ಬೆಂಗಳೂರು:ಇದೀಗ ರಾಜ್ಯಸರ್ಕಾರ 11 ಮಂದಿ ಐಪಿಎಸ್​ ಅಧಿಕಾರಿಗಳನ್ನು ಬೇರೆ ಬೇರೆ ಸ್ಥಾನಗಳಿಗೆ ವರ್ಗಾವಣೆ ಮಾಡಿದ್ದು ಅವರಲ್ಲಿ ಇತ್ತೀಚೆಗೆ ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಿದ್ದ ಅಧಿಕಾರಿ ರವಿ ಡಿ ಚೆನ್ನಣ್ಣನವರ್​ ಕೂಡ ಇದ್ದಾರೆ. ರಾಜ್ಯ ಸರ್ಕಾರ ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಚೆನ್ನಣ್ಣನವರ್​ರನ್ನು ಕಿಯೋನಿಕ್ಸ್​ ಸಂಸ್ಥೆಯ ನಿರ್ದೇಶಕನಾಗಿ ವರ್ಗಾವಣೆ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಸ್ಪೆಷಲ್​ ಟ್ರಾಫಿಕ್​ ಕಮಿಷನರ್​ಅನ್ನು ನೇಮಕ ಮಾಡಲಾಗಿದ್ದು ಐಪಿಎಸ್​ ಅಬ್ದುಲ್​ ಸಲೀಂಗೆ ಈ ಸ್ಥಾನವನ್ನು ನೀಡಲಾಗಿದೆ. ಅದಲ್ಲದೇ ಈ ಬಾರಿ Additional Director General and Special Commissioner (Traffic) ಪದವಿಯನ್ನು ADGP ದರ್ಜೆಗೆ ಸಮಾನವೆಂದು ಸರ್ಕಾರ ಆದೇಶ ಹೊರಡಿಸಿದೆ.
ಯಾವ ಅಧಿಕಾರಿಗಳನ್ನು ಯಾವ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ? ಮಾಹಿತಿ ಇಲ್ಲಿದೆ:
ಅಬ್ದುಲ್ ಸಲೀಂ – ಸಂಚಾರ ವಿಭಾಗ ಮುಖ್ಯಸ್ಥರಾಗಿ ವರ್ಗಾವಣೆ
ಉಮೇಶ್ ಕುಮಾರ್ – ಆಡಳಿತ ವಿಭಾಗ ಎಡಿಜಿಪಿ ವರ್ಗಾವಣೆ
ದಿವ್ಯಾಜ್ಯೋತಿರಾಯ್- ಮಾನವಹಕ್ಕಗಳ ಆಯೋಗ
ರವಿಕಾಂತೇಗೌಡ – ಸಿಐಡಿ ವರ್ಗಾವಣೆ
ಲೋಕೇಶ್ ಕುಮಾರ್ – ಬಳ್ಳಾರಿ ಐಜಿ ವರ್ಗಾವಣೆ
ರಮಣ್ ಗುಪ್ತಾ- ಬೆಂಗಳೂರು ಇಂಟಲಿಜೆನ್ಸ್ ವರ್ಗಾವಣೆ
ಚಂದ್ರಗುಪ್ತ – ಮಂಗಳೂರು ಐಜಿಯಾಗಿ ವರ್ಗಾವಣೆ
ಶರಣಪ್ಪ – ಜಂಟಿ ಪೊಲೀಸ್ ಆಯುಕ್ತ ಸಿಸಿಬಿ ವರ್ಗಾವಣೆ
ಅನುಚೇತ್ – ಜಂಟಿ ಪೊಲೀಸ್ ಆಯುಕ್ತ ಸಂಚಾರ ವಿಭಾಗ
ರವಿ ಡಿ ಚೆನ್ನಣ್ಣದಣವರ್ – ಕಿಯೋನಿಕ್ಸ್ ನಿರ್ದೇಶಕರಾಗಿ ವರ್ಗಾವಣೆ
ರಮೇಶ್ – ಮೈಸೂರು ಸಿಟಿ ಕಮಿಷನರ್ ಆಗಿ ವರ್ಗಾವಣೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eight =
Remember me
