| ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಎಲೆಕ್ಟ್ರಿಕಲ್ ವಾಹನ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಬೆಳವಣಿಗೆ ಕಂಡು ಬಂದಿದ್ದು, ಅಮೆರಿಕಾ ಮೂಲದ ಕಂಪನಿಯೊಂದು ಎಲೆಕ್ಟ್ರಿಕಲ್ ವಿಮಾನ ಸಿದ್ಧಪಡಿಸಿದೆ. ಕನ್ನಡತಿ ಶೈಲಶ್ರೀ ಕುರುವತ್ತಿ ಕೂಡ ಯೋಜನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಯುಎಸ್​ಎನ್ ಕ್ಯಾಲಿಫೋರ್ನಿಯಾದ ಜಾಬಿ ಏವಿಯೇಷನ್ ಎಂಬ ಕಂಪನಿಯು ಎಲೆಕ್ಟ್ರಿಕಲ್ ವಿಮಾನ ನಿರ್ಮಾಣ ಮಾಡಿದ್ದು, ಈಗಾಗಲೆ ಒಂದು ವಿಮಾನವನ್ನು ಪ್ರಾಯೋಗಿಕವಾಗಿ ಹಾರಾಡಿಸಿದೆ. ವಿಮಾನ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಜಾಬಿ ಏವಿಯೇಷನ್ ಕಂಪನಿ ಏರ್ ಟ್ಯಾಕ್ಸಿ ಸೇವೆಗಾಗಿಯೇ ಇಲೆಕ್ಟ್ರಿಕಲ್ ವಿಮಾನ ಸಿದ್ಧಪಡಿಸಲು ಮುಂದಾಗಿದೆ.
ವಿಮಾನದ ಹೆಲಿಕಾಪ್ಟರ್ ಆಕಾರದಲ್ಲಿದೆ. ಆದರೆ, ವಿಮಾನದಂತೆ ಸಂಚಾರ ಮಾಡಲಿದ್ದು, ವಿಮಾನದ ವೇಗಕ್ಕೆ ಸರಿಸಮವಾಗಿದೆ. ಇದನ್ನು ಲ್ಯಾಂಡಿಂಗ್ ಮಾಡಲು ಯಾವುದೇ ರನ್​ವೇ ಅವಶ್ಯವಿಲ್ಲ. ಬದಲಾಗಿ ಮನೆ ಮೇಲೆ ಚಿಕ್ಕ ಜಾಗವಿದ್ದರೂ ಲ್ಯಾಂಡಿಂಗ್ ಮಾಡಬಹುದು.
ಸದ್ಯ ವಿಮಾನವನ್ನು ಪ್ರಾಯೋಗಿಕವಾಗಿ ಹಾರಾಟ ಮಾಡಲು ಯುಎಸ್​ಎ ಸರ್ಕಾರ ಅನುಮತಿ ನೀಡಿದೆ. ಪ್ರಾಯೋಗಿಕವಾಗಿ ಯಶಸ್ವಿಯಾದರೆ ಮುಂದಿನ 2025ರೊಳಗೆ ನೂರಾರು ವಿಮಾನ ಸಿದ್ಧಪಡಿಸಿ ಜಗತ್ತಿನಾದ್ಯಂತ ಹಾರಾಟ ಆರಂಭಿಸಲಾಗುವುದು ಎಂದು ಕಂಪನಿ ತನ್ನ ವೆಬ್​ಸೆಟ್​ನಲ್ಲಿ ಹೇಳಿಕೊಂಡಿದೆ.
ಆದರೆ, ವಿಮಾನವನ್ನು ಎಷ್ಟು ಗಂಟೆ ಚಾರ್ಜ್ ಮಾಡಬಹುದು. ಎಷ್ಟು ಗಂಟೆ ಚಾರ್ಜ್ ಮಾಡಿದರೆ ಎಷ್ಟು ದೂರ ಕ್ರಮಿಸಲಿದೆ. ಬ್ಯಾಟರಿ ವ್ಯವಸ್ಥೆ ಏನಿದೆ ಎನ್ನುವುದರ ಬಗ್ಗೆ ಕಂಪನಿಯವರು ಮಾಹಿತಿ ಹಂಚಿಕೊಂಡಿಲ್ಲ. ಪ್ರಾಯೋಗಿಕವಾಗಿ ಯಶಸ್ವಿಯಾದ ಬಳಿಕ ಮಾರುಕಟ್ಟೆಗೆ ವಿಮಾನ ಮಾರಾಟಕ್ಕೆ ಬಿಡುವ ಮುನ್ನ ಸಂಪೂರ್ಣ ಮಾಹಿತಿ ದೊರೆಯಲಿದೆ.
ರಾಣೆಬೆನ್ನೂರಿನ ಕನ್ನಡತಿ ಸಾಥ್:ಇಲೆಕ್ಟ್ರಿಕಲ್ ವಿಮಾನ ನಿರ್ವಣದಲ್ಲಿ ಕನ್ನಡತಿಯ ಸಾಥ್ ಕೂಡ ಇದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರ ನಗರದ ಶೈಲಶ್ರೀ ಕುರುವತ್ತಿ ಎಂಬುವವರು ಬೆಳಗಾವಿ ಕೆಎಲ್​ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈಯನ್ಸ್ ಓದಿದ್ದು, ಸದ್ಯ ಕ್ಯಾಲಿಫೋರ್ನಿಯಾದ ಜಾಬಿ ಏವಿಯೇಷನ್ ಕಂಪನಿಯಲ್ಲಿ ವಿಮಾನ ತಯಾರಿಕೆ ವಿಭಾಗದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ಪಿಕ್​ನಿಕ್​ಗೆ ತೆರಳಿದ್ದ 27 ವರ್ಷದ ಯುವಕ ಹೃದಯಾಘಾತದಿಂದ ಸಾವು!

ತಮ್ಮನನ್ನು ಉಳಿಸಲು ಹೋದ ಅಕ್ಕ, ಅವರಿಬ್ಬರನ್ನು ರಕ್ಷಿಸಲು ಹೋದ ಅಮ್ಮ: ಕೊನೆಗೆ ಮೂವರೂ ಬದುಕಲಿಲ್ಲ!; ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eleven =
Remember me
