ಬಳ್ಳಾರಿ:ಶ್ರೀರಾಮುಲು ಸಹೋದರಿ, ಮಾಜಿ‌ ಸಂಸದೆ ಜೆ.ಶಾಂತಾ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಹೌದು, ಶಾಂತಾ ಕರ್ನಾಟಕ ಬಿಜೆಪಿ ತೊರೆದು ಆಂಧ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶಾಂತಾ ಅವರು ಆಂಧ್ರ ಸಿಎಂ ಜಗನ್ಮೋಹನರೆಡ್ಡಿ ನೇತೃತ್ವದಲ್ಲಿ ವಿಜಯವಾಡ ತಾಡಿಪಲ್ಲಿ ಸಿಎಂ ಕ್ಯಾಂಪ್ ಆಫೀಸ್ ನಲ್ಲಿ ವೈಎಸ್ಆರ್​​​​​ಪಿ‌ ಸೇರ್ಪಡೆಯಾಗಿದ್ದಾರೆ.
ಮುಂದಿನ ಎಂಪಿ‌ ಚುನಾವಣೆಯಲ್ಲಿ ವೈಎಸ್ಆರ್​​​​ಪಿಯಿಂದ ಹಿಂದುಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಹಿಂದುಪುರ ಕ್ಷೇತ್ರ ಅನಂತಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರಲಿದೆ. ಹಿಂದುಪುರ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯ ನಾಲ್ಕುವರೆ ಲಕ್ಷ ಮತದಾರರಿದ್ದಾರೆ. ರಾಜ್ಯದಲ್ಲಿ ವಾಲ್ಮೀಕಿ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ, ಆಂಧ್ರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದೆ.
ಅನಂತಪುರ ಜಿಲ್ಲೆಯ ಗುಂತಕಲ್ ಪಟ್ಟಣ ನಿವಾಸಿಯಾಗಿರುವ ಜೆ.ಶಾಂತಾ 2009ರಲ್ಲಿ ಶ್ರೀರಾಮುಲು ಸಹಕಾರದಿಂದ ಬಳ್ಳಾರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಜಗನ್ ಅವರು ಎಂಪಿಯಾಗಿದ್ದಾಗ ಲೋಕಸಭೆಯಲ್ಲಿ ಶಾಂತಾ ಪರಿಚಯವಿತ್ತು. ಆಂಧ್ರದ ರಾಜಕೀಯ ಎಂಟ್ರಿಗೆ‌ ಅಂದಿನ ಪರಿಚಯವೇ ಕಾರಣ. ಬಳ್ಳಾರಿ ಜಿಲ್ಲೆಯಲ್ಲಿ ಶಾಂತಾ ಟಿಕೆಟ್ ಆಕಾಂಕ್ಷಿಯಾಗಿದ್ದರು ಎನ್ನಲಾಗಿದೆ.
ಮೈ ನಡುಗಿಸುವ ಚಳಿ, ದಟ್ಟವಾದ ಮಂಜು: ಕೆಲವು ರಾಜ್ಯಗಳಲ್ಲಿ ಜ.6 ರವರೆಗೆ ಶಾಲೆಗಳು ಕ್ಲೋಸ್‌, ರೈಲು, ವಿಮಾನ ಮಾರ್ಗದಲ್ಲಿ ಬದಲಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
