ಬೆಂಗಳೂರು:ವಿದ್ಯುತ್​ ಅವಡದಲ್ಲಿ ಮೃತಪಟ್ಟ ಹಾಸನದ ವ್ಯಕ್ತಿಯೊಬ್ಬರ ಪತ್ನಿ ಹಾಗೂ ಗಾಯಗೊಂಡಿದ್ದ ಬೆಂಗಳೂರಿನ ಅಪ್ರಾಪ್ತ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿರುವ ಹೈಕೋರ್ಟ್​, 2017-18ರ ನಡುವೆ ಸಂಭವಿಸಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 1.28 ಕೋಟಿ ರೂ. ಪರಿಹಾರ ಪಾವತಿಸುವಂತೆ ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್​) ಹಾಗೂ ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ (ಬೆಸ್ಕಾಂ) ಆದೇಶಿಸಿದೆ. ವಿದ್ಯುತ್​ ಸ್ಪರ್ಶದಿಂದ ಸಾವಿಗೀಡಾಗಿದ್ದ ಸಕಲೇಶಪುರದ ಕೃಷಿ ಕೂಲಿಕಾರ್ಮಿಕ ಎನ್​.ಎಂ. ಸುಬ್ರಹ್ಮಣ್ಯ (36) ಪತ್ನಿ ರೇಖಾ ಹಾಗೂ ಗಾಯಗೊಂಡಿದ್ದ ಬೆಂಗಳೂರಿನ ಬಾಲಕಿ ಕೆ. ಚಂದನಾ (15) ಮತ್ತು ಮುಯೀಜ್​ ಅಹ್ಮದ್​ ಶರೀಫ್​ (7) ಪರಿಹಾರ ಕೋರಿ ಹೈಕೋರ್ಟ್​ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್​.ಸುನಿಲ್​ ದತ್​ ಯಾದವ್​ ಅವರಿದ್ದ ಪೀಠ, ಚಂದನಾಗೆ 51,76,000 ರೂ. ಪರಿಹಾರ ಪಾವತಿಸುವಂತೆ ಬೆಸ್ಕಾಂಗೆ ಹಾಗೂ ಮುಯಿಜ್​ ಅಹ್ಮದ್​ ಶರೀಫ್​ಗೆ 50,82,050 ರೂ. ಮತ್ತು ಸುಬ್ರಹ್ಮಣ್ಯ ಅವರ ಪತ್ನಿ ರೇಖಾಗೆ 25,52,500 ರೂ. ಪರಿಹಾರ ಪಾವತಿಸುವಂತೆ ಕೆಪಿಟಿಎಸ್​ಎಲ್​ಗೆ ನಿರ್ದೇಶಿಸಿದೆ.
ವರದಿಗೆ ಕಾಯದೆ ಪರಿಹಾರ ನೀಡಬೇಕು: ಓವರ್​ ಹೆಡ್​ ವಿದ್ಯುತ್​ ಲೇನ್​ಗಳಿಂದ ಅವಡ ಸಂಭವಿಸಿದ ಸಂದರ್ಭದಲ್ಲಿ ವಿದ್ಯುತ್​ ಪೂರೈಕೆ ಕಂಪನಿಗಳು ಮುಖ್ಯ ಎಲೆಕ್ಟ್ರಿಕಲ್​ ನಿರೀಕ್ಷಣಾ ಕಚೇರಿಯಿಂದ (ಸಿಇಐಜಿ) ಟನೆಗೆ ಸಂಬಂಧಿಸಿದ ವರದಿಗಾಗಿ ಕಾಯದೆ 2 ತಿಂಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್​ ತೀರ್ಪಿನಲ್ಲಿ ವಿದ್ಯುತ್​ ಪೂರೈಕೆ ಸಂಸ್ಥೆಗಳಿಗೆ ಆದೇಶ ನೀಡಿದೆ.
ಪರಿಹಾರ ನಿರಾಕರಿಸಿದ್ದ ಕೆಪಿಟಿಸಿಎಲ್​: ಕೃಷಿ ಕಾರ್ಮಿಕ ಸುಬ್ರಹ್ಮಣ್ಯ 2018ರ ಫೆ.22ರಂದು ಸಕಲೇಶಪುರದ ಕಾಫಿ ಎಸ್ಟೇಟ್​ನಲ್ಲಿ ಅಲ್ಯೂಮಿನಿಯಂ ಏಣಿಯ ಮೇಲೆ ನಿಂತು ಕಾಳು ಮೆಣಸು ಕೊಯ್ಲು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೆ.ವಿ. ಸಾಮರ್ಥ್ಯದ ವಿದ್ಯುತ್​ ತಂತಿ ಏಣಿಯ ಸಂಪರ್ಕಕ್ಕೆ ಬಂದು ವಿದ್ಯುತ್​ ಪ್ರವಹಿಸಿತ್ತು. ಇದರಿಂದ, ಸುಬ್ರಹ್ಮಣ್ಯ ಮೃತಪಟ್ಟಿದ್ದರು.
ಟನೆಯಲ್ಲಿ ತನ್ನ ತಪ್ಪಿಲ್ಲ, ಮೃತ ಕಾರ್ಮಿಕ ಕೆಲಸ ಮಾಡುತ್ತಿದ್ದ ತೋಟದ ಮಾಲೀಕ ರ್ನಿಲಕ್ಷ$್ಯವೇ ಕಾರಣವೆಂದಿದ್ದ ಕೆಪಿಟಿಸಿಎಲ್​ ಪರಿಹಾರ ಪಾವತಿಸಲು ನಿರಾಕರಿಸಿತ್ತು. ಇದರಿಂದ ಮೃತನ ಪತ್ನಿ ರೇಖಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ, ಪರಿಹಾರ ನೀಡಲು ಕೆಪಿಟಿಸಿಎಲ್​ಗೆ ಆದೇಶಿಸುವಂತೆ ಕೋರಿದ್ದರು.
ಪರಿಹಾರ ಹೆಚ್ಚಳ ಕೋರಿ ಅರ್ಜಿಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿ ನಿವಾಸಿ ಚಂದನಾ 2017ರ ಅ.19ರಂದು ಕಬ್ಬಿಣದ ಕಂಬಿಗಳನ್ನು ಹೊತ್ತುಕೊಂಡು ಮನೆಯ ಮೆಟ್ಟಿಲೇರುತ್ತಿದ್ದ ಸಂದರ್ಭ ಪಕ್ಕದಲ್ಲೇ ಹಾದು ಹೋಗಿದ್ದ 11 ಕೆ.ವಿ. ಸಾಮರ್ಥ್ಯದ ವಿದ್ಯುತ್​ ತಂತಿಗಳು ಸ್ಪರ್ಶಿಸಿತ್ತು. ಇದರಿಂದ, ವಿದ್ಯುತ್​ ಪ್ರವಹಿಸಿ ಚಂದನಾ ಶೇ.79 ಅಂಗ ವೈಕಲ್ಯಕ್ಕೆ ತುತ್ತಾಗಿದ್ದಳು. ಬೆಸ್ಕಾಂ ಆಕೆಗೆ 2.5 ಲಕ್ಷ ರೂ. ಪರಿಹಾರ ನೀಡಿತ್ತು. ಗುರಪ್ಪನಪಾಳ್ಯದ ಮುಯೀಜ್​ ಅಹ್ಮದ್​ ಶರೀಫ್​ 2017ರ ಸೆ.16ರಂದು ಕ್ರಿಕೆಟ್​ ಬಾಲ್​ ತೆಗೆದುಕೊಳ್ಳಲು ಪಕ್ಕದ ಕಟ್ಟಡಕ್ಕೆ ಜಿಗಿದಿದ್ದ. ಈ ಸಂದರ್ಭದಲ್ಲಿ 66 ಕೆ.ವಿ. ಸಾಮರ್ಥ್ಯದ ಹೈ ಟೆನ್ಷನ್​ ಲೇನ್​ನ ಇಂಡಕ್ಷನ್​ ಜೋನ್​ ಸಮೀಪಕ್ಕೆ ಹೋದಾಗ ವಿದ್ಯುತ್​ ಪ್ರವಹಿಸಿ ಶೇ.80 ಸುಟ್ಟಗಾಯಗಳಾಗಿತ್ತು. ಆತನಿಗೆ ಬೆಸ್ಕಾಂ 5 ಲಕ್ಷ ರೂ. ಪರಿಹಾರ ಪಾವತಿಸಿತ್ತು. ಇದರಿಂದ, ಎರಡೂ ಪ್ರಕರಣಗಳಲ್ಲಿ ಪರಿಹಾರ ಹೆಚ್ಚಳ ಕೋರಿ ಹೈಕೋರ್ಟ್​ ಮೆಟ್ಟಿಲೇರಿದ್ದರು.
ಕ್ರಿಮಿನಲ್​ ಕೇಸ್​ ಇದ್ದರೂ ಪಾಸ್​ಪೋರ್ಟ್​ ನವೀಕರಣಬೆಂಗಳೂರು: ಪಾಸ್​ಪೋರ್ಟ್​ ನವೀಕರಣಕ್ಕೆ ಅರ್ಜಿ ಸಲ್ಲಿಸುವವರ ವಿರುದ್ಧ ಕ್ರಿಮಿನಲ್​ ಪ್ರಕರಣ ಬಾಕಿ ಇದ್ದರೆ ನವೀಕರಣಕ್ಕಾಗಿ ಸಂಬಂಧಪಟ್ಟ ಮ್ಯಾಜಿಸ್ಟ್ರೆಟ್​ ಕೋರ್ಟ್​ನಿಂದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೈಕೋರ್ಟ್​ ಆದೇಶಿಸಿದೆ.
ಕ್ರಿಮಿನಲ್​ ಪ್ರಕರಣ ಬಾಕಿ ಇರುವ ಹಿನ್ನೆಲೆಯಲ್ಲಿ ಪಾಸ್​ಪೋರ್ಟ್​ ನವೀಕರಣಕ್ಕೆ ಮ್ಯಾಜಿಸ್ಟ್ರೆಟ್​ ಅನುಮತಿ ಪಡೆಯುವಂತೆ ಸೂಚಿಸಿದ್ದ ಪ್ರಾದೇಶಿಕ ಪಾಸ್​ಪೋರ್ಟ್​ ಅಧಿಕಾರಿಯ ಕ್ರಮ ಪ್ರಶ್ನಿಸಿ ಮಾಜಿ ಶಾಸಕ ಅಶೋಕ್​ ಖೇಣಿ ಸಹೋದರ ಸಂಜಯ್​ ಖೇಣಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್​.ವಿಶ್ವಜಿತ್​ ಶೆಟ್ಟಿ ಅವರಿದ್ದ ಪೀಠ, ಹೊಸದಾಗಿ ಪಾಸ್​ಪೋರ್ಟ್​ ಪಡೆಯಲು ಅರ್ಜಿ ಸಲ್ಲಿಸಿದವರ ವಿರುದ್ಧ ಕ್ರಿಮಿನಲ್​ ಪ್ರಕರಣ ಬಾಕಿಯಿದ್ದರೆ ಮಾತ್ರ ಮ್ಯಾಜಿಸ್ಟ್ರೆಟ್​ ಕೋರ್ಟ್​ನಿಂದ ಅನುಮತಿ ಪಡೆಯಬೇಕಾಗುತ್ತದೆ, ಪಾಸ್​ಪೋರ್ಟ್​ ನವೀಕರಣಕ್ಕೆ ಅನುಮತಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.ಜತೆಗೆ, ಪಾಸ್​ಪೋರ್ಟ್​ ನವೀಕರಣಕ್ಕಾಗಿ ಸಂಬಂಧಪಟ್ಟ ಮ್ಯಾಜಿಸ್ಟ್ರೆಟ್​ ಅವರಿಂದ ಅನುಮತಿ ಪಡೆಯುವಂತೆ ಅರ್ಜಿದಾರ ಸಂಜಯ್​ ಖೇಣಿಗೆ ಸೂಚಿಸಿ ಬೆಂಗಳೂರಿನ ಪ್ರಾದೇಶಿಕ ಪಾಸ್​ಪೋರ್ಟ್​ ಅಧಿಕಾರಿ 2022ರ ಜ.12 ಮತ್ತು ಮಾ.11ರಂದು ಹೊರಡಿಸಿದ್ದ ಸಂವಹನಗಳನ್ನು ರದ್ದುಪಡಿಸಿರುವ ಹೈಕೋರ್ಟ್​, ಪಾಸ್​ಪೋರ್ಟ್​ ನವೀಕರಿಸಿಕೊಳ್ಳಲು ಅರ್ಜಿದಾರರು ಅರ್ಹರಾಗಿದ್ದರೆ ಮ್ಯಾಜಿಸ್ಟ್ರೆಟ್​ ಕೋರ್ಟ್​ನಿಂದ ಅನುಮತಿ ಪಡೆಯುವಂತೆ ಸೂಚಿಸದೆ ಅವರ ಅರ್ಜಿಯನ್ನು ತುರ್ತಾಗಿ ಪರಿಗಣಿಸಬೇಕು ಎಂದು ಪಾಸ್​ಪೋರ್ಟ್​ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + one =
Remember me
