ಬೆಂಗಳೂರು:ಜಯಸೂರ್ಯ ಎಂಬ ಯುವಕ ಆಗಸ್ಟ್ 4ರಂದು ನೀಟ್ ಕೋಚಿಂಗ್ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಕಿಡ್ನಾಪ್ ಮಾಡಲಾಗಿತ್ತು. ಘಟನೆಯು ಹೆಚ್ಎಸ್ಆರ್​​​​​ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಜಯಸೂರ್ಯ ಪೋಷಕರು ಠಾಣೆಗೆ ದೂರು ನೀಡಿದ್ದರು. ಇದೀಗ ದೂರು ನೀಡಿದ ಮೂರು ತಾಸಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬು ತಿಳಿಸಿದ್ದಾರೆ.
ಘಟನೆಯ ವಿವರಪ್ರತಿ ದಿನ ಜಯಸೂರ್ಯ ನೀಟ್ ಕೋಚಿಂಗ್​​​​ಗೆ ಬೊಲೆರೊ ಕಾರ್ ನಲ್ಲಿ ಹೋಗುತ್ತಿದ್ದರು. ಆ.4ರಂದು ಎಂದಿನಂತೆ ಕೋಚಿಂಗ್ ಮುಗಿಸಿಕೊಂಡು ಮನೆಗೆ ಕಾರ್​​​ನಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿ ಜಯಸೂರ್ಯನಿಗೆ ಡ್ರಾಪ್ ಕೇಳುತ್ತಾನೆ. ನಂತರ ತಿಲಕನಗರ ಕಡೆ ಬಿಡು ಅಂತ ಆ ಕಡೆ ಕರೆದೊಯ್ಯುತ್ತಾನೆ. ಈ ವೇಳೆ ಕಾರ್​​​​ನಲ್ಲಿಯೇ ಜಯಸೂರ್ಯನಿಗೆ ಗನ್ ಇಟ್ಟು ಬೆದರಿಕೆ ಹಾಕುತ್ತಾನೆ.
ನಿನ್ನನ್ನ ಕಿಡ್ನಾಪ್ ಮಾಡಿದೀನಿ ಅಂತ ಪೋಷಕರಿಗೆ ಕರೆ ಮಾಡು ಅಂತ ಅಪರಿಚಿತ ವ್ಯಕ್ತಿ ಹೇಳಿದ್ದಾನೆ. ನಂತರ ಅವರ ತಂದೆ ತಾಯಿಗೆ ವಿಡಿಯೋ ಕಾಲ್ ಮಾಡಿ ಆಟಿಕೆ ಪಿಸ್ತೂಲ್ ತಲೆಗೆ ಇಟ್ಟು ಐದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ.
ತಕ್ಷಣ ಎಚ್ಚೆತ್ತುಕೊಂಡ ಜಯಸೂರ್ಯ ಪೋಷಕರು ಠಾಣೆಗೆ ದೂರು ನೀಡಿದ್ದರು. ಇದೀಗ ದೂರು ನೀಡಿದ ಮೂರು ತಾಸಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ಅಧಿಕಾರಿಗಳು ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ಧರ್ಮಕ್ಕೂ ಆಡಳಿತಕ್ಕೂ ಸಂಬಂಧವಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
