ಬೆಂಗಳೂರು:ರಾಜ್ಯ ಪೊಲೀಸ್​ ಅಧಿಕಾರಿ/ಸಿಬ್ಬಂದಿಗೆ ಸದ್ಯಕ್ಕೆ ವೇತನ ಅರಿಯರ್ಸ್​, ಹಬ್ಬದ ಮುಂಗಡ, ವಾರದ ಭತ್ಯೆ ಇನ್ನಿತರ ಭತ್ಯೆಗಳು ಸಿಗುವುದಿಲ್ಲ. ಕೇವಲ ವೇತನ ಮಾತ್ರ ಕೈ ಸೇರಲಿದೆ.
ಕರೊನಾ ಲಾಕ್​ಡೌನ್​ನಿಂದ ಉಂಟಾಗಿರುವ ಆಥಿರ್ಕ ಸಂಕಷ್ಟವನ್ನು ಸರಿದೂಗಿಸಲು 2020 ಮತ್ತು 21ನೇ ಸಾಲಿನ ಆಥಿರ್ಕ ವರ್ಷದಲ್ಲಿ ವೇತನ ಬಿಲ್​ಗಳನ್ನು ಮಾತ್ರ ಖಜಾನೆಗೆ ಕಳುಹಿಸುವಂತೆ ಜಿಲ್ಲಾ ಎಸ್​ಪಿ, ಕಮಿಷನರ್​ಗಳಿಗೆ ರಾಜ್ಯ ಪೊಲೀಸ್​ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿರಿಈ ಚಿತ್ರ ನೋಡಿ… ಗರ್ಭಿಣಿ ಆನೆಯ ದಾರುಣ ಸಾವಿಗೆ ಕಂಬನಿ ಮಿಡಿಯುತ್ತಿದೆ!
ಅರಿಯರ್ಸ್​, ಹಬ್ಬದ ಮುಂಗಡ, ವಾರದ ಭತ್ಯೆ ಮತ್ತು ವೇತನದ ಇನ್ನಿತರ ಭತ್ಯೆಗಳ ಬಿಲ್ಲುಗಳನ್ನು ಖಜಾನೆ-2ಗೆ ಸಲ್ಲಿಸಲು ಆಥಿರ್ಕ ಇಲಾಖೆಯ ಅನುಮತಿ ಪಡೆಯಬೇಕಾಗಿದೆ. ಒಂದು ವೇಳೆ ಡ್ರಾ ಮಾಡಲು ಖಜಾನೆ-2ಗೆ ಬಾಕಿ ಬಿಲ್ಲುಗಳನ್ನು ರವಾನೆ ಮಾಡಿದರೆ ನಿರ್ವಾಹಕರು, ಶಾಖಾಧೀಕ್ಷಕರು ಹಾಗೂ ಸಹಾಯಕ ಆಡಳಿತಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಡಿಜಿ ಮತ್ತು ಐಜಿಪಿ ಪ್ರವಿಣ್​ ಸೂದ್​ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿರಿಪೊಲೀಸರೇ ಕಿಡ್ನ್ಯಾಪರ್​ಗಳನ್ನು ಬಿಟ್ಟು ಕಳಿಸಿದರೂ ಜೈಲಿಗೆ ತಳ್ಳಿದ ವಾಟ್ಸ್ಆ್ಯಪ್ ಸ್ಟೇಟಸ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
