ಬೆಂಗಳೂರು:ರಸ್ತೆಯಲ್ಲಿ, ಫುಟ್​ಪಾತ್​ನಲ್ಲಿ ಓಡಾಡಬೇಕಾದರೆ ಕೇಬಲ್​ಗಳು, ಎಲೆಕ್ಟ್ರಿಕ್ ವೈರ್​ಗಳು ಮುಖಕ್ಕೆ ತಾಗುವುದು ಜನರಿಗೆ ಹೊಸತೇನಲ್ಲ. ಈ ಬಗ್ಗೆ ನಾಗರೀಕರು ದೂರು ಸಲ್ಲಿಸಿದರೂ ಸ್ಥಳೀಯ ಸಂಸ್ಥೆಗಳು ನಿರ್ಲಕ್ಷ್ಯ ವಹಿಸುತ್ತಲೇ ಬಂದಿವೆ. ಇದೀಗ ಕರ್ನಾಟಕ ಹೈಕೋರ್ಟ್ ನಾಗರೀಕರ ಈ ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಕೇಬಲ್​​ಗಳನ್ನು ಜೋತುಬಿಟ್ಟಿರುವ ಖಾಸಗಿ ಇಂಟರ್​ನೆಟ್, ಟಿವಿ ಮತ್ತು ಕೇಬಲ್ ಆಪರೇಟರ್​ಗಳ ವಿರುದ್ಧ ಕಾನೂನುರೀತ್ಯ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿಗೆ ಕೋರ್ಟ್ ನಿರ್ದೇಶಿಸಿದೆ.
ಬೆಂಗಳೂರಿನ ವಕೀಲರಾದ ಎನ್.ಪಿ.ಅಮೃತೇಶ್ ಅವರು ಕಾನೂನುಬಾಹಿರವಾಗಿ ರಸ್ತೆಗಳಲ್ಲಿ, ರಸ್ತೆಬದಿಗಳಲ್ಲಿ ತೂಗಾಡುತ್ತಿರುವ ಕೇಬಲ್ ಟಿವಿ, ಇಂಟರ್ನೆಟ್ ಅಥವಾ ಎಲೆಕ್ಟ್ರಿಕ್ ವೈರ್​ಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಇಂಥ ತೂಗಾಡುವ ಕೇಬಲ್​, ವೈರ್​ಗಳ ಫೋಟೋಗಳನ್ನು ಲಗತ್ತಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ಕೋರಿದ್ದಾರೆ.
ಇದನ್ನೂ ಓದಿ:ಆಸ್ಪತ್ರೆಯ ಡ್ರೆಸ್ ಚೇಂಜಿಂಗ್ ರೂಮಲ್ಲಿ ಕ್ಯಾಮೆರಾ! ಮೊಬೈಲ್ ಚಾರ್ಜ್​ಗೆ ಹಾಕಿ ರೆಕಾರ್ಡಿಂಗ್!
ಈ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್.ಎಸ್.ಮಗದುಮ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, “ತೂಗಾಡುತ್ತಿರುವ ಎಲೆಕ್ಟ್ರಿಕ್ ವೈರುಗಳು, ಟೆಲಿಫೋನ್ ಮತ್ತು ಟಿವಿ ಕೇಬಲ್​ಗಳು ಭಾರತದ ಎಲ್ಲ ನಗರಗಳಲ್ಲೂ ಸಾಮಾನ್ಯ ದೃಶ್ಯವಾಗಿಬಿಟ್ಟಿದೆ” ಎಂದು ಉದ್ಗರಿಸಿತು.
“ಫೋಟೋಗಳನ್ನು ನೋಡಿದರೇ ಅವು ಪಾದಚಾರಿಗಳಿಗೆ ವಾಹನಚಾಲಕರಿಗೆ ಅಪಾಯಕಾರಿ ಎಂಬುದು ಸ್ಪಷ್ಟವಾಗಿದೆ. ಬಳಕೆಗೆ ಯೋಗ್ಯವಾದ ರಸ್ತೆ ಮತ್ತು ಫುಟ್​ಪಾತ್​ಗಳನ್ನು ಹೊಂದುವುದು ಸಂವಿಧಾನಬದ್ಧ ಅಧಿಕಾರ. ಆದ್ದರಿಂದ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಬಿಬಿಎಂಪಿಯ ಕರ್ತವ್ಯವಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಅರ್ಜಿಯ ಮೇಲೆ ಹೆಚ್ಚಿನ ವಿಚಾರಣೆಯು ಮಾರ್ಚ್ 19ಕ್ಕೆ ಮುಂದೂಡಲ್ಪಟ್ಟಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಅಜೀಂ ಪ್ರೇಮ್​​ಜಿ ಹಿಂದೆ ಬಿದ್ದ ಎನ್​ಜಿಒಗೆ 10 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
