ಬೆಂಗಳೂರು:ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ (ಏಪ್ರಿಲ್ 25) 34,804 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ದಿನದ ಸೋಂಕು ಪ್ರಮಾಣ ದರ ಶೇ. 19.70 ತಲುಪಿದೆ.
ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 2.62 ಲಕ್ಷ ದಾಟಿದೆ. ಒಂದೆಡೆ ಸೋಂಕು ಏರಿಕೆಯಾಗುತ್ತಿದ್ದು, ಮತ್ತೊಂದೆಡೆ ಆಸ್ಪತ್ರೆಯಿಂದ ಬಿಡುಗಡೆ ಆಗುವವರ ಸಂಖ್ಯೆ ಕಡಿಮೆ ಇರುವುದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಸೋಂಕಿತ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಸ್ಥಿತಿ ಮುಂದುವರೆದಿದೆ.
ಸದ್ಯ 2,62,162 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 1,492 ಮಂದಿ ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ನಾನಾ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಹುತೇಕರು ಹಾಸಿಗೆ ಸಿಗದೆ ಪರದಾಡುತ್ತಿದ್ದಾರೆ. ಉಳಿದಂತೆ ಲಕ್ಷಣ ರಹಿತ ಸೋಂಕಿತರು ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. 6,982 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 10.62 ಲಕ್ಷ ದಾಟಿದೆ. ಆದರೆ ಸೋಂಕು ಏರಿಕೆಯಿಂದಾಗಿ ಈವರೆಗಿನ ಸೋಂಕಿತರ ಸಂಖ್ಯೆ 13.39 ಲಕ್ದ ಮೀರಿದೆ.
ಇದನ್ನೂ ಓದಿ:ರೆಮ್​ಡಿಸಿವಿರ್ ಬಗ್ಗೆ ಆಘಾತಕಾರಿ ಅಂಶವನ್ನು ಬಿಚ್ಚಿಟ್ಟ ಏಮ್ಸ್​ ವೈದ್ಯ!
ಸೋಂಕಿಗೆ 143 ಮಂದಿ ಬಲಿ: ಭಾನುವಾರ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 143 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 14,426ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 77, ಬಳ್ಳಾರಿಯಲ್ಲಿ 16, ಮೈಸೂರು 9, ಕಲಬುರಗಿ 7, ಧಾರವಾಡ ಮತ್ತು ತುಮಕೂರು, 6, ಹಾಸನ 4, ಮಂಡ್ಯ 3, ಹಾವೇರಿ, ಕೋಲಾರ, ಬೀದರ್ 2, ಚಾಮರಾಜನಗರ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ರಾಯಚೂರು, ಶಿವಮೊಗ್ಗ, ಉತ್ತರ ಕನ್ನಡ ತಲಾ ಒಂದರಂತೆ ಒಂದೇ ದಿನ 143 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಮೂರು ಜಿಲ್ಲೆಗಳಲ್ಲಿ ನಾಲ್ಕಂಕಿ ದಾಟಿದ ಸೋಂಕು: ಬೆಂಗಳೂರು ನಗರದಲ್ಲಿ ಅತೀ ಹೆಚ್ಚು 20,733 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ತುಮಕೂರು 1,153, ಕೊಡಗು 1,077 ಸೋಂಕು ಪ್ರಕರಣಗಳೊಂದಿಗೆ ಈ ಮೂರು ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ನಾಲ್ಕಂಕಿ ದಾಟಿದೆ. ಬೆಂಗಳೂರು ಗ್ರಾಮಾಂತರ 864, ಮಂಡ್ಯ 814, ಕೋಲಾರ 782, ಹಾಸನ 768, ಬಳ್ಳಾರಿ 732, ಮೈಸೂರು 700, ರಾಯಚೂರು 643, ಕಲಬುರಗಿ 626, ದಕ್ಷಿಣ ಕನ್ನಡ 564, ಧಾರವಾಡ 546 ಸೇರಿದಂತೆ ಕಳೆದ 24 ಗಂಟೆಯಲ್ಲಿ 34,804 ಸೋಂಕು ಪ್ರಕರಣಗಳು ದೃಢಪಟ್ಟಿವೆ.
ಕರೊನಾ ರೋಗಿಗಾಗಿ ಮದುವೆ ಮಂಟಪವಾದ ಆಸ್ಪತ್ರೆ… ಪಿಪಿಇ ಕಿಟ್​ನಲ್ಲಿ ವಧು !

ಕರೊನಾ: ‘ಹೆದರಬೇಡಿ, ನಾವು ನಿಮ್ಮೊಂದಿಗಿದ್ದೇವೆ’ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ ಅಮೆರಿಕ ರಾಯಭಾರ ಕಚೇರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + fourteen =
Remember me
