ಸಂಖ್ಯೆ 23,67,742ಕ್ಕೆ ಏರಿದೆ. ಆದರೆ ಸದ್ಯ ಸಕ್ರಿಯ ಪ್ರಕರಣಗಳು 5,14,238 ಮಾತ್ರ ಇವೆ.ಬೇಸರದ ಸಂಗತಿ ಎಂದರೆ ಒಂದೇ ದಿನದಲ್ಲಿ 353 ಮಂದಿ ಕೋವಿಡ್​-ಸೋಂಕಿನಿಂದಾಗಿ ಮೃತಪಟ್ಟಿದ್ದು, ರಾಜ್ಯದಲ್ಲಿ ಇದುವರೆಗೆ ಕರೊನಾಗೆ ಬಲಿಯಾದವರ ಸಂಖ್ಯೆ 24,207ಕ್ಕೆ ತಲುಪಿದೆ.
ರಾಜ್ಯದಲ್ಲಿ ಮತ್ತೆ 14 ದಿನ ಲಾಕ್​ಡೌನ್; ಜೂ. 7ರ ಬೆಳಗ್ಗೆ 6ರವರೆಗೂ ಕಠಿಣ ರೂಲ್ಸ್

ರಾಜ್ಯದಲ್ಲಿ ಎರಡು ದಿನ ವ್ಯಾಪಕ ಮಳೆ, 13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + sixteen =
Remember me
