ಬೆಂಗಳೂರು:ತಿದ್ದುಪಡಿ ಮಸೂದೆಗಳು, ವಿಧೇಯಕಗಳ ಕುರಿತ ಚರ್ಚೆಯ ಕಾವು ನಿನ್ನೆ ವಿಧಾನಪರಿಷತ್​ನಲ್ಲಿ ಸ್ವಲ್ಪ ಹೆಚ್ಚೇ ಇತ್ತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಒಮ್ಮತ ಮೂಡದೇ ಇದ್ದಾಗ ನಡು ನಡುವೆ ಅಲ್ಪಕಾಲ ಕಲಾಪ ಮುಂದೂಡಲಾಗಿತ್ತು. ಹೀಗಿದ್ದಾಗ್ಯೂ, ತಡರಾತ್ರಿ 12.40ರ ತನಕವೂ ಚರ್ಚೆಗೆ ಕಾಲಾವಕಾಶ ಮಾಡಿಕೊಟ್ಟಿದ್ದರು ಪರಿಷತ್ ಸಭಾಪತಿ.
ರಾತ್ರಿ 11ರ ಹೊತ್ತಿನಲ್ಲೂ ಮೇಲ್ಮನೆಯಲ್ಲಿ ಮಾತಿನ ಚಕಮಕಿ, ಪರಸ್ಪರ ಧಿಕ್ಕಾರದ ಮೊಳಗು, ಗಲಾಟೆಯಿಂದಾಗಿ ಕಲಾಪವು ಮತ್ತೆ ಮುಂದೂಡಿಕೆಯಾಗಿದೆ. ಸಭಾಪತಿ ಪೀಠದಲ್ಲಿದ್ದ ಕೆ.ಸಿ.ಕೊಂಡಯ್ಯ ಎಷ್ಟೇ ಮನವಿ ಮಾಡಿಕೊಂಡರೂ ಪರಸ್ಪರ ವಾಗ್ದಾಳಿ ನಿಲ್ಲಿಸಲಿಲ್ಲ. ಕಲಾಪ ಮುಂದೂಡಿದ ನಂತರವೂ ಆಡಳಿತ ಪಕ್ಷದವರಿಂದ ದಲಿತ ವಿರೋಧಿ ಕಾಂಗ್ರೆಸ್ ಎಂಬ ಧಿಕ್ಕಾರ ಮೊಳಗಿಸಿದರು. ಡಿ.ಜೆ.ಹಳ್ಳಿ ಘಟನೆಗೆ ಸಂಬಂಧಿಸಿದಂತೆ ನಿಯಮ 330ರಡಿ ಪ್ರತಿಪಕ್ಷ ಕಾಂಗ್ರೆಸ್ ಚರ್ಚೆ ನಡೆಸುತ್ತಿತ್ತು ಇಷ್ಟೆಲ್ಲ ಚರ್ಚೆ ತಡರಾತ್ರಿ 12.40ರ ತನಕ ಮುಂದುವರಿದಿದ್ದು, ನಂತರ ದಿಢೀರ್ ರಾಷ್ಟ್ರಗೀತೆ ಮೂಲಕ ಸದನ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು.
ಇದನ್ನೂ ಓದಿ:ಸಿದ್ದರಾಮಯ್ಯ ಮಾತಿಗೆ ಸಿಡಿದೆದ್ದ ಸಿಎಂ ಫುಲ್​ ಗರಂ!
ಈ ಬೆಳವಣಿಗೆಯ ಬಗ್ಗೆ ಸಚಿವ ಸುರೇಶ್ ಕುಮಾರ್ ಅವರು ಟ್ವೀಟ್ ಮಾಡಿ ಬೇಸರ ಪ್ರಕಟಿಸಿದ್ದಾರೆ. ಅವರ ಟ್ವೀಟ್ ಸಂದೇಶ ಹೀಗಿದೆ – “ವಿಧಾನ ಪರಿಷತ್ತಿನಲ್ಲಿ ಮಧ್ಯರಾತ್ರಿ 12.40 ರವರೆಗೆ ಚರ್ಚೆಗೆ ಧಾರಾಳವಾಗಿ ಅವಕಾಶ ಮಾಡಿಕೊಟ್ಟು ವಿಧೇಯಕವನ್ನು ಮತಕ್ಕೆ ಹಾಕದೆ ರಾಷ್ಟ್ರಗೀತೆ ಯ ಮೂಲಕ ದಿಢೀರನೆ ಸದನವನ್ನು ಅನಿರ್ದಿಷ್ಟ ಕಾಲ ಮುಂದೂಡಿದ ಸಭಾಪತಿಗಳ ನಡೆ ನಿಗೂಢವೆಂದೇ ಹೇಳಬೇಕು. ಇದೀಗ ಬೇಸರದಿಂದಲೇ ಮನೆ ಕಡೆ ಹೊರಟಿದ್ದೇನೆ. ಅಂಪೈರ್ ಎಂದೂ ಹೀಗಿರಬಾರದು”.
ವಿಧಾನ ಪರಿಷತ್ತಿನಲ್ಲಿ ಮಧ್ಯರಾತ್ರಿ 12.40 ರವರೆಗೆ ಚರ್ಚೆಗೆ ಧಾರಾಳವಾಗಿ ಅವಕಾಶ ಮಾಡಿಕೊಟ್ಟು ವಿಧೇಯಕವನ್ನು ಮತಕ್ಕೆ ಹಾಕದೆ ರಾಷ್ಟ್ರಗೀತೆ ಯ ಮೂಲಕ ದಿಢೀರನೆ ಸದನವನ್ನು ಅನಿರ್ದಿಷ್ಟ ಕಾಲ ಮುಂದೂಡಿದ ಸಭಾಪತಿಗಳ ನಡೆ ನಿಗೂಢವೆಂದೇ ಹೇಳಬೇಕು.
ಇದೀಗ ಬೇಸರದಿಂದಲೇ ಮನೆ ಕಡೆ ಹೊರಟಿದ್ದೇನೆ.
ಅಂಪೈರ್ ಎಂದೂ ಹೀಗಿರಬಾರದು.
— S.Suresh Kumar (@nimmasuresh)September 26, 2020

ಇದನ್ನೂ ಓದಿ:ಒಕ್ಕಲಿಗ ಮತಬ್ಯಾಂಕ್​ಗೆ ಬಿಜೆಪಿ ಕಣ್ಣು
ಈ ನಡುವೆ ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಧ್ವನಿಮತಕ್ಕೆ ಹಾಕಲಾಗಿತ್ತು. ಅಲ್ಲಿ ಆ ಅವಿಶ್ವಾಸ ಗೊತ್ತುವಳಿ ತಿರಸ್ಕೃತವಾಗಿದ್ದು, ಆಡಳಿತ ಪಕ್ಷ ಆರು ತಿಂಗಳವರೆಗೆ ಅವಿಶ್ವಾಸ ಗೊತ್ತುವಳಿಯ ಹೆದರಿಕೆ ಇಲ್ಲದೆ ಮುಂದುವರಿಯುವ ಅವಕಾಶ ಸಿಕ್ಕಂತಾಗಿದೆ.
ಭೂ ಸುಧಾರಣೆಗೆ ವಿಧಾನಸಭೆ ಅಂಗೀಕಾರ; ಕಾಂಗ್ರೆಸ್​​ನಿಂದ ಸಭಾತ್ಯಾಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − five =
Remember me
