ಬೆಂಗಳೂರು: ಕರೊನಾ ಸೋಂಕಿನಿಂದ ಪಾಲಕರು ಕಳೆದುಕೊಂಡ ಅನಾಥ ಮಕ್ಕಳನ್ನು ದತ್ತು ನೀಡುವುದಾಗಿ ಹಾಗೂ ಅನಾಥ ಮಕ್ಕಳ ಆರೈಕೆ ಹೆಸರಿನಲ್ಲಿ ದೇಣಿಗೆ ಸಂಗ್ರಹ ಕಾನೂನು ಬಾಹಿರ ಎಂದು ಸರ್ಕಾರ ಎಚ್ಚರಿಸಿದೆ.
ಕೋವಿಡ್​&19 ಸೋಂಕಿನಿಂದ ಹೆತ್ತವರು ಮೃತಪಟ್ಟು ಮಕ್ಕಳು ಅನಾಥವಾಗಿದ್ದಾರೆ. ಅವರನ್ನು ದತ್ತು ಪಡೆಯಲು ಮತ್ತು ಮಕ್ಕಳ ಆರೈಕೆಗೆ ದೇಣಿ ನೀಡುವಂತೆ ಹಲವಾರು ಭಿತ್ತಿಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಅರಿದಾಡುತ್ತಿವೆ. ಅನಾಥ ಮಕ್ಕಳ ಹೆಸರಿನಲ್ಲಿ ಅಕ್ರಮವಾಗಿ ಕೆಲವರು ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಮಕ್ಕಳನ್ನು ದತ್ತು ಕೊಡುವುದಾಗಿ ಹೇಳಿ ಮೋಸ ಮಾಡುತ್ತಿದ್ದಾರೆ. ಇದು ಮಕ್ಕಳ ಕಲ್ಯಾಣ ನಿರ್ದೇಶನಾಲಯದ ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ;ಕರೊನಾ ವಿರುದ್ಧದ ಹೋರಾಟಕ್ಕೆ 11 ಕೋಟಿ ರೂ. ಸಂಗ್ರಹಿಸಿದ ಕೊಹ್ಲಿ-ಅನುಷ್ಕಾ
ಅನಾಥ ಮಕ್ಕಳನ್ನು ಆರೈಕೆ ಮಾಡುವ ಜವಾಬ್ದಾರಿ ಸರ್ಕಾರದು. ಅದಕ್ಕಾಗಿ ಸರ್ಕಾರಿ ಬಾಲಮಂದಿರ ಮತ್ತು ಬಾಲಕಿಯರ ಮಂದಿರ ಹಾಗೂ ಶಿಶುಮಂದಿರವನ್ನು ಮತ್ತು ವಿಶೇಷ ದತ್ತು ಸಂಸ್ಥೆಗಳನ್ನು ಜಿಲ್ಲೆಗಳಲ್ಲಿ ನಡೆಸುತ್ತಿದ್ದು, ಮಕ್ಕಳಿಗೆ ಅವಶ್ಯವಿರುವ ಪಾಲನೆ ಮತ್ತು ರಕ್ಷಣೆಯನ್ನು ಒದಗಿಸಲಾಗುತ್ತಿದೆ.
ಕಾನೂನು ಬಾಹಿರವಾಗಿ ಮಕ್ಕಳನ್ನು ದತ್ತು ನೀಡುವುದಾಗಿ ಅಥವಾ ದೇಣಿಗೆ ಸಂಗ್ರಹಿಸುತ್ತಿರುವ ಮಾಹಿತಿ ತಿಳಿದುಬಂದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ಅಥವಾ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕೃತ ವೆಬ್​ಸೈಟ್​ www.icps.karnataka.gov.in ಸಂಪರ್ಕ ಮಾಡಿ. ಸುಳ್ಳು ಮಾಹಿತಿಗೆ ಕಿವಿಗೊಡದೆ ಆಪ್ತ ಸಮಾಲೋಚನೆ ದೂರವಾಣಿ ಸಂಖ್ಯೆ 14499 ನ್ನು ಸಂಪಕಿರ್ಸುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಅಧಿಕಾರಿಗಳು ಕೋರಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 7 =
Remember me
