ಬೆಂಗಳೂರು: ಕರೊನಾ ಸೋಂಕು ತಡೆಯುವ ಸಲುವಾಗಿ ಲಾಕ್​ಡೌನ್ ಘೋಷಣೆ ಆಗಿದ್ದಾಗ್ಯೂ, ಅನೇಕರು ಅದನ್ನು ಉಲ್ಲಂಘಿಸಿ ಬೀದಿಗಿಳಿಯುತ್ತಿರುವುದು ನಡೆದೇ ಇದೆ. ಏಪ್ರಿಲ್ 14ರ ತನಕ ಲಾಕ್​ಡೌನ್ ಚಾಲ್ತಿಯಲ್ಲಿ ಇದ್ದು, ಕರೊನಾ ಸೋಂಕುಪೀಡಿತರ ಸಂಖ್ಯೆ ಹೆಚ್ಚುತ್ತಿರುವಂತೆಯೇ ದಿನೇದಿನೇ ಇದರ ಅನುಷ್ಠಾನವೂ ಬಿಗಿಯಾಗುತ್ತಿದೆ.
ಸುಖಾ ಸುಮ್ಮನೆ ರಸ್ತೆಗೆ ಇಳಿಯಬೇಡಿ ಎಂಬ ಮುನ್ನೆಚ್ಚರಿಕೆಯನ್ನು ನೀಡಿರುವ ಪೊಲೀಸರು ಜನಜಾಗೃತಿಗಾಗಿ ಅನೇಕ ರೀತಿಯ ಸಂವಹನ ಪ್ರಕ್ರಿಯೆಗೂ ಚಾಲನೆ ನೀಡಿದ್ದರು. ಬೀದಿಗಿಳಿದವರನ್ನು ಹೊಡೆಯದೇ ಬಸ್ಕಿ ಹೊಡೆಯಲು ಹೇಳಿ, ಅವರಿಗೆ ಹಾರ ಹಾಕಿ, ಆರತಿ ಎತ್ತಿ ಅವಮಾನ ಮಾಡುವುದು, ಕರೊನಾ ವೈರಸ್ ಮಾದರಿಯ ಹೆಲ್ಮೆಟ್ ತಲೆಗೆ ಇಟ್ಟು ಪರಿಸ್ಥಿತಿಯ ಗಾಂಭೀರ್ಯವನ್ನು ತಿಳಿಸುವ ಪ್ರಯತ್ನಮಾಡಿದ್ದರು.
ಲಾಕ್​ಡೌನ್ ನಿಯಮಗಳನ್ನು ನಾವು ಎಷ್ಟು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎಂಬುದರ ಮೇಲೆ ಮುಂದುವರಿಸಬೇಕೇ ಬೇಡವೇ ಎಂಬುದನ್ನೂ ತೀರ್ಮಾನಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದೂ ಆಗಿದೆ. ಈ ಎಲ್ಲ ಪ್ರಯತ್ನಗಳ ಬಳಿಕ ಏಪ್ರಿಲ್ ಒಂದರಂದು ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಇದರ ಪ್ರಕಾರ, ಲಾಕ್​ಡೌನ್ ನಿಯಮಗಳನ್ನು ಉಲ್ಲಂಘಿಸಿ ದ್ವಿಚಕ್ರವಾಹನವೇರಿ ಅಥವಾ ಕಾರು, ಜೀಪು, ಎಸ್​ಯುವಿಗಳನ್ನೇರಿ ಬೀದಿಗೆ ಇಳಿದರೆ ಅಂಥ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಸಿದ್ದಾರೆ.
ಬಕ್ಕತಲೆ ನೋಡಿ ನಲವತ್ತು ವರ್ಷದವನೋ, ಅರವತ್ತು ವರ್ಷದವನೋ ಅಂದ್ಕೋಬೇಡಿ- ಆತ ಬಾಲಕ!- ಅಪ್ಪ ಕೊಟ್ಟ ಶಿಕ್ಷೆ ಹೀಗಿತ್ತು ನೋಡಿ..

This is not an April Fool's prank. Two/ four wheelers are banned from use till the 14th of April. We will SEIZE your vehicle if you CEASE to ignore this lockdown regulation.
— Praveen Sood (@Copsview)April 1, 2020

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine − five =
Remember me
