ಬೆಂಗಳೂರು:ಹತ್ತು ವರ್ಷ ಬಳಿಕ ಸ್ಪಷ್ಟ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೇರಿರುವ ಕಾಂಗ್ರೆಸ್ ಮುಂದಿನ ವಾರ ಹೊಸ ಸರ್ಕಾರ ರಚನೆ ಮಾಡಲಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ.
ಜಿದ್ದಾಜಿದ್ದಿಯ ಹೋರಾಟದ ಕಣವಾಗಿದ್ದ ರಾಜ್ಯದಲ್ಲಿ ಎಲ್ಲ ನಿರೀಕ್ಷೆಗಳನ್ನು ಸುಳ್ಳಾಗಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುತ್ತಿದ್ದು, ಹೊಸ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಬುಧವಾರ ಅಥವಾ ಗುರುವಾರ ಅಧಿಕಾರದ ಪ್ರಮಾಣವಚನ ಸ್ವೀಕರಿಸುವ ಎಲ್ಲ ಸಾಧ್ಯತೆಗಳಿವೆ. ತಡ ಮಾಡುವುದಕ್ಕೆ ಯಾವುದೇ ಕಾರಣಗಳು ಇಲ್ಲ.
ಇಂದು ಶಾಸಕಾಂಗ ಸಭೆ:ಗೆದ್ದಿರುವ ಎಲ್ಲ ಶಾಸಕರಿಗೆ ಭಾನುವಾರ ಬೆಂಗಳೂರಿಗೆ ಬರಲು ಸೂಚನೆ ನೀಡಲಾಗಿದೆ. ಸಂಜೆ 6ಕ್ಕೆ ಶಾಸಕಾಂಗ ಪಕ್ಷದ ಸಭೆಯನ್ನು ಖಾಸಗಿ ಹೋಟೆಲ್​ನಲ್ಲಿ ಕರೆಯಲಾಗಿದೆ. ಅಲ್ಲಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಯ ಹೊಣೆಯನ್ನು ಹೈಕಮಾಂಡ್ ವಿವೇಚನೆಗೆ ಬಿಡುವ ಸಾಧ್ಯತೆಗಳಿವೆ. ಹೈಕಮಾಂಡ್ ಶಾಸಕರ ಅಭಿಪ್ರಾಯ ಪಡೆಯುವಂತೆ ಸೂಚಿಸಿದರೆ ಮತಕ್ಕೆ ಹಾಕಲಾಗುತ್ತದೆ. ಆ ನಂತರ ಆಯ್ಕೆ ಪ್ರಕಟಿಸಲಾಗುತ್ತದೆ. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯ ನಂತರ ರಾಜ್ಯಪಾಲರ ಬಳಿಯಲ್ಲಿ ಹಕ್ಕು ಮಂಡಿಸಿ ಬುಧವಾರ ಅಥವಾ ಗುರುವಾರ ಪ್ರಮಾಣವಚನ ಆಗುವ ನಿರೀಕ್ಷೆ ಇದೆ.
ಎಷ್ಟು ಜನ ಸಂಪುಟಕ್ಕೆ?:ಸದ್ಯಕ್ಕೆ ಲಭ್ಯ ಮಾಹಿತಿಯ ಪ್ರಕಾರ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಾತ್ರ ಮೊದಲಿಗೆ ಪ್ರಮಾಣ ಸ್ವೀಕರಿಸಲಿದ್ದಾರೆ. ಆ ನಂತರ ಕೆಲವು ದಿನ ಬಿಟ್ಟು ದೆಹಲಿಗೆ ಹೋಗಿ ಹೈಕಮಾಂಡ್ ಜತೆ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಮಾಡಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ. ಹೈಕಮಾಂಡ್ ಒಪ್ಪಿದರೆ ಒಂದೇ ಬಾರಿಗೆ 32 ಜನರನ್ನು ಸಂಪುಟಕ್ಕೆ ಸೇರಿಸಲಾಗುತ್ತದೆ. ಇಲ್ಲದಿದ್ದರೆ ಎರಡು ಕಂತುಗಳಲ್ಲಿ ಸಂಪುಟ ವಿಸ್ತರಣೆಯ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಫಲಿತಾಂಶ ಬರುತ್ತಿದ್ದಂತೆ ಬೆಂಗಳೂರಿನ ಕಾಂಗ್ರೆಸ್ ವಲಯದಲ್ಲಿ ಬಿರುಸಿನ ಚುಟವಟಿಕೆಗಳು ನಡೆದವು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿಯೇ ಇದ್ದಾರೆ. ಅವರನ್ನು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಇತರರು ಭೇಟಿ ಮಾಡಿ ಚರ್ಚೆ ನಡೆಸಿದರು. ಮೈಸೂರಿನಿಂದ ತಡವಾಗಿ ಆಗಮಿಸಿದ ಸಿದ್ದರಾಮಯ್ಯ ಸೇರಿದಂತೆ ಇತರೆ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
* ಮುಖ್ಯಮಂತ್ರಿ: ಸಿದ್ದರಾಮಯ್ಯ* ಉಪ ಮುಖ್ಯಮಂತ್ರಿ: ಡಿ.ಕೆ. ಶಿವಕುಮಾರ್* ಸ್ಪೀಕರ್: ಟಿ.ಬಿ. ಜಯಚಂದ್ರ/ಎನ್.ವೈ. ಗೋಪಾಲಕೃಷ್ಣ* ಪ್ರತಿಪಕ್ಷದ ನಾಯಕ: ಬಸವರಾಜ ಬೊಮ್ಮಾಯಿ
ಬಿ.ಕೆ. ಹರಿಪ್ರಸಾದ್ ಕೆ.ಎಚ್. ಮುನಿಯಪ್ಪ ಆರ್.ವಿ. ದೇಶಪಾಂಡೆ ಯು.ಟಿ. ಖಾದರ್ ಎಂ.ಬಿ.ಪಾಟೀಲ್ ರಾಮಲಿಂಗಾರೆಡ್ಡಿ ಕೃಷ್ಣ ಬೈರೇಗೌಡ ಕೆ.ಜೆ. ಜಾರ್ಜ್ ಎಚ್.ಸಿ. ಮಹದೇವಪ್ಪ ಲಕ್ಷ್ಮಣ ಸವದಿ ಶಿವಲಿಂಗೇಗೌಡ ಚಲುವರಾಯಸ್ವಾಮಿ ಡಾ. ಜಿ. ಪರಮೇಶ್ವರ್ ಪ್ರಿಯಾಂಕ್ ಖರ್ಗೆ ಸತೀಶ್ ಜಾರಕಿಹೊಳಿ ಎಚ್.ಕೆ. ಪಾಟೀಲ್ ಲಕ್ಷ್ಮೀ ಹೆಬ್ಬಾಳ್ಕರ್ ಎಚ್.ವೈ, ಮೇಟಿ ಅಬ್ಬಯ್ಯ ಪ್ರಸಾದ್ ನಾಗೇಂದ್ರ ಎಸ್.ಎಸ್. ಮಲ್ಲಿಕಾರ್ಜುನ್ ಕೊತ್ತೂರು ಮಂಜುನಾಥ್ ನರೇಂದ್ರ ಸ್ವಾಮಿ ತಿಮ್ಮಾಪುರ.
* ಭಾನುವಾರ ಸಂಜೆ ಶಾಸಕಾಂಗ ಪಕ್ಷದ ಸಭೆ* ನಾಯಕನ ಆಯ್ಕೆಯ ನಂತರ ರಾಜ್ಯಪಾಲರ ಭೇಟಿ* ಪ್ರಮಾಣವಚನಕ್ಕೆ ದಿನಾಂಕ ನಿಗದಿ* ಪ್ರಮಾಣವಚನ ಸ್ವೀಕಾರ* ಮೊದಲ ಸಂಪುಟದಲ್ಲಿ ಗ್ಯಾರಂಟಿಗಳ ನಿರ್ಧಾರ* ನಂತರ ಅಧಿವೇಶನಕ್ಕೆ ದಿನಾಂಕ ನಿಗದಿ* ಅಧಿವೇಶನದಲ್ಲಿ ಪ್ರಮಾಣವಚನ, ಸ್ಪೀಕರ್ ಆಯ್ಕೆ* ಕೆಲ ದಿನಗಳ ಬಳಿಕ ಮತ್ತೆ ಅಧಿವೇಶನ, ರಾಜ್ಯಪಾಲರ ಭಾಷಣ, ಹೊಸ ಬಜೆಟ್ ಮಂಡನೆ
* ಯಡಿಯೂರಪ್ಪರನ್ನು ಹೀನಾಯವಾಗಿ ಕೆಳಗಿಳಿಸಿದ್ದು* ಸರ್ಕಾರದ ಸಾಧನೆ ಹೇಳಿಕೊಳ್ಳದೇ ಇರುವುದು* ರಾಜ್ಯ ನಾಯಕತ್ವವನ್ನು ಮೂಲೆಗುಂಪು ಮಾಡಿದ್ದು* ಪೂರ್ತಿ ಜವಾಬ್ದಾರಿಯನ್ನು ಮೋದಿ ಹಾಗೂ ಷಾ ಹೊತ್ತಿದ್ದು* ಅತಿಯಾದ ಹಿಂದುತ್ವದ ವಿಚಾರಗಳನ್ನು ಎಳೆದು ತಂದಿದ್ದು* ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಹಿಂದುಳಿದಿದ್ದು* ಮೀಸಲಾತಿಯ ಪರಿಣಾಮ ಗುರುತಿಸದೇ ಹೋಗಿದ್ದು* ಮಂತ್ರಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಕ್ಷೇತ್ರಕ್ಕೆ ಸೀಮಿತವಾಗಿದ್ದು
* ಜನ ಸೇರಿದರೂ ಮತವಾಗಿ ಪರಿವರ್ತಿಸಿಕೊಳ್ಳಲು ವಿಫಲ* ಕುಟುಂಬದ ಪಕ್ಷ ಹಣೆಪಟ್ಟಿಯಿಂದ ಹೊರ ಬಾರದೇ ಇರುವುದು* ಕುಮಾರಸ್ವಾಮಿಗೆ ನಾಯಕತ್ವದ ಗುಣ ಇಲ್ಲದೇ ಇರುವುದು* ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದ ನೋಡುವುದು
* ರಾಹುಲ್ ನಡೆಸಿದ ಭಾರತ್ ಜೋಡೋ ಯಾತ್ರೆ* ಕಾಂಗ್ರೆಸ್ ಕೊಟ್ಟ ಆರು ಗ್ಯಾರಂಟಿಗಳು* ಸರ್ಕಾರದ ವಿರುದ್ಧ ಅಲೆ ಸೃಷ್ಟಿಸಿದ್ದು* ಮೇಕೆದಾಟು ಪಾದಯಾತ್ರೆ, ಸ್ವಾತಂತ್ರ್ಯ ನಡಿಗೆ* ಬೆಲೆ ಏರಿಕೆ ವಿರುದ್ಧ ಹೋರಾಟ* ಶೇ.40 ಪರ್ಸೆಂಟ್, ಪೇಸಿಎಂಗಳನ್ನು ಜನರ ಮನಸ್ಸಿನಲ್ಲಿ ಬಿತ್ತಿದ್ದು
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್​ಗೆ ಅಭಿನಂದನೆಗಳು, ಜನತೆ ಆಶೋತ್ತರಗಳನ್ನು ಈಡೇರಿಸುವಲ್ಲಿ ಅವರಿಗೆ ಶುಭವಾಗಲಿದೆ. ನಮ್ಮನ್ನು ಬೆಂಬಲಿಸಿದವರಿಗೂ ಕೃತಜ್ಞತೆ ಸಲ್ಲಿಸುವೆ. ಬಿಜೆಪಿ ಕಾರ್ಯಕರ್ತರ ಪರಿಶ್ರಮ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಹುರುಪಿನಿಂದ ಕರ್ನಾಟಕಕ್ಕೆ ಸೇವೆ ಸಲ್ಲಿಸುತ್ತೇವೆ.
| ನರೇಂದ್ರ ಮೋದಿ ಪ್ರಧಾನಿ
ಕರ್ನಾಟಕದ ಜನರು ದ್ವೇಷದ ಮಾರುಕಟ್ಟೆಯನ್ನು ಮುಚ್ಚಿ, ಪ್ರೀತಿ-ಪ್ರೇಮದ ಅಂಗಡಿ ತೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು, ರಾಜ್ಯದ ಜನತೆಗೆ ನನ್ನ ಧನ್ಯವಾದಗಳು. ನಾವು ದ್ವೇಷ ಅಥವಾ ಕೆಟ್ಟ ಭಾಷೆ ಬಳಸದೆ ಚುನಾವಣೆ ಎದುರಿಸಿದೆವು. ರಾಜ್ಯದಲ್ಲಿ ಒಂದು ಕಡೆ ಬಂಡವಾಳಶಾಹಿಗಳ ಬಲವಿದ್ದರೆ, ಮತ್ತೊಂದು ಕಡೆ ಬಡ ಜನರ ಶಕ್ತಿಯಿತ್ತು. ಬಡವರ ಶಕ್ತಿಯೇ ಬಂಡವಾಳಶಾಹಿಗಳ ಪ್ರಭಾವವನ್ನು ನೆಲಕಚ್ಚುವಂತೆ ಮಾಡಿದೆ
| ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ಈ ಫಲಿತಾಂಶ ಬಿಜೆಪಿಯ ಕೋಮುವಾದ, ಭ್ರಷ್ಟಾಚಾರ, ದುರಾಡಳಿತದ ವಿರುದ್ಧದ ಫಲಿತಾಂಶ. ಇದು ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ, ಇದು ಕರ್ನಾಟಕದ ಗೆಲುವು. ಕನ್ನಡಿಗರ ಗೆಲುವು, ಪ್ರಜಾಪ್ರಭುತ್ವದ ಗೆಲುವು.
| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ
ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಹಿಡಿದಿದ್ದ ಗ್ರಹಣ ಬಿಟ್ಟಿದೆ. ಜನರ ಕಣ್ಣೀರು ಒರೆಸಲಾಗಿದೆ. ಜನರ ಮುಖದಲ್ಲಿ ನಗು ಅರಳುತ್ತಿದೆ. ಈ ಗ್ರಹಣ ಬಿಡಿಸಿದ ರಾಜ್ಯದ ಜನತೆಗೆ ಕಾಂಗ್ರೆಸ್ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
* ಶ್ರೀರಾಮುಲು (ಬಳ್ಳಾರಿ ಗ್ರಾಮೀಣ)* ನಾರಾಯಣ ಗೌಡ (ಕೆ.ಆರ್.ಪೇಟೆ)* ಜೆ.ಸಿ. ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ)* ಗೋವಿಂದ ಕಾರಜೋಳ (ಮುಧೋಳ)* ಮುರುಗೇಶ್ ನಿರಾಣಿ (ಬೀಳಗಿ)* ವಿ. ಸೋಮಣ್ಣ (ವರುಣಾ/ಚಾ.ನಗರ)* ಬಿ.ಸಿ. ಪಾಟೀಲ್ (ಹಿರೇಕೆರೂರು)* ಶಂಕರ ಪಾಟೀಲ (ನವಲಗುಂದ)* ಎಂಟಿಬಿ ನಾಗರಾಜ (ಹೊಸಕೋಟೆ)* ಬಿ.ಸಿ. ನಾಗೇಶ್ (ತಿಪಟೂರು)* ಹಾಲಪ್ಪ ಆಚಾರ್ (ಯಲಬುರ್ಗ)* ಡಾ.ಕೆ. ಸುಧಾಕರ್ (ಚಿಕ್ಕಬಳ್ಳಾಪುರ)
* ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ)* ಸಿದ್ದರಾಮಯ್ಯ (ವರಣ)* ಡಿ.ಕೆ. ಶಿವಕುಮಾರ್ (ಕನಕಪುರ)* ಕೃಷ್ಣಬೈರೇಗೌಡ (ಬ್ಯಾಟರಾಯನಪುರ)* ಲಕ್ಷ್ಮಣ ಸವದಿ (ಅಥಣಿ)* ರಮೇಶ್ ಜಾರಕಿಹೊಳಿ (ಗೋಕಾಕ್)* ಸತೀಶ್ ಜಾರಕಿಹೊಳಿ (ಯಮಕನಮರಡಿ)* ಶಾಮನೂರು ಶಿವಶಂಕರಪ್ಪ (ದಾ.ದಕ್ಷಿಣ)
* ಪ್ರದೀಪ್ ಈಶ್ವರ್ (ಚಿಕ್ಕಬಳ್ಳಾಪುರ)* ಎಚ್.ಡಿ. ತಮ್ಮಯ್ಯ (ಚಿಕ್ಕಮಗಳೂರು)
ಬಿಜೆಪಿ ಹಿನ್ನಡೆಗೆ ಅ’ಸಂತೋಷ’

ರಾಷ್ಟ್ರ ರಾಜಕಾರಣಕ್ಕೆ ಸಂದೇಶ ಕೊಟ್ಟ ಫಲಿತಾಂಶ; ಸಕಾರಾತ್ಮಕ ಗೆಲುವು ಸಾಧಿಸಿದ ಕಾಂಗ್ರೆಸ್ | ಮೋದಿvsಸಿದ್ದು ಎಂಬಂತೆ ನಡೆದ ಚುನಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
