ಕೊಡಗು:ಕರ್ನಾಟಕದ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹೆಸರನ್ನು ಬೆಳಗಿಸಿದ್ದಾರೆ. ಇದೀಗ ಭಾರತೀಯ ಬಾಕ್ಸಿಂಗ್​ ತಂಡಕ್ಕೆ ಕೋಚ್​ ಆಗಿ ಕೊಡಗು ಜಿಲ್ಲೆಯ ವಿಶು ಕುಟ್ಟಪ್ಪ ನೇಮಕ ಆಗಿದ್ದಾರೆ.
ಕೊಡಗು ಜಿಲ್ಲೆಯ ಕೋಕೇರಿ ಗ್ರಾಮದ ಎ.ವಿಶು ಕುಟ್ಟಪ್ಪ ಇದೀಗ ಎರಡನೇ ಬಾರಿಗೆ ನೇಮಕವಾಗಿದ್ದಾರೆ. ಇವರೂ ಸಾಮಾನ್ಯ ಆಟಗಾರರೇನಲ್ಲ. ಈ ಹಿಂದೆ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಯನ್ನು ಇವರು ಮುಡಿಗೇರಿಸಿಕೊಂಡಿದ್ದರು.
ಇದೀಗ ಕುಟ್ಟಪ್ಪ ಅವರು ಕೋಚ್​ ಆಗಿ ನೇಮಕವಾಗಿರುವ ಬಗ್ಗೆ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದೆ. ಹಿಂದೆ 2018ರಿಂದ 2021ರವರೆಗೆ ರಾಷ್ಟ್ರೀಯ ಕೋಚ್ ಆಗಿ ಇವರು ಕಾರ್ಯ ನಿರ್ವಹಿಸಿದ್ದರು. ಇದೀಗ ಅವರು ಮತ್ತೊಮ್ಮೆ ನೇಮಕವಾಗಿದ್ದು 2024 ರ ಒಲಂಪಿಕ್ಸ್​ವರೆಗೆ ಇವರನ್ನು ಅದೇ ಸ್ಥಾನದಲ್ಲಿ ಮುಂದುವರಿಸುವ ಸಾಧ್ಯತೆ ಇದೆ. ಕುಟ್ಟಪ್ಪ ಅವರು ಹಿಂದೆ ಭಾರತೀಯ ಸೇನೆಯಲ್ಲೂ ಕರ್ತವ್ಯ ನಿಒರ್ವಹಿಸಿದ್ದರು. ಇವರು ಸಿ. ಅಚ್ಚಯ್ಯ – ಶಾಂತಿ ದಂಪತಿಯ ಪುತ್ರ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 1 =
Remember me
