ಬೆಂಗಳೂರು:ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಬೌಲರ್, ಕರ್ನಾಟಕ ರಣಜಿ ತಂಡದ ಕ್ರಿಕೆಟಿಗ ಕೆಸಿ ಕಾರಿಯಪ್ಪ ತನ್ನ ಮಾಜಿ ಪ್ರೇಯಸಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.  ಕೆಸಿ ಕಾರಿಯಪ್ಪ ಹಾಗೂ ಮಾಜಿ ಪ್ರಿಯತಮೆಯಿಂದ ಪ್ರತ್ಯೇಕ ದೂರು ದಾಖಲಾಗಿದೆ.
ಕಾರಿಯಪ್ಪ ಬಗಲಗುಂಟೆ ಮತ್ತು ಮಾಜಿ ಪ್ರಿಯತಮೆ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಎರಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯ ಆರೋಪ:ನನಗೆ 2018ರಲ್ಲಿ ಮದುವೆಯಾಗಿದ್ದು, 2020ರಲ್ಲಿ ಡಿವೋರ್ಸ್ ಆಗಿರುತ್ತದೆ. ಒಂದೂವರೆ ವರ್ಷದ ಹಿಂದೆ ಕಾರಿಯಪ್ಪ ಪರಿಚಯವಾಯ್ತು. ಇಬ್ಬರೂ ಪರಸ್ಪರ ಒಪ್ಪಿಕೊಂಡು ದೈಹಿಕ ಸಂಪರ್ಕ ಬೆಳಿಸಿ ನಂತರ ಗರ್ಭಪಾತವಾಯ್ತು. ಈ ಸಂಬಂಧ ದೂರು ದಾಖಲಾಗಿತ್ತು. ನಂತರ ಆರೋಪಿ ಮನವಿ ಮೇರೆಗೆ ದೂರು ಹಿಂಪಡೆಯಲಾಗಿತ್ತು. ಮದುವೆಯಾಗೋಣ ಎಂದು ಹೇಳಿ ಕಾರಿಯಪ್ಪ ನನ್ನ ಬಳಿ 2 ಲಕ್ಷ ರೂಪಾಯಿ ಪಡೆದುಕೊಂಡಿರುತ್ತಾರೆ. ನಂತರ ಆರೋಪಿ ಪೋಷಕರು ಮದುವೆಗೆ ವಿರೋಧಿಸುತ್ತಾರೆ. ಇದಾದ ಬಳಿಕ ಕಾರಿಯಪ್ಪ ಸಹ ಮದುವೆಯಾಗಲ್ಲ, ನಾನು ಹಣ ಪಡೆದುಕೊಂಡಿಲ್ಲ ಎಂದು ಹಲ್ಲೆಗೈದು ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಹಾಕಲಾಗಿದೆ ಎಂದು ಯುವತಿ ಹೇಳಿದ್ದಾರೆ. ಈ ಕುರಿತಾಗಿ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕೆಸಿ ಕಾರಿಯಪ್ಪ ದಾಖಲಿಸಿದ ದೂರು:ನಿನ್ನೆ ಕ್ರಿಕೆಟ್ ವೃತ್ತಿಜೀವನವನ್ನು ಹಾಳು ಮಾಡುತ್ತೇನೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ. ನಿನ್ನ ಬಗ್ಗೆ ಕೆಟ್ಟದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹಾಕುತ್ತೇನೆ. ಆನ್​ಲೈನ್​ನಲ್ಲಿ ಚಾಕು ತೊರಿಸಿಕೊಂಡು ಬೆದರಿಕೆ ಹಾಕಲಾಗಿದೆ. ಮಾನಸಿಕ ಹಿಂಸೆ ನೀಡುತ್ತಿದ್ದಾಳೆಂದು ಕಾರಿಯಪ್ಪ ಆರೋಪಗಳನ್ನು ಮಾಡಿದ್ದಾರೆ. ಈ ಕುರಿತಾಗಿ ಕಾರಿಯಪ್ಪ ಬಗಲಗುಂಟೆ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮದುವೆಯಾಗುವುದಾಗಿ  ವಂಚಿಸಿದ್ದಾರೆ ಎಂದು ಕಾರಿಯಪ್ಪ ವಿರುದ್ಧ ಯುವತಿ ದೂರು ದಾಖಲಿಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಬ್ರೇಕ್ ಅಪ್ ಮಾಡಿಕೊಂಡಿದ್ದೇನೆ ಎಂದು ಕಾರಿಯಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶ್ರೀರಾಮನಿಗಾಗಿ ಬರಿಗಾಲಲ್ಲಿ ಅಯೋಧ್ಯೆಗೆ ಹೊರಟ ಮುಸ್ಲಿಂ ಯುವತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + 10 =
Remember me
