ಬೆಂಗಳೂರು: ಕರೊನಾ ಸೋಂಕಿನ ಕಾವು ಇದೀಗ ಅರಣ್ಯ ರಕ್ಷಕರಿಗೂ ಹಾಗೂ ಕಳ್ಳಬೇಟೆ ಶಿಬಿರಗಳಲ್ಲಿ ಕೆಲಸ ಮಾಡುವ ಅರಣ್ಯ ವೀಕ್ಷಕರಿಗೂ ತಟ್ಟಿದೆ.ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಣ ಬಿಡುಗಡೆ ವಿಳಂಬವಾಗಿದೆ. ಶಿಬಿರಗಳಲ್ಲಿ ಕೆಲಸ ಮಾಡುವವರಿಗೆ ಕೆಲಸದಿಂದ ವಜಾಗೊಳಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್​ಟಿಸಿಎ) ಸೂಚನೆ ನೀಡಿದೆ. ಇದರಿಂದ ಅರಣ್ಯ ರಕ್ಷಕರಿಗೆ ಸಂಕಷ್ಟ ಎದುರಾಗಿದೆ. ಎನ್​ಟಿಸಿಎ ನಿರ್ಧಾರ ರಾಜ್ಯದ ವನ್ಯಜೀವಿಗಳ ರಕ್ಷಣೆ , ಹುಲಿ ನಿಕ್ಷೇಪ ಹಾಗೂ ಕಳ್ಳ ಬೇಟೆ ತಡೆಗಟ್ಟುವುದರ ಮೇಲೆ ಪರಿಣಾಮ ಬೀರಲಿದೆ.
ಕರೊನಾ ಪ್ರಾರಂಭವಾದ ದಿನದಿಂದ ನಾಗರಹೊಳೆ ಮತ್ತು ಬಂಡೀಪುರಕ್ಕೆ ಸಾಕಷ್ಟು ಹಣ ಹಂಚಿಕೆ ಮಾಡಲಾಗಿದೆ. ಆದರೆ, ಆಗಸ್ಟ್ ವೇಳೆಗೆ ಕಡಿತ ಉಂಟಾಗಿದೆ. ಬಿಆರ್​ಟಿ , ಕಾಳಿ ಮತ್ತು ಭದ್ರಾ ಮೀಸಲು ಪ್ರದೇಶಕ್ಕೆ ಧನಸಹಾಯ ಕಡಿಮೆಯಾಗಿದೆ. ಪ್ರಾದೇಶಿಕ ಹಾಗೂ ಎನ್​ಟಿಸಿಎ ಕಚೇರಿಗೆ ಅನುದಾನ ಬಿಡುಗಡೆ ಮಾಡಯವಂತೆ ಮನವಿ ಸಲ್ಲಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಅರಣ್ಯ ಪ್ರಧಾನ ಮುಖ್ಯ ಸಂರಕ್ಷಾಣಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು
ಹಣ ಮಂಜೂರು:ಕಳ್ಳಬೇಟೆ ನಿಗ್ರಹ ಶಿಬಿರಗಳಲ್ಲಿ ಒಟ್ಟು 104 ಕಾವಲುಗಾರರಿದ್ದಾರೆ. ಅವುಗಳಲ್ಲಿ 48 ರಕ್ಷಕರಿಗೆ ಮಾತ್ರ ಹಣ ಮಂಜೂರಾಗಿದೆ. ಪ್ರತಿ ಶಿಬಿರಕ್ಕೆ 4 ರಕ್ಷಕರಿರುತ್ತಾರೆ. ಆದರೆ, ಈಗ ಮಂಜೂರಾದ ಹಣ ಒಂದು ಶಿಬಿರಕ್ಕೆ ಒಬ್ಬರಿಗೆ ಮಾತ್ರ ಮೀಸಲು ಎನ್ನುವಂತಿದೆ.
ಅಂಚೆ ಕಚೇರಿಗೆ ಚಿಕ್ಕ-ಚೊಕ್ಕ ಕಟ್ಟಡ

https://www.vijayavani.net/ex-cm-siddaramaiah-got-affected-by-covid-19/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + four =
Remember me
