ಬೆಂಗಳೂರು:ಲಾಕ್​ಡೌನ್​ ನಡುವೆಯೂ ರಾಜ್ಯದಲ್ಲಿ ನೇಮಕಾತಿಗಳ ಭರಾಟೆ ಮುಂದುವರಿದಿದೆ.ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆಯಲ್ಲಿ ಜಿಲ್ಲಾವಾರು ಸಮಾಲೋಚಕರನ್ನು ನೇಮಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಜತೆಗೆ, ನಾಡಕಚೇರಿಗಳಲ್ಲಿ ಡೇಟಾ ಎಂಟ್ರಿ ಆಪರೇಟರ್​ಗಳ ಭರ್ತಿಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಈಗಾಗಲೇ ನಿರ್ದೇಶನಾಲಯ ಸೂಚಿಸಿದೆ.
ಪೊಲೀಸ್​ ಇಲಾಖೆಯಲ್ಲಿಯೂ 2,672 ಕಾನ್​ಸ್ಟೆಬಲ್​ ಹುದ್ದೆ ಹಾಗೂ 162 ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳ ನೇಮಕಕ್ಕೆ ಅರ್ಜಿಗಳನ್ನು ಈಗಾಗಲೇ ಆಹ್ವಾನಿಸಲಾಗಿದೆ.
ಇದನ್ನೂ ಓದಿ;ರಾಜ್ಯದ ನಾಡಕಚೇರಿಗಳಿಗೆ ಬೇಕಾಗಿದ್ದಾರೆ ಡೇಟಾ ಎಂಟ್ರಿ ಆಪರೇಟರ್ಸ್, ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ನಡೆಯಲಿದೆ ನೇಮಕಾತಿ
ಇದೀಗ ಮತ್ತೆ 556 ಸಬ್​ ಇನ್​ಸ್ಪೆಕ್ಟರ್​ (ಸಿವಿಲ್​) ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆಗಳನ್ನು ಆರಂಭಿಸಿದೆ. ಇದರಲ್ಲಿ 125 ಹುದ್ದೆಗಳು ಹೈದರಾಬಾದ್​ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿವೆ. 431 ಹುದ್ದೆಗಳು ಉಳಿದ ವೃಂದಕ್ಕೆ ಮೀಸಲಾಗಿವೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ.
ಈ ಹುದ್ದೆಗಳಿಗೆ ಜೂನ್​ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಘಲಿದೆ. ಅರ್ಜಿ ಸಲ್ಲಿಸಲು ಜೂನ್​ 30 ಕೊನೆಯ ದಿನವಾಗಿದೆ.ವಿವರಗಳಿಗೆhttps://www.ksp.gov.in/ಲಾಗಿನ್​ ಆಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು.
ರಾಜ್ಯ ಪೊಲೀಸ್​ ಇಲಾಖೆಯಲ್ಲಿ 2,672 ಕಾನ್​ಸ್ಟೆಬಲ್​, 162 ಎಸ್​ಐ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
