ನವದೆಹಲಿ:ಕರೊನಾ ಹೊಸ ತಳಿ ಜೆಎನ್.1 ಜಗತ್ತಿನಲ್ಲಿ ವಕ್ಕರಿಸಿರುವ ಜತೆಗೆ ದೇಶಾದ್ಯಂತ ಕೋವಿಡ್ ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಆ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಾತ್ರವಲ್ಲ, ನೆರೆರಾಜ್ಯಗಳಲ್ಲೇ ಕೋವಿಡ್ ಪ್ರಕರಣಗಳು ಹೆಚ್ಚಿರುವುದು ಆತಂಕ ಮೂಡಿಸಿದ್ದು, ಅದು ರಾಜ್ಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವ ಸೂಚನೆಯನ್ನು ನೀಡಿದೆ.
ಭಾನುವಾರ ಬೆಳಗ್ಗೆ ಬಿಡುಗಡೆಯಾದ ಕೋವಿಡ್​ಅಧಿಕೃತ ಮಾಹಿತಿ ಪ್ರಕಾರ ದೇಶದಲ್ಲಿ ಒಂದೇ ದಿನದಲ್ಲಿ 656 ಹೊಸ ಕೋವಿಡ್ ಪ್ರಕರಣಗಳು ಕಂಡುಬಂದಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 3,742ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳಲ್ಲಿ 3 ಸಾವಿರ ಕೇರಳವೊಂದರಲ್ಲೇ ಇದ್ದು, ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ರಾಜ್ಯದಲ್ಲಿ 271 ಸಕ್ರಿಯ ಪ್ರಕರಣಗಳಿವೆ, ಉಳಿದಂತೆ ನೆರೆರಾಜ್ಯಗಳಾದ ಮಹಾರಾಷ್ಟ್ರ (103), ತಮಿಳುನಾಡು (123) ಪ್ರಕರಣ ಗಳೊಂದಿಗೆ ನಂತರದ ಸ್ಥಾನದಲ್ಲಿವೆ. 24 ಗಂಟೆಗಳಲ್ಲಿ ಕೇರಳದಲ್ಲಿ ಕರೊನಾ ಇನ್ನೊಂದು ಬಲಿ ಪಡೆದಿದೆ. ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 656ರಲ್ಲಿ ಕೇರಳ 128 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಇಲ್ಲಿಯೂ ಕರ್ನಾಟಕ (96) ಎರಡನೇ ಸ್ಥಾನದಲ್ಲಿದೆ. ನೆರೆರಾಜ್ಯವಾದ ಮಹಾರಾಷ್ಟ್ರ 35 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ.
ಭಯ ಬೇಡವೆಂದು ಸಚಿವರ ಅಭಯಕೋವಿಡ್ ಕುರಿತಂತೆ ಜನ, ವ್ಯಾಪಾರಸ್ಥರು ಭಯ ಪಡಬೇಕಾಗಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್್ಕ ಹೇಳಿದ್ದಾರೆ. ಗೋವಾದಲ್ಲಿ ಭಾನುವಾರ ‘ಸಾಗರ್ ಮಂಥನ್ 2.0’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನೊಮ್ಮೆ ಲಾಕ್​ಡೌನ್ ಮಾಡುವ ಪರಿಸ್ಥಿತಿ ಎದುರಾದರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ, ಆ ಬಗ್ಗೆ ಭಯ ಪಡುವ ಅಗತ್ಯವಿಲ್ಲ, ಈ ಹಿಂದೆಯೂ ನಾವು ಅದನ್ನು ಎದುರಿಸಿದ್ದೇವೆ, ಅದು ಇನ್ನೊಮ್ಮೆ ಬಂದರೂ ಎದುರಿಸುತ್ತೇವೆ ಎಂದು ಅಭಯ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಕೋವಿಡ್ 19, ಅದರ ಹೊಸತಳಿ ಜೆಎನ್.1 ಮತ್ತು ಇತರ ಉಸಿರಾಟ ಸಂಬಂಧಿ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ನಿಗಾ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಆಗ್ನೇಯ ಏಷ್ಯಾದ ಎಲ್ಲ ದೇಶಗಳಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಸಾರ್ವಜನಿಕರೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಹೇಳಿದೆ. ದೇಶಗಳು ನಿಗಾ ಹೆಚ್ಚಿಸುವ ಜತೆಗೆ ಪರೀಕ್ಷೆಗಳನ್ನು ಕೈಗೊಂಡು ಅಂಕಿ-ಅಂಶ ಹಂಚಿಕೊಳ್ಳಬೇಕು ಎಂದು ಡಬ್ಲ್ಯುಎಚ್​ಒ (ಆಗ್ನೇಯ ಏಷ್ಯಾ) ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ತಿಳಿಸಿದ್ದಾರೆ.
ಆಕ್ಸಿಜನ್, ವೆಂಟಿಲೇಟರ್​ಗೆ ಸಿದ್ಧತೆಸಕ್ರಿಯ ಪ್ರಕರಣ ಹಾಗೂ ದೈನಂದಿನ ಪ್ರಕರಣ ಎರಡರಲ್ಲೂ ದೇಶದಲ್ಲಿ 3ನೇ ಸ್ಥಾನದಲ್ಲಿರುವ ಮಹಾರಾಷ್ಟ್ರ ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಆಕ್ಸಿಜನ್ ಸಿಲಿಂಡರ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಳ್ಳಲು ಗಮನ ಹರಿಸಿದೆ. ರಾಜ್ಯದ ಎಲ್ಲ ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಕರ್ಯಗಳ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳುವಂತೆ ಅಲ್ಲಿನ ಸಚಿವ ಸಂಜಯ್ ಬನ್ಸೋಡೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ 24 ಗಂಟೆಗಳಲ್ಲಿ 1,441 ಕರೊನಾ ಪರೀಕ್ಷೆಬೆಂಗಳೂರು: ರಾಜ್ಯದಲ್ಲಿ ನಿಧಾನವಾಗಿ ಕರೊನಾ ಕೇಸ್​ಗಳು ಹೆಚ್ಚುತ್ತಿವೆ. ಕಳೆದ 24 ಗಂಟೆಯಲ್ಲಿ ರಾಜ್ಯಾದ್ಯಂತ 1,441 ಕೋವಿಡ್ ಪರೀಕ್ಷೆ ನಡೆದಿದ್ದು, ಇದರಲ್ಲಿ 1,135 ಆರ್​ಟಿಪಿಸಿಆರ್, 306 ರ್ಯಾಪಿಡ್ ಆಂಟಿಜನ್ ಟೆಸ್ಟ್ (ಆರ್​ಎಟಿ) ಪರೀಕ್ಷೆ ನಡೆಸಲಾಗಿದೆ. ಭಾನುವಾರ 106 ಹೊಸ ಕೇಸ್​ಗಳು ವರದಿಯಾಗಿವೆ. ಸಾವಿನ ವರದಿ ಇಲ್ಲ. 33 ಮಂದಿ ಕೋವಿಡ್​ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಒಟ್ಟು ಸಕ್ರಿಯವಾಗಿರುವ 344 ಪ್ರಕರಣಗಳ ಪೈಕಿ 323 ಮಂದಿ ಮನೆಯಲ್ಲೇ ಪ್ರತ್ಯೇಕ ವಾಸವಿದ್ದರೆ, 21 ಮಂದಿ ಆಸ್ಪತ್ರೆಯಲ್ಲಿದ್ದಾರೆ. 7 ಮಂದಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಸಿದ್ದ 899 ಪರೀಕ್ಷೆಗಳಲ್ಲಿ 95 ಮಂದಿಗೆ ಕರೊನಾ ದೃಢಪಟ್ಟಿದೆ. ಪ್ರತಿ ನಿತ್ಯ 5 ಸಾವಿರ ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಗುರಿ ಹಾಕಿಕೊಂಡಿದೆ. ಹೆಚ್ಚು ಕೋವಿಡ್ ಪರೀಕ್ಷೆ ನಡೆಸುತ್ತಿರುವ ದೇಶದ ಮೊದಲ ಮೂರು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?ರಾಜ್ಯದ ಇತರ ಜಿಲ್ಲೆಗಳಗಿಂತ ರಾಜಧಾನಿಯಲ್ಲಿ ಒಟ್ಟು 297 ಸಕ್ರಿಯ ಕೇಸ್​ಗಳಿವೆ. ಮೈಸೂರು 18, ಶಿವಮೊಗ್ಗ 7, ದಕ್ಷಿಣ ಕನ್ನಡ 5, ಚಿಕ್ಕಮಗಳೂರು 4, ಮಂಡ್ಯ 3, ರಾಮನಗರ 3, ಚಾಮರಾಜನಗರ 3, ಬಳ್ಳಾರಿ 2, ತುಮಕೂರು 2 ಕೇಸ್​ಗಳಿವೆ.
ಇಂದು ಆರೋಗ್ಯ ಸಚಿವರ ಸಭೆಸೋಮವಾರ (ಡಿ.25) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೋವಿಡ್ ಸಂಪುಟ ಉಪಸಮಿತಿ ಸಭೆ ನಡೆಯಲಿದೆ. ಕೋವಿಡ್ ನಿಯಂತ್ರಣ, ಪರಿಕರಗಳ ನಿರ್ವಹಣೆ, ಸೋಂಕು ಕೇಸ್​ಗಳ ಸಂಖ್ಯೆ, ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಲಹೆಗಳನ್ನು ಆಧರಿಸಿ ಅಗತ್ಯ ಕ್ರಮವಹಿಸುವ ಜವಾಬ್ದಾರಿಯನ್ನು ಉಪಸಮಿತಿಗೆ ಸರ್ಕಾರ ಒಪ್ಪಿಸಿದೆ.
ರೈಲು ಚಲಿಸುವಾಗಲೇ ಹಳಿ ಮೇಲೆ ಬಿದ್ದ ಮಹಿಳೆ, ಮಕ್ಕಳು..ಮುಂದೇನಾಯ್ತು? ಮೈ ಜುಮ್ಮೆನಿಸುವ ವೀಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 4 =
Remember me
