ಬೆಂಗಳೂರು:ಸಭಾಪತಿ ಪತ್ರಾಪಚಂದ್ರ ಶೆಟ್ಟಿ ಅವರ ವಿರುದ್ಧದ ಅವಿಶ್ವಾಸ ವಿಚಾರ ವಿಧಾನಪರಿಷತ್​ನಲ್ಲಿ ಇಂದು ಹೈಡ್ರಾಮಾಕ್ಕೆ ಕಾರಣವಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಮಾಧುಸ್ವಾಮಿ, ಸಭಾಪತಿ ಸ್ಥಾನದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಸಭಾಪತಿ ಸ್ಥಾನದಲ್ಲಿ ಉಪಸಭಾಪತಿ ಕುಳಿತಾಗ ಕಾಂಗ್ರೆಸ್ ಸದಸ್ಯರು ನಡೆದುಕೊಂಡ ರೀತಿಯನ್ನು ಅವರು ಖಂಡಿಸಿದ್ದಾರೆ.
ರಾಜ್ಯಪಾಲರಿಗೆ ಮೊರೆ ಹೋಗುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತೇವೆ.–ಲಕ್ಷ್ಮಣ ಸವದಿಡಿಸಿಎಂ
ವಿಧಾನ ಪರಿಷತ್ ನಲ್ಲಿ ಗಲಾಟೆಯಾಗಿರುವುದು ಅಪರೂಪ. ಪ್ರಜ್ಞಾವಂತರು, ಹಿರಿಯರು ಇರುವ ಸದನಕ್ಕೆ ಕಳಂಕ ತಂದ ಘಟನೆ. ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದು ಪ್ರಜಾತಂತ್ರ‌ ವಿರೋಧಿ ಕ್ರಮ.ಆರ್​.ಅಶೋಕ್, ಸಚಿವ
ಸಿಎಂ ಜತೆ ಚರ್ಚಿಸಿದ ಬಳಿಕ ಮುಂದಿನ ನಡೆಯ ತೀರ್ಮಾನ ತೆಗೆದುಕೊಳ್ಳುತ್ತೇವೆ.–ಗೋವಿಂದ ಕಾರಜೋಳ
ಅವಿಶ್ವಾಸ ಮಂಡನೆ ಅರ್ಜಿ ಹದಿನಾಲ್ಕು ದಿನ ಮುಗಿದು, ನಿಯಮದ ಪ್ರಕಾರ ಐದು ದಿನಗಳೊಳಗೆ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಗೆ ನೀಡಬೇಕಿತ್ತು. ಇವತ್ತು ಐದನೇ ದಿನ. ಅಜೆಂಡಾದಲ್ಲಿ ಅವಿಶ್ವಾಸ ನಿರ್ಣಯದ ವಿಚಾರ ಇರಲಿಲ್ಲ.‌ ನಾವು ಈ ಬಗ್ಗೆ ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ಸ್ಪಷ್ಟ ಮಾಹಿತಿ ನೀಡಿದರೂ ಬೇರೆ ವಿಷಯವನ್ನು ಅಜೆಂಡಾದಲ್ಲಿ ಸೇರಿಸಿದ್ದರು.
ಇದನ್ನೂ ಓದಿ:ಸಭಾಪತಿ ವಿರುದ್ದ ಅವಿಶ್ವಾಸ ಮಂಡನೆಗೆ ಸಿದ್ಧತೆ – ಮೇಲ್ಮನೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ?
ಹೀಗಾಗಿ, ಸಭಾಪತಿಯವರಿಗೆ ಆ ಸ್ಥಾನದಲ್ಲಿ ಕೂರುವ ಅವಕಾಶ ಸಿಗುವುದಿಲ್ಲ. ಈ ಕಾರಣಕ್ಕೆ ಉಪ ಸಭಾಪತಿಯವರನ್ನು ಸದನ ನಡೆಸಲು ಕೋರಿದೆವು ಅವರು ಕುಳಿತಾಗ ಕಾಂಗ್ರೆಸ್ ನವರು ಅಸಂವಿಧಾನಿಕವಾಗಿ ನಡೆದುಕೊಂಡಿದ್ದು, ಸದನಕ್ಕೆ ಕಪ್ಪು ಚುಕ್ಕೆಯಾಗಿದೆ. ಮುಂದೇನು ಮಾಡಬೇಕೆಂದು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ವಿಧಾನಪರಿಷತ್ ಹೈಡ್ರಾಮಾ : ಕೈ-ಕೈ ಮಿಲಾಯಿಸಿದ್ರು, ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿಯನ್ನು ದರ ದರನೆ ಎಳೆದೊಯ್ದರು ಕಾಂಗ್ರೆಸ್​ ಸದಸ್ಯರು

‘ಅವರು ಪೀಠದಲ್ಲಿ ಕೂರಿಸಿದ್ರು, ಇವರು ಪೀಠದಿಂದ ಎಳೆದೊಯ್ದರು-ನಾನೇನು ಮಾಡಲಿ?’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + 19 =
Remember me
