ಬೆಂಗಳೂರು:ಆರ್‌ಟಿಐ ಕಾರ್ಯಕರ್ತರನ್ನು ಬೆದರಿಸಲು ರಾಜ್ಯ ಸರ್ಕಾರ ಮುಂದಾಗಿದೆಯಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಏಕೆಂದರೆ, ಹೆಚ್ಚೆಚ್ಚು ಆರ್‌ಟಿಐ ಹಾಕುವ ಕಾರ್ಯಕರ್ತರ ಮಾಹಿತಿಯನ್ನು ಕ್ರೋಢೀಕರಿಸಲು ಸರ್ಕಾರ ಮುಂದಾಗಿದ್ದು, ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಆರ್‌ಟಿಐ ಅರ್ಜಿ ಹಾಕುವವರ ಮಾಹಿತಿ ಪಡೆದು ಏನು ಮಾಡಲು ಹೊರಟಿದೆ ರಾಜ್ಯ ಕಾಂಗ್ರೆಸ್ ಸರ್ಕಾರ? ಮುಖ್ಯ ಕಾರ್ಯದರ್ಶಿ ಕಚೇರಿ, ಇಲಾಖೆಗಳು, ಸಚಿವಾಲಯಗಳಲ್ಲಿ ಮಾಹಿತಿ ಕೇಳುವವರ ಮಾಹಿತಿ ಕಲೆ ಹಾಕಲು ಸರ್ಕಾರ ಮುಂದಾಗಿದೆ. ಹೆಚ್ಚು ಬಾರಿ ಆರ್‌ಟಿಐ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸಲು ಸರ್ಕಾರ ನಿರ್ದೇಶನ ನೀಡಿದೆ.
ಇದನ್ನೂ ಓದಿ:ಕುಲು-ಮನಾಲಿಗೆ ಪ್ರವಾಸಕ್ಕೆ ಹೊರಟ್ರಾ?; ನಿಲ್ಲಿ, ಈ ರಸ್ತೆಗಳಲ್ಲಿ ಪ್ರಯಾಣಿಸದಿರಿ…ಪ್ರವಾಸಿಗರಿಗೆ ಮನವಿ
ಸರ್ಕಾರದ ಈ ನಿರ್ದೇಶನ ಈಗ ಆರ್‌ಟಿಐ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಕಲಬುರಗಿ ಪೀಠದ ಮಾಹಿತಿ ಆಯುಕ್ತರು ಪತ್ರ ಬರೆದ ಬೆನ್ನಲ್ಲೇ ಮಾಹಿತಿ ಕಲೆ ಹಾಕಲು ಸರ್ಕಾರ ಮುಂದಾಗಿದೆ. 2023ರ ಏಪ್ರಿಲ್‌ನಲ್ಲಿ ಮಾಹಿತಿ ಆಯುಕ್ತರು ಪತ್ರ ಬರೆದಿದ್ದರು. ಆದರೆ ಬಿಜೆಪಿ ಸರ್ಕಾರವು ಯಾವುದೇ ಕ್ರಮವಹಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಆರ್‌ಟಿಐ ಕಾರ್ಯಕರ್ತರ ಮಾಹಿತಿ ಕಲೆಹಾಕಲು ಮುಂದಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಆರ್‌ಟಿಐ ಅರ್ಜಿದಾರರ ಮಾಹಿತಿ ನೀಡಲು ‌ನಿರ್ದೇಶನ ನೀಡಿದೆ. ಆರ್‌ಟಿಐ ಅಡಿ ಅರ್ಜಿದಾರರ ವಿವರಗಳ ಗೌಪ್ಯತೆ ಕಾಪಾಡುವುದು ಕಾನೂನಿನಲ್ಲಿದೆ. ಹೀಗಿದ್ದಾಗ ಸರ್ಕಾರವೇ ಮಾಹಿತಿ ಕಲೆ ಹಾಕಲು ಮುಂದಾಗಿರುವುದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಹೊಟ್ಟೆನೋವು ತಾಳಲಾರದೆ ಬದುಕಿಗೆ ಅಂತ್ಯವಾಡಿದ ನಂಜನಗೂಡಿನ ಕಾಲೇಜು ವಿದ್ಯಾರ್ಥಿನಿ

ಮಂಗಳೂರು ಮೀನುಗಾರರ ಬಲೆಗೆ ಬಿದ್ದ 300 ಕೆಜಿ ತೂಕದ ಮುರು! ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
