| ಮೃತ್ಯುಂಜಯ ಕಪಗಲ್, ಬೆಂಗಳೂರು
ವಿಧಾನಸಭೆ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳ ಪೈಕಿ ನೆರೆಯ ತೆಲಂಗಾಣಕ್ಕೆ ಕರ್ನಾಟಕವು ಸೂಜಿಗಲ್ಲಿನಂತೆ ಸೆಳೆದಿದೆ. ಜಿದ್ದಾಜಿದ್ದಿಗೆ ಇಳಿದಿರುವ ಎರಡು ರಾಜಕೀಯ ಪಕ್ಷಗಳ ಚುನಾವಣೆ ಪ್ರಚಾರಕ್ಕೆ ಕರ್ನಾಟಕದ ವಿಷಯವಸ್ತು ಪ್ರಧಾನ ಸಾಧನವಾಗಿದೆ!
ಕೆ. ಚಂದ್ರಶೇಖರ್ ರಾವ್ ನಾಯಕತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್) ಹ್ಯಾಟ್ರಿಕ್ ಗೆಲುವಿನ ಉಮೇದಿಯಲ್ಲಿ ಎಲ್ಲ ತಂತ್ರೋಪಾಯಗಳನ್ನು ಅನುಸರಿಸುತ್ತಿದೆ. ಕರ್ನಾಟಕದ ಗೆಲುವಿನಲ್ಲಿ ಮಹತ್ವದ ಪಾಲು ನೀಡಿದ 5 ಗ್ಯಾರಂಟಿಗಳ ‘ಮಾದರಿ’ಯನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಪ್ರಯೋಗಿಸಿ, ಅದೇ ತೆರನಾದ ಭರವಸೆಗಳನ್ನು ನೀಡಿದೆ. ಕರ್ನಾಟಕದಲ್ಲಿ ಬಿಜೆಪಿ ವಿರುದ್ಧದ ‘ಆಡಳಿತ ವಿರೋಧಿ ಅಲೆ’ ಅಪ್ಪಳಿಸಿ, ಕಾಂಗ್ರೆಸ್​ಗೆ ಜಯಭೇರಿ ತಂದುಕೊಟ್ಟಿತು. ತೆಲಂಗಾಣ ಕಣದಲ್ಲೂ ಅದು ಪುನರಾವರ್ತನೆಯಾಗುವ ವಿಶ್ವಾಸ ಕಾಂಗ್ರೆಸ್​ಗಿದೆ.
ಎರಡೂ ಪಕ್ಷಗಳ ಜಂಗೀಕುಸ್ತಿ:ಚುನಾವಣಾ ಕಾವಿನ ಮಧ್ಯೆ ಸೆಮಿಕಂಡಕ್ಟರ್ ವಲಯದ ಕೇಯ್್ನ ್ಸ ಟೆಕ್ನಾಲಜೀಸ್ ಕಂಪನಿಯನ್ನು ಮೈಸೂರಿನಿಂದ ತೆಲಂಗಾಣ ಸೆಳೆದುಕೊಂಡಿತು. ಇದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಜತೆಗೆ ಬಿಆರ್​ಎಸ್ ಜಂಗೀಕುಸ್ತಿಗೆ ಇಳಿಯಿತು. ಫಾಕ್ಸ್​ಕಾನ್ ಕಂಪನಿ ಮುಖ್ಯಸ್ಥರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಬರೆದಿದ್ದರು ಎನ್ನಲಾದ ಪತ್ರದ ಮೂಲಕ ಬಿರುಗಾಳಿ ಎಬ್ಬಿಸಿತು. ಆದರೆ ಅದು ನಕಲಿಪತ್ರವೆಂದು ಡಿಕೆಶಿ ಸಾರುವ ಜತೆಗೆ ತಮ್ಮ ಕಾರ್ಯದರ್ಶಿ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಬಿಆರ್​ಎಸ್​ನದು ಕೀಳು ರಾಜಕಾರಣವೆಂದು ತೆಲಂಗಾಣ ಕಾಂಗ್ರೆಸ್ ಹರಿಹಾಯ್ದಿದೆ. ಮೊದಲ ಸುತ್ತಿನಲ್ಲಿ ಡಿ.ಕೆ. ಶಿವಕುಮಾರ್ ತಾಂಡೂರು, ವಿಖಾರಬಾದ್ ಕ್ಷೇತ್ರಗಳ ರ್ಯಾಲಿಯಲ್ಲಿ ಭಾಗವಹಿಸಿ, ಬರಗಾಲದ ಮಧ್ಯೆಯೂ ಕರ್ನಾಟಕದಲ್ಲಿ ರೈತರ ಪಂಪ್​ಸೆಟ್​ಗಳಿಗೆ 5 ತಾಸು 3-ಫೇಸ್ ವಿದ್ಯುತ್ ಪೂರೈಸುತ್ತಿದ್ದೇವೆ ಎಂದಿದೆ. ‘ಆದರೆ ತೆಲಂಗಾಣದಲ್ಲಿ ರೈತರ ಪಂಪ್​ಸೆಟ್​ಗಳಿಗೆ 24 ತಾಸು 3-ಫೇಸ್ ವಿದ್ಯುತ್ ಪೂರೈಕೆಯಾಗುತ್ತಿದೆ’ ಎಂದು ಬಿಆರ್​ಎಸ್ ತಿವಿದಿದೆ.
ಹಗ್ಗಜಗ್ಗಾಟ:ವೈಎಸ್ ಶರ್ವಿುಳಾ ನೇತೃತ್ವದ ವೈಎಸ್​ಆರ್​ಟಿಪಿ, ಎಂ.ಕೋದಂಡರಾಮ ಅಧ್ಯಕ್ಷರಾಗಿರುವ ತೆಲಂಗಾಣ ಜನ ಸಮಿತಿ ಪಕ್ಷಗಳ ಬೆಂಬಲ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ ಐಎನ್​ಡಿಐಎ ಮೈತ್ರಿಕೂಟದ ಭಾಗವಾಗಿರುವ ಸಿಪಿಐ, ಸಿಪಿಎಂ ಜತೆ ಸೀಟುಹಂಚಿಕೆ ಹಗ್ಗಜಗ್ಗಾಟ ಮುಂದುವರಿದಿದೆ. ಎರಡೂ ಪಕ್ಷಗಳು ಒಟ್ಟು 10 ಕ್ಷೇತ್ರಗಳಿಗೆ ಬೇಡಿಕೆಯಿಟ್ಟರೆ, ಕಾಂಗ್ರೆಸ್ ತಲಾ 2 ಸ್ಥಾನ ನೀಡಲು ಮುಂದಾಗಿದೆ. ಉಭಯ ಪಕ್ಷಗಳ ಹೈಕಮಾಂಡ್ ಜತೆಗೆ ಕಾಂಗ್ರೆಸ್​ನಾಯಕರು ಚೌಕಾಸಿ ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೈ ಪಕ್ಷ ಸದ್ಯಕ್ಕೆ 100 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿ, ಉಳಿದ 19 ಕ್ಷೇತ್ರಗಳಿಗೆ ಕಾದು ನೋಡುತ್ತಿದೆ.
ತೆಲಂಗಾಣ ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಬಿಆರ್​ಎಸ್ ವಿಫಲವಾಗಿದೆ. ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಕಾಂಗ್ರೆಸ್ ಪರ ಜನರ ಒಲವು ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ.
| ಎನ್.ಎಸ್. ಬೋಸರಾಜು ಸಚಿವ ಮತ್ತು ತೆಲಂಗಾಣ ಚುನಾವಣೆಗೆ ಎಐಸಿಸಿ ವಿಶೇಷ ವೀಕ್ಷಕ
ರೈತರ ಗುಂಪು ಪ್ರಚಾರ!:ಈ ನಡುವೆ ತೆಲಂಗಾಣದ ಕೋಡಂಗಲ್, ಗದ್ವಾಲ್ ಕ್ಷೇತ್ರಗಳಲ್ಲಿ ಕರ್ನಾಟಕದ ರೈತರ 2 ಗುಂಪುಗಳು ಪ್ರತ್ಯೇಕವಾಗಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿವೆ. ‘5 ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಯಾಮಾರಿಸಿದೆ. ಜಾರಿಗೊಳಿಸಿದ 4 ಗ್ಯಾರಂಟಿಗಳು ಎಲ್ಲ ಫಲಾನುಭವಿಗಳಿಗೆ ತಲುಪಿಲ್ಲ, ಒಂದು ಗ್ಯಾರಂಟಿ ಇನ್ನೂ ಜಾರಿಗೊಳಿಸಿಲ್ಲ’ ಎಂದು ಆರೋಪಿಸಿವೆ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಕಡೆಯವರನ್ನು ಚದುರಿಸಿದ್ದಾರೆ ಎನ್ನಲಾಗಿದೆ.
ಕಮಲಪಡೆಗೆ ಮಂಕು:ಚುನಾವಣೆಗೆ 6 ತಿಂಗಳ ಮುಂಚೆ ಬಿಜೆಪಿಯ ಅಬ್ಬರ, ಆರ್ಭಟ ಕಂಡ ತೆಲಂಗಾಣದ ವಿವಿಧ ಪಕ್ಷಗಳ ನಾಯಕರು ಅತ್ತ ವಾಲಿದ್ದರು. ಬಿಆರ್​ಎಸ್​ಗೆ ಪರ್ಯಾಯವೆಂಬ ಭಾವನೆ ತೆಲಂಗಾಣದ ಜನರಲ್ಲೂ ಮೂಡಿತ್ತು. ಪ್ರಧಾನಿ ಮೋದಿ, ಅಮಿತ್ ಷಾ, ಜೆಪಿ ನಡ್ಡಾ ಸಂಚಾರ ಹೊಸ ಅಲೆ ಎಬ್ಬಿಸಿತ್ತು. ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ ನಂತರ ಇದ್ದಕ್ಕಿದ್ದಂತೆ ಕಮಲಪಡೆಗೆ ಮಂಕು ಕವಿದಿದೆ. ಪಕ್ಷದ ಮೇಲೆ ಅಪಾರ ನಿರೀಕ್ಷೆಯಿಟ್ಟುಕೊಂಡು ಸೇರಿದವರು ಕಾಲ್ತೆಗೆದಿದ್ದು, ಇದ್ದವರೂ ಬೇರೆ ಪಕ್ಷದ ಕಡೆಗೆ ವಾಲತೊಡಗಿದ್ದಾರೆ. ಇದು, ಸಮರಾಂಗಣಕ್ಕೆ ಇಳಿಯುವ ಮುನ್ನವೇ ಶರಣಾಗತಿಯ ಸ್ಥಿತಿ ಎಂದು ವಿಶ್ಲೇಷಿಸಲಾಗುತ್ತಿದೆ.
ಕುಟುಂಬವಾದ ಅಸ್ತ್ರ!:ಬಿಆರ್​ಎಸ್ ಭದ್ರಕೋಟೆಗೆ ಲಗ್ಗೆಯಿಟ್ಟಿರುವ ಕಾಂಗ್ರೆಸ್ ರಣಕಣದಲ್ಲಿ ‘ಕುಟುಂಬ ರಾಜಕಾರಣ’ ಅಸ್ತ್ರ ಪ್ರಯೋಗಿಸುತ್ತಿದೆ. ಕೆಸಿಆರ್ 9 ವರ್ಷಗಳ ಆಡಳಿತದಲ್ಲಿ ಜನರನ್ನು ಉದ್ಧಾರ ಮಾಡುವ ಬದಲು ತಮ್ಮ ಕುಟುಂಬವನ್ನು ಬಲಪಡಿಸಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ.
ರಾಯಪುರ: ಛತ್ತೀಸ್​ಗಢದ ನಕ್ಸಲ್ ಪೀಡಿತ ಬಸ್ತಾರ್ ವಿಭಾಗದಲ್ಲಿ 20 ಸ್ಥಾನಗಳಿಗೆ ಮೊದಲ ಹಂತದ ವಿಧಾನಸಭೆ ಚುನಾವಣೆಗಾಗಿ ಮಂಗಳವಾರ ಮತದಾನ ನಡೆಯಲಿದೆ. ಈ ಕಾರ್ಯಕ್ಕೆ 25,249 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲ ಹಂತದಲ್ಲಿ 25 ಮಹಿಳೆಯರು ಸೇರಿ 223 ಅಭ್ಯರ್ಥಿಗಳ ಭವಿಷ್ಯವನ್ನು ಅಂದಾಜು 40,78,681 ಮತದಾರರು ನಿರ್ಧರಿಸಲಿದ್ದಾರೆ. ನಕ್ಸಲ್ ಪೀಡಿತ ಬಸ್ತಾರ್ ವಿಭಾಗದ 12 ಕ್ಷೇತ್ರಗಳಲ್ಲಿ ಸುಗಮ ಚುನಾವಣೆ ನಡೆಸಲು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 40,000 ಸೇರಿದಂತೆ 60,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದೊಂದಿಗಿನ ಸೀಟು ಹಂಚಿಕೆ ಮಾತುಕತೆ ವಿಫಲವಾಗಿದೆ. ಇಂಡಿಯಾ ಮೈತ್ರಿಕೂಟವು ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತವಾಗಿದೆ. ಸಮಾಜವಾದಿ ಪಕ್ಷದ ನಾಯಕರು ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡುವುದು ಕೇವಲ ಸಮಯ ವ್ಯರ್ಥ.
| ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ
ಬೆಂಗಳೂರು: ತೆಲಂಗಾಣ ಸಹಿತ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ಬಿಜೆಪಿ ಹೆಚ್ಚಿನ ಮಹತ್ವ ನೀಡಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಬೂಸ್ಟ್ ನೀಡಲಿದೆ ಎಂಬ ಲೆಕ್ಕಾಚಾರದಲ್ಲಿ ವ್ಯೂಹಾತ್ಮಕ ನಡೆ ಅನುಸರಿಸುತ್ತಿದೆ. ನೆರೆಯ ತೆಲಂಗಾಣ ಚುನಾವಣೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಐದು ಜನ ಸಚಿವರಿದ್ದರೂ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿಎಸ್​ವೈಗೆ ಮಾತ್ರ ಮಣೆ ಹಾಕಲಾಗಿದೆ. ರಾಜ್ಯದ ಕೇಂದ್ರ ಸಚಿವರಿಗೆ ಬೇರೆ ನಾಲ್ಕು ರಾಜ್ಯಗಳ ಚುನಾವಣೆ ಜವಾಬ್ದಾರಿ ಒಪ್ಪಿಸಿರುವ ಕಾರಣ ತೆಲಂಗಾಣ ಚುನಾವಣಾ ಪ್ರಚಾರಕ್ಕೆ ಪರಿಗಣಿಸಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಎಸ್​ವೈ ಒಳಗೊಂಡ 40 ಜನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಿದೆ. ತೆಲಂಗಾಣ ಚುನಾವಣೆಗೆ ನ.3ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಅದಾಗಲೇ ಜಿದ್ದಾ ಜಿದ್ದಿಗೆ ಇಳಿದಿರುವ ಪ್ರಮುಖ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ. ತೆಲಂಗಾಣದಲ್ಲೂ ನೆಲೆಯೂರಲು ಬಯಸಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹುರುಪು ತುಂಬಲು ಪ್ರಯತ್ನಿಸಿದೆ.
ಭೋಪಾಲ್:ನಕಲಿ ಭರವಸೆ ಗಳನ್ನು ನೀಡುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಹಾಗೂ ರಾಜ್ಯಗಳನ್ನು ಒಂದು ಕುಟುಂಬದ ಎಟಿಎಂ ಆಗಿ ಪರಿವರ್ತಿಸುತ್ತದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೋಮವಾರ ಹೇಳಿದ್ದಾರೆ. ಕಾಂಗ್ರೆಸ್​ಗೂ ಸಾರ್ವಜನಿಕ ಕಲ್ಯಾಣಕ್ಕೂ ಯಾವುದೇ ಸಂಬಂಧವಿಲ್ಲ. ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಸ್ಪಷ್ಟವಾಗಿ ಕಂಡುಬರುವಂತೆ ನಕಲಿ ಭರವಸೆಗಳ ಮೂಲಕ ಮತ್ತು ಜನರನ್ನು ದಾರಿ ತಪ್ಪಿಸುವ ಮೂಲಕ ಅಧಿಕಾರ ಪಡೆಯಲು ಬಯಸಿದೆ ಎಂದು ಆರೋಪಿಸಿದರು.
34 ವರ್ಷದ ಡಾಕ್ಟರ್ ಕುಸಿದು ಬಿದ್ದು ಸಾವು; ಆಸ್ಪತ್ರೆಯಲ್ಲಿ ರೋಗಿಗಳನ್ನು ಪರೀಕ್ಷಿಸಿ ಮೆಟ್ಟಿಲೇರುತ್ತಿದ್ದಂತೆ ಹೃದಯಾಘಾತ!

ಮಾಮೂಲಿಗಿಂತ ಅರ್ಧಕ್ಕೂ ಅಧಿಕ ಕಡಿಮೆ ಖರ್ಚಲ್ಲಿ ಈಗ ಎಕ್ಸ್ ಸಬ್​ಸ್ಕ್ರಿಪ್ಷನ್ ಲಭ್ಯ; ಏನಿದು ಎಲಾನ್ ಮಸ್ಕ್ ಕಮರ್ಷಿಯಲ್ ಪ್ಲ್ಯಾನ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 14 =
Remember me
