ಬಾಗಲಕೋಟೆ:ಸ್ಟಾರ್​ ನಟರ ಆ್ಯಕ್ಷನ್​ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಗಳು ಕಳ್ಳರ ಗ್ಯಾಂಗ್​ ಅನ್ನು ಚೇಸ್​ ಮಾಡಿ ಸೆರೆಹಿಡಿಯುವ ಶೈಲಿಯನ್ನು ಕಂಡು ನಾವೆಲ್ಲಾ ರೋಮಾಂಚನಕ್ಕೆ ಒಳಗಾಗಿರುತ್ತೇವೆ. ಇಂತಹ ಘಟನೆ ಕೇವಲ ಚಿತ್ರಕ್ಕೆ ಮಾತ್ರ ಸೀಮಿತವೇ? ಅಥವಾ ನಿಜ ಜೀವನದಲ್ಲಿಯೂ ನಡೆಯುತ್ತದೆಯೇ? ಎಂಬ ಹತ್ತು ಹಲವು ಪ್ರಶ್ನೆಗಳು ನಮ್ಮಲ್ಲಿ ಮೂಡುವುದು ಸಹಜ. ಇದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆದಿರುವ ಕೆಲವು ನೈಜ ಘಟನೆಗಳೇ ಸಾಕ್ಷಿ. ಸಿನಿಮಿಯ ಶೈಲಿಗಿಂತಲೂ ಪೊಲೀಸರ ಚೇಸಿಂಗ್​ ಶೈಲಿ ಮತ್ತಷ್ಟು ರೋಚಕವಾಗಿರುತ್ತದೆ ಎಂಬುದನ್ನು ನಮ್ಮ ಖಾಕಿಪಡೆ ಈಗಾಗಲೇ ಸಾಬೀತುಪಡಿಸಿದೆ. ಸದ್ಯ ಇದೇ ರೀತಿಯಲ್ಲಿ ಇಲ್ಲೊಂದು ಘಟನೆ ನಡೆದಿದ್ದು, ಪೊಲೀಸರು ಸಿನಿಮಿಯ ರೀತಿ ಚೇಸ್ ಮಾಡಿ ಅಂತಾರಾಜ್ಯ ಕಳ್ಳನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಪಿಎಸ್‌ಐ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಒತ್ತಾಯ
ಇಳಕಲ್ ಹಾಗೂ ಹುನಗುಂದ ಠಾಣೆ ಪೊಲೀಸರು ಚೇಸ್ ಮಾಡಿ ಕಳ್ಳರನ್ನು ಬಂಧಿಸಿದ್ದಾರೆ. ಪರಾರಿಯಾಗಲು ಕಳ್ಳರು ಮಾಡಿದ ಎಲ್ಲ ಪ್ಲಾನ್ ತಲೆಕೆಳಗೆ ಮಾಡಿ ಬಂಧಿಸಿದ ಪೊಲೀಸರು, ಆಂಧ್ರಪ್ರದೇಶದ ಅನಂತಪುರದಲ್ಲಿ ಗ್ಯಾಸ್ ಕಟರ್​​​ನಿಂದ ಎಟಿಎಂ ಹಣ ದೋಚುತ್ತಿದ್ದ ಕಳ್ಳರ ಗ್ಯಾಂಗ್ ಅನ್ನು ಚೇಸ್ ಮಾಡಿ ಸೆರೆಹಿಡಿದಿದೆ. ಹುನಗುಂದ ಮತ್ತು ಇಳಕಲ್ ಅಧಿಕಾರಿಗಳ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ಮತ್ತು ಶ್ಲಾಘನೆ ವ್ಯಕ್ತವಾಗುತ್ತಿದೆ.
ಕಳ್ಳರು ಅನಂತಪುರದಿಂದ ಕರ್ನಾಟಕಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಪಡೆದ ಪೊಲೀಸರು, ಹುನಗುಂದ, ಇಳಕಲ್ ಹೆದ್ದಾರಿ 50ರಲ್ಲಿ ದೆಹಲಿ ಪಾಸಿಂಗ್ ವಾಹನ ತಪಾಸಣೆ ಮಾಡಲು ಸೂಚಿಸಿದ್ದ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ, ಎಸ್ಪಿ ಸೂಚನೆ ಮೇರಿಗೆ ಬ್ಯಾರಿಕೇಡ್ ಹಾಕಿದ ಖಾಕಿ ಪಡೆ, ಹುನಗುಂದ ಮಾರ್ಗವಾಗಿ ವಿಜಯಪುರಕ್ಕೆ ಹೋಗುವ ದಾರಿಯ ಬೆಳಗಲ್ ಚೆಕ್ ಪೋಸ್ಟ್​ನಲ್ಲಿ ವಾಹನ ತಡೆದು ತಪಾಸಣೆ ನಡೆಸುತ್ತಿದ್ದರು.
ಇದನ್ನೂ ಓದಿ:ಭಾರತಕ್ಕೆ ಬಂದಿಳಿದ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ; ಹಿಂಡನ್ ಏರ್​​ಬೇಸ್​​​​ನಲ್ಲಿ ಲ್ಯಾಂಡಿಂಗ್ ಆಗಿದ್ದು ಯಾಕೆ?
ಅದೇ ಮಾರ್ಗದಲ್ಲಿ ಬಂದ ಕಳ್ಳರ ಗ್ಯಾಂಗ್ ಜಾಗೃತರಾಗಿ ತಮ್ಮ ವಾಹನ ಹಿಂತಿರುಗಿಸಿ ಹುನಗುಂದ ಮಾರ್ಗದ ಧನ್ನೂರು-ಮುದ್ದೇಬಿಹಾಳದ ಅಡ್ಡದಾರಿ ಹಿಡಿದು ಪರಾರಿಯಾಗಲು ಯತ್ನಿಸಿದರು. ಈ ವೇಳೆ ಹೈವೇ ಪೊಲೀಸ್ ವಾಹನಕ್ಕೆ ತಮ್ಮ ಕ್ರೆಟಾ ಕಾರಿನಿಂದ ಡಿಕ್ಕಿ ಹೊಡೆದ ಕಳ್ಳರು, ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದು ಕಾರನ್ನು ಅಲ್ಲೇ ಬಿಟ್ಟು ಹೊಲದಲ್ಲಿ ಓಡಿದ್ದಾರೆ.
ಹೊಲದಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರ ನೆರವು ಪಡೆದ ಪೊಲೀಸರು, ಕಳ್ಳರ ಗ್ಯಾಂಗ್​ ಅನ್ನು ವಾಪಾಸ್ ಹೆದ್ದಾರಿಯಂತೆ ಬರುವಂತೆ ಬ್ಲಾಕ್ ಮಾಡಿಸಿದ್ದಾರೆ. ಕಡೆಗೂ ಇಬ್ಬರನ್ನು ಬಂಧಿಸಿದ ಖಾಕಿಪಡೆ, ವಿಚಾರಣೆ ಬಳಿಕ ಆಂಧ್ರಪ್ರದೇಶಕ್ಕೆ ಕಳಿಸಿಕೊಡಲು ಮುಂದಾಗಿದ್ದಾರೆ.
ಬಾಂಗ್ಲಾದಲ್ಲಿ ಇಷ್ಟೊಂದು ಹಿಂಸಾಚಾರ ಏಕೆ? 300ಕ್ಕೂ ಅಧಿಕ ಸಾವು, ಇಷ್ಟಕ್ಕೆಲ್ಲ ಕಾರಣ ಇದೇ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 20 =
Remember me
