ಮಂಜೇಶ್ವರ:ನಿಗದಿತ ಮುಹೂರ್ತಕ್ಕೆ ವಿವಾಹವಾಗಲಾರದೆ  ಎರಡು ರಾಜ್ಯಗಳ ವಧು-ವರರು ಗಡಿ ಭಾಗಕ್ಕೆ ಆಗಮಿಸಿ ಅಲ್ಲೇ ತಾಳಿ ಕಟ್ಟಲು ಮುಂದಾದ ಪ್ರಸಂಗ ಸೋಮವಾರ ನಡೆದಿದೆ.
ಕಾಸರಗೋಡು ಜಿಲ್ಲೆ ಮುಳ್ಳೇರಿಯ ನಿವಾಸಿ ಪುಷ್ಪರಾಜ್ ಅವರ ವಿವಾಹ ಮಂಗಳೂರಿನ ವಿಮಲಾರೊಂದಿಗೆ ಸೋಮವಾರ ಮಂಗಳೂರಿನಲ್ಲಿ ನಿಗದಿಯಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಕೇರಳ- ಕರ್ನಾಟಕ ಪ್ರಯಾಣ ನಿರ್ಬಂಧಿಸಿದ್ದರಿಂದ ಪಾಸ್‌ಗಾಗಿ ಪುಷ್ಪರಾಜ್ ಹಲವು ಬಾರಿ ಅರ್ಜಿ ಸಲ್ಲಿಸಿದ್ದರು.
ಆದರೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಅನುಮತಿ ನೀಡಿರಲಿಲ್ಲ. ಆದರೂ ಸೋಮವಾರ ಬೆಳಗ್ಗೆ 7ಕ್ಕೆ ಮಂಗಳೂರಿಗೆ ತೆರಳಲು ವರ ತನ್ನ ಸಂಬಂಧಿಕರೊಂದಿಗೆ ತಲಪಾಡಿ ಗಡಿಗೆ ಬಂದಿದ್ದರು. ಬೆಳಗ್ಗೆ 11 ಗಂಟೆಗೆ ವಿವಾಹ ಮುಹೂರ್ತವಿತ್ತು.
ಇದನ್ನೂ ಓದಿ:ಊರಿಗೆ ಹೋಗಲು ಖುಷಿಯಿಂದ ಬಂದಿದ್ದ ಕಾರ್ವಿುಕರಿಗೆ ಕೊನೆ ಕ್ಷಣದಲ್ಲಿ ನಿರಾಸೆ
ಆದರೆ ಅಧಿಕಾರಿಗಳು ಮಂಗಳೂರಿಗೆ ತೆರಳಲು ಅವಕಾಶ ನೀಡಲಿಲ್ಲ. ವರನ ದಿಬ್ಬಣ ಗಡಿಯಲ್ಲಿ ಸಿಲುಕಿಕೊಂಡಿರುವುದನ್ನು ಅರಿತ ವಧು ಮತ್ತು ಮನೆಯವರು ಸಹ ತಲಪಾಡಿಗೆ ಆಗಮಿಸಿದ್ದರು. ಜಿಲ್ಲಾಡಳಿತ ಮಣಿಯದಿದ್ದುದರಿಂದ ಮದುಮಕ್ಕಳು ಗಡಿಯಲ್ಲೇ ತಾಳಿ ಕಟ್ಟಲು ತೀರ್ಮಾನಿಸಿದರು.
ಕೊನೆಗೂ ಜಿಲ್ಲಾಡಳಿತ ಮಧ್ಯಾಹ್ನದ ಬಳಿಕ ಪಾಸ್ ನೀಡಿತು. ಸಾಯಂಕಾಲ ವಧುವನ್ನು ಮುಳ್ಳೇರಿಯದ ವರನ ಮನೆಗೆ ಕರೆದೊಯ್ದು ರಾತ್ರಿ ವಿವಾಹ ನಡೆಸಲಾಯಿತು. ಈಗ ವಧು-ವರ ಇಬ್ಬರಿಗೂ ‘ಹೋಂ ಕ್ವಾರಂಟೈನ್’ ವಿಧಿಸಲಾಗಿದೆ.
ರಾಜ್ಯದ 40 ಲಕ್ಷ ಜನರಿಗೆ ಮೇ 26ರಿಂದ ಉಚಿತ ಧಾನ್ಯ ವಿತರಣೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − 6 =
Remember me
