ಬೆಂಗಳೂರು:ರಾಜ್ಯದಲ್ಲಿ ಕರೊನಾದ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದೆ. ಆದರೆ ಅನ್​ಲಾಕ್​ ಹಿನ್ನೆಲೆಯಲ್ಲಿ ಕರೊನಾ ನಿಯಮಗಳನ್ನೇ ಮರೆತ ಜನರು ಮಾಸ್ಕ್​, ದೈಹಿಕ ಅಂತರವಿಲ್ಲದೆ ಅಲೆದಾಡಲು ಆರಂಭಿಸಿದ್ದು, ಸೋಂಕು ಮತ್ತೆ ಹೆಚ್ಚುವ ಆತಂಕವೂ ಹೆಚ್ಚಾಗಿದೆ. ನಿನ್ನೆ ಪತ್ತೆಯಾದ ಸೋಂಕಿತರಿಗಿಂತ ಇಂದು ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇಂದು ರಾಜ್ಯದಲ್ಲಿ 1,913 ಜನರಲ್ಲಿ ಕರೊನಾ ಸೋಂಕು ದೃಢವಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 28,74,597ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 48 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 35,944ಕ್ಕೆ ಹೆಚ್ಚಳವಾಗಿದೆ. 2,489 ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ 28,04,396 ಸೋಂಕಿತರು ಗುಣಮುಖವಾದಂತಾಗಿದೆ. ಸದ್ಯ 34,234 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಇಂದಿನ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.53ರಷ್ಟಿದ್ದರೆ ಮರಣ ಪ್ರಮಾಣ 2.5ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದಿನ 13/07/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/yOcKntkn0G@CMofKarnataka@mla_sudhakar@drashwathcn@GovindKarjol@LaxmanSavadi@BBMPCOMM@DC_Dharwad@DCKodagu@dcudupi@DCDK9@mysurucitycorp@mangalurucorp@CEOUdupipic.twitter.com/X3nxpNGbJc
— K'taka Health Dept (@DHFWKA)July 13, 2021

ಬೆಂಗಳೂರಿನಲ್ಲಿ ಸೋಂಕು ಏರುಮುಖ ಕಂಡಿದ್ದು, 401 ಪ್ರಕರಣ ದೃಢವಾಗಿದೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ 222, ಮೈಸೂರಿನಲ್ಲಿ 198, ಹಾಸನದಲ್ಲಿ 191, ತುಮಕೂರಿನಲ್ಲಿ 170 ಪ್ರಕರಣಗಳು ಕಾಣಿಸಿಕೊಂಡಿವೆ. ಯಾದಗಿರಿಯಲ್ಲಿ ಒಂದೂ ಪ್ರಕರಣ ಪತ್ತೆಯಾಗಿಲ್ಲ. ಬಾಗಲಕೋಟೆ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಸೋಂಕಿತರ ಸಂಖ್ಯೆ ಒಂದಂಕಿಯಲ್ಲಿದೆ. ಬೆಂಗಳೂರಿನಲ್ಲಿ 1,267 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. (ಏಜೆನ್ಸೀಸ್)
ಕರೊನಾ ಲಸಿಕೆಯ ಎರಡೂ ಡೋಸ್ ಆಯ್ತು, ಇನ್ನೂ ಮಾಸ್ಕ್ ಹಾಕಿಕೊಳ್ಳಬೇಕಾ? ನಿಮ್ಮೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ

‘ಮೂರನೇ ಅಲೆ ಎಚ್ಚರಿಕೆ ಹವಾಮಾನ ವರದಿಯಂತೆ ಎಂದುಕೊಂಡಿದ್ದಾರೆ’ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ

ಎರಡೇ ದಿನಗಳಲ್ಲಿ 50 ಬಾರಿ ಟ್ರಾಫಿಕ್ ನಿಯಮ ಮುರಿದ ಕಾರು! ಡ್ರೈವರ್​ ಸಿಕ್ಕಾಗ ಬಯಲಾಗಿದ್ದು ಬೇರೆಯದ್ದೇ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + eighteen =
Remember me
