ಬೆಂಗಳೂರು:ವಿಪ್ರೊ ಕಂಪೆನಿಯ ಮಾಲೀಕರಾದ ಅಜೀಮ್​ ಪ್ರೇಮ್​ಜಿ ವಿರುದ್ಧ ಒಂದೇ ವಿಷಯವಾಗಿ ಮತ್ತೆ ಮತ್ತೆ ಹಲವು ಅರ್ಜಿಗಳನ್ನು ಸಲ್ಲಿಸಿದ ಸರ್ಕಾರೇತರ ಸಂಸ್ಥೆಯೊಂದಕ್ಕೆ ಕರ್ನಾಟಕ ಹೈಕೋರ್ಟ್ 10 ಲಕ್ಷ ರೂ. ದಂಡ ವಿಧಿಸಿದೆ. ಕಾನೂನು ಪ್ರಕ್ರಿಯೆಯನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಶಿಕ್ಷೆಯಂತೆ ವಿಧಿಸಲಾಗಿರುವ ಈ ಮೊತ್ತವನ್ನು ನಾಲ್ಕು ವಾರಗಳಲ್ಲಿ ಕೋರ್ಟಿಗೆ ಜಮಾ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ನಾಟ್​ ಫಾರ್ ಪ್ರಾಫಿಟ್​ ಕಂಪೆನಿ ಎನ್ನಲಾದ ಚೆನ್ನೈನ ‘ಇಂಡಿಯ ಅವೇಕ್ ಫಾರ್ ಟ್ರಾನ್ಸ್​ಪರೆನ್ಸಿ’ಯು ಅಜೀಂ ಹೆಚ್​. ಪ್ರೇಮ್​ಜಿ ಅವರ ಕೆಲವು ಕಂಪೆನಿಗಳಲ್ಲಿ ಆರ್ಥಿಕ ಅಕ್ರಮವಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ಅವರ ಮಾಲೀಕತ್ವದ ವಿದ್ಯಾ ಇನ್ವೆಸ್ಟ್​ಮೆಂಟ್ ಅಂಡ್ ಟ್ರೇಡಿಂಗ್ ಕಂಪೆನಿ, ರೀಗಲ್ ಇನ್ವೆಸ್ಟ್​ಮೆಂಟ್ ಅಂಡ್ ಟ್ರೇಡಿಂಗ್ ಕಂಪೆನಿ ಮತ್ತು ನೇಪಿಯನ್​ ಇನ್ವೆಸ್ಟ್​ಮೆಂಟ್ ಅಂಡ್ ಟ್ರೇಡಿಂಗ್ ಕಂಪೆನಿಗಳ ಶೇರು ವ್ಯವಹಾರ ಮತ್ತು ವಿಲೀನಕ್ಕೆ ಸಂಬಂಧಿಸಿದಂತೆ ತನಿಖೆ ಆದೇಶಿಸಿ ಕ್ರಮ ಕೈಗೊಳ್ಳಲು ಕೇಂದ್ರದ ಕಾರ್ಪೊರೇಟ್ ಅಫೇರ್ಸ್ ಸಚಿವಾಲಯಕ್ಕೆ ನಿರ್ದೇಶನ ಕೋರಿತ್ತು.
ಇದನ್ನೂ ಓದಿ:ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಹೊಸ ಕಾರು ಖರೀದಿಸಲು ಸಚಿವ-ಸಂಸದರಿಗೆ ಲಕ್ಷಾಂತರ ಹಣ ಕೊಡುತ್ತೆ ಸರ್ಕಾರ
ಪ್ರಕರಣದ ವಿಚಾರಣೆಯ ವೇಳೆ, ಪ್ರೇಮ್​ಜಿ ಅವರ ವಕೀಲರು ಇದೇ ಅರ್ಜಿದಾರರು ಈ ಮುನ್ನ ಮೂರು ಬೇರೆ ರಿಟ್ ಅರ್ಜಿಗಳಲ್ಲಿ ಸೆಬಿ, ಇಡಿ ಮತ್ತು ಆರ್​ಬಿಐಗಳಿಗೆ ಇದೇ ಆರೋಪಗಳ ಮೇಲೆ ತನಿಖೆ ನಡೆಸಲು ನಿರ್ದೇಶನ ಕೋರಿದ್ದರು. ಆ ಅರ್ಜಿಗಳನ್ನು ನ್ಯಾಯಾಲಯಗಳು ವಜಾ ಮಾಡಿದ್ದವು. ಅದಲ್ಲದೇ ಈ ನಿಟ್ಟಿನಲ್ಲಿ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ಸಂಸ್ಥೆಯೇ ಬೇಶರತ್ತಾಗಿ ವಾಪಸ್ ಪಡೆದಿತ್ತು. ಅಂಥದ್ದರಲ್ಲಿ ಹೊಸದಾಗಿ ದೂರು ನೀಡಿ ಮತ್ತೆ ಅದೇ ಕಾರಣವನ್ನು ನ್ಯಾಯಾಲಯದ ಮುಂದೆ ಎತ್ತುತ್ತಿದೆ ಎಂದು ಆಕ್ಷೇಪ ಸಲ್ಲಿಸಿದರು.
ವಿಚಾರ ಪರಾಮರ್ಶೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್​ಕುಮಾರ್, ಅವೇಕ್ ಫಾರ್ ಟ್ರಾನ್ಸ್​ಪರೆನ್ಸಿಯ ಅರ್ಜಿಯನ್ನು ವಜಾ ಮಾಡಿದರು. ಅದೇ ಆರೋಪಗಳ ಮೇಲೆ ಬೇರೆ ಬೇರೆ ವೇದಿಕೆಗಳ ಹೆಸರಲ್ಲಿ ಪರಿಹಾರ ಕೇಳುವುದು ಅಪರಾಧಿಕ ನ್ಯಾಯಾಂಗ ನಿಂದನೆಯಾಗುತ್ತದೆ. ಈ ರೀತಿಯಾಗಿ ಕಾನೂನು ಪ್ರಕ್ರಿಯೆಯನ್ನು ದುರುಪಯೋಗ ಪಡಿಸಿಕೊಂಡಿರುವುದಕ್ಕೆ ಶಿಕ್ಷೆಯಾಗಿ ವೆಚ್ಚಗಳನ್ನು ವಿಧಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು, ಇಂಡಿಯ ಅವೇಕ್ ಫಾರ್ ಟ್ರಾನ್ಸ್​ಪರೆನ್ಸಿ ಸಂಸ್ಥೆಗೆ ನಾಲ್ಕು ವಾರಗಳಲ್ಲಿ ಕೋರ್ಟ್​ ರಿಜಿಸ್ಟ್ರಾರ್​ಗೆ 10 ಲಕ್ಷ ರೂಪಾಯಿಗಳನ್ನು ಜಮಾ ಮಾಡಬೇಕೆಂದು ಆದೇಶಿಸಿದರು.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ
ದೆಹಲಿಗೆ ಹೋಗುವ ಪ್ರಯಾಣಿಕರಿಗೆ ಬೇಕು ಕರೊನಾ ನೆಗೆಟೀವ್ ವರದಿ
ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
