ಬೆಂಗಳೂರು:ಕರ್ನಾಟಕದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ವಿಧಾನಸಭಾ ಚುನಾವಣೆಯ ಮತದಾನ ಇಂದು ಆರಂಭವಾಗಿದೆ. ಬೆಳಗ್ಗೆ 7 ಗಂಟೆಗೆ ರಾಜ್ಯಾದ್ಯಂತ ಮತದಾನ ಆರಂಭವಾಗಿದ್ದು, ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಲು ಮತಗಟ್ಟೆಯ ಬಳಿ ಆಗಮಿಸುತ್ತಿದ್ದಾರೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಚುನಾವಣಾ ಆಯೋಗ ಸಾಕಷ್ಟು ಪ್ರಯತ್ನ ನಡೆಸಿದ್ದು, ಎಲ್ಲರು ತಪ್ಪದೇ ಮತದಾನ ಮಾಡುವಂತೆ ಕರೆ ಕೊಟ್ಟಿದೆ. ಸುಭದ್ರ ಕರ್ನಾಟಕಕ್ಕಾಗಿ ಮತದಾನ ಮಾಡುವುದು ನಮ್ಮ ಕರ್ತವ್ಯ ಸಹ ಆಗಿದೆ. ಹೀಗಾಗಿ ಎಲ್ಲರೂ ತಪ್ಪದೆ ಮತದಾನ ಮಾಡಿ ಎಂಬುದು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ಮನವಿ ಸಹ ಆಗಿದೆ. ಇಡೀ ದಿನ ಮತದಾನದ ಕ್ಷಣ ಕ್ಷಣ ಮಾಹಿತಿಯನ್ನು ನೀವು ದಿಗ್ವಿಜಯ ನ್ಯೂಸ್​ ಯೂಟ್ಯೂಬ್​ ಲೈವ್​ನಲ್ಲಿ ವೀಕ್ಷಿಸಬಹುದಾಗಿದೆ.
https://www.youtube.com/watch?v=wGkSPWpfbSk
ರಾಜಕೀಯ ಪಕ್ಷಗಳು ಮತ್ತು ಅಭ್ಯಥಿಗಳು ಮತದಾರ ಪ್ರಭುಗಳ ಕೃಪೆಗಾಗಿ ಕಾದಿದ್ದಾರೆ. ಪ್ರಜಾಪ್ರಭುತ್ವದ ಉತ್ಸವ, ಮತದಾನ ಹಬ್ಬದಲ್ಲಿ ಪ್ರತಿಯೊಬ್ಬರೂ ಯಾವುದೇ ಆಮಿಷಗಳಿಗೆ ಒಳಗಾಗದೆ ತಮ್ಮ ಹಕ್ಕು ಚಲಾಯಿಸಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಮತ ‘ದಾನ’ ಎನ್ನುವ ಪಾವಿತ್ರ್ಯದ ಅಭಿದಾನವನ್ನೂ ನೀಡಲಾಗಿದೆ. ‘ಪ್ರಜಾಪ್ರಭುತ್ವದಲ್ಲಿ ಆಡಳಿತ ಮಾಡುವವರು ಮತಪೆಟ್ಟಿಗೆಯಲ್ಲಿ (ಇವಿಎಂ) ರೂಪುಗೊಳ್ಳುತ್ತಾರೆ.
ಒಬ್ಬ ವ್ಯಕ್ತಿಗೆ ಒಂದು ಮತ, ಒಂದು ಮತಕ್ಕೆ ಒಂದೇ ಮೌಲ್ಯ’ ಎನ್ನುವುದು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮಾತು. ಮತದಾನದ ಮಹತ್ವ, ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಹಾಗೂ ವಿವೇಕವನ್ನು ಜಾಗೃತಗೊಳಿಸುತ್ತದೆ. ಅಂತೆಯೇ, ಪ್ರತಿಯೊಬ್ಬರೂ ತಮ್ಮ ಅಪೇಕ್ಷೆಗೆ ಅನುಗುಣವಾಗಿ ಹಕ್ಕು ಚಲಾಯಿಸುವುದರಿಂದ ಪ್ರಜಾಪ್ರಭುತ್ವದ ಕಳೆ ಹೆಚ್ಚಲಿದೆ. ಈ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ದಿಗ್ಗಜರು, ಪ್ರಮುಖರ ಮೂಲಕ ಮತದಾನ ಜಾಗೃತಿಗೆ ಚುನಾವಣೆ ಆಯೋಗ ಪ್ರಯತ್ನಿಸಿದೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅರ್ಹ ಮತದಾರರೆಲ್ಲರೂ ತಮ್ಮ ಹಕ್ಕು ಚಲಾಯಿಸಬಹುದು.
ಭವಿಷ್ಯ ನಿರ್ಧರಿಸುತ್ತೆ: ವೈಯಕ್ತಿಕ ಸುರಕ್ಷತೆ, ಅಭಿವೃದ್ಧಿ, ನಾಡು ಹಾಗೂ ದೇಶದ ಅಭಿವೃದ್ಧಿ ಜತೆಗೆ ಮುಂದಿನ ಐದು ವರ್ಷಗಳ ಭವಿಷ್ಯವನ್ನು ಒಂದು ಮತ ತೀರ್ಮಾನಿಸಲಿದೆ. ರಾಜಕೀಯ ಪಕ್ಷಗಳು, ವಿಧಾನಸಭೆ ಪ್ರವೇಶಿಸಲು ಬಯಸಿದ ಅಭ್ಯರ್ಥಿಗಳು ತಮ್ಮ ಪ್ರಣಾಳಿಕೆಯನ್ನು ಜನರ ಮುಂದಿಟ್ಟಿದ್ದಾರೆ. ಪ್ರತಿ ಯೊಬ್ಬಮತದಾರ ತನಗೆ ಸೂಕ್ತವಾದುದ್ದನ್ನು ಅಯ್ಕೆ ಮಾಡಿಕೊಳ್ಳುವ ಅವಕಾಶವಿದೆ.
ಬೇಡ ನಿರ್ಲಕ್ಷ್ಯ.. ಭವಿಷ್ಯವನ್ನೇ ಬದಲಿಸಬಹುದು ಒಂದು ಮತ!

ಮೂರೂ ಪಕ್ಷಗಳಿಗೆ ಮಾಡು ಇಲ್ಲವೇ ಮಡಿ ಹೋರಾಟ; ಹುರಿಯಾಳುಗಳ ಭವಿಷ್ಯ ಇಂದು ನಿರ್ಧಾರ

Sign in to your account
Please enter an answer in digits:4 − 2 =
Remember me
