ಬೆಂಗಳೂರು:ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಹಿನ್ನೆಲೆ ನಮ್ಮ ರೈತರಿಗೆ ಮತ್ತು ನಮಗೆ ನೀರಿಗೆ ತೊಂದರೆಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಧ್ವನಿ ಏರಿಸಿದ್ದು, ಈ ವೇಳೆ ಕನ್ನಡ ಚಿತ್ರರಂಗದ ಕಲಾವಿದರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದೆ.
ಇದನ್ನೂ ಓದಿ:ಗೆಳೆಯಾ..ನಿನ್ನ ಮರೆಯಲಾರೆವು..! ಸಮಾಧಿ ಬಳಿ ಮೃತ ಸ್ನೇಹಿತನ ಹುಟ್ಟುಹಬ್ಬ ಆಚರಿಸಿದ ಯುವಕರು
ಕಾವೇರಿ ವಿಚಾರದಲ್ಲಿ ಸ್ಯಾಂಡಲ್​ವುಡ್ ಮೌನ ಮುರಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧಕ್ಷರು, “ನಮ್ಮ ಚಿತ್ರರಂಗದಲ್ಲಿ ನಾಯಕತ್ವ ತೆಗೆದುಕೊಳ್ಳುವವರು ಯಾರು ಇಲ್ಲ. ಈ ಹಿಂದೆ ಡಾ. ರಾಜ್ ಕುಮಾರ್ ಎಲ್ಲರೂ ಸೇರಿ ನಾಡು, ಜಲ ವಿಚಾರ ಬಂದರೆ ಒಗ್ಗಟ್ಟಾಗಿ ಸೇರುತ್ತಿದ್ದರು. ಆದ್ರೆ ಈಗ ಅಂಥವರು ನಮ್ಮ ಚಿತ್ರರಂಗದಲ್ಲಿ ಯಾರು ಇಲ್ಲ” ಎಂದು ನಾರಾಯಣ ಗೌಡ ಹೇಳಿದರು.
ಇದನ್ನೂ ಓದಿ:ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟಿಗೆ ಅರ್ಜಿ ಹಾಕ್ತೀವಿ ಎಂದು ಕಾಂಗ್ರೆಸ್ಸಿಗರು ಕಾಲಹರಣ ಮಾಡ್ತಿದ್ದಾರೆ!
“ಪ್ರಸ್ತುತ ಎಲ್ಲರೂ ತಮ್ಮ ಕೆಲಸಕ್ಕಾಗಿ ನಟನೆಯನ್ನು ಮಾಡುತ್ತಿದ್ದಾರೆ. ಯಾರಿಗೂ ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ. ಹೊಟ್ಟೆ ಪಾಡಿಗೆ ಸಿನಿಮಾ ಮಾಡಿಕೊಂಡು ಇದ್ದಾರೆ. ನಟ-ನಟಿಯರು ಯಾರು ಕೂಡ ಕನ್ನಡ ಪರ ಹೋರಾಟಕ್ಕೆ ಸಾಥ್ ನೀಡಿಲ್ಲ, ನೀಡೋದು ಇಲ್ಲ, ಅವರ ಸಹಕಾರ‌ ನಮಗೂ ಬೇಕಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಕಾವೇರಿ ನದಿ ನೀರು ಹಂಚಿಕೆಯಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ಪರಿಸ್ಥಿತಿಯನ್ನು, ವಸ್ತು ಸ್ಥಿತಿಯನ್ನು ಪ್ರಾಧಿಕಾರಕ್ಕೆ ಅರ್ಥಮಾಡಿಸಲು ನಮ್ಮ ಸರ್ಕಾರ ವಿಫಲಗೊಂಡಿದೆ. ನಮ್ಮಲ್ಲಿ ಎಷ್ಟು ನೀರಿದೆ, ಇಲ್ಲಿನ ಅಗತ್ಯ ನೀರಿನ ಬಗ್ಗೆ ಮಾಹಿತಿ ಕೊಡಬೇಕಿತ್ತು. ಸರ್ಕಾರ ಕೂಡ ಭಾರಿ ಉದಾರವಾಗಿ ನೀರು ಬಿಡಲು ತಯಾರಾಗಿದೆ. ರಾಜಕಾರಣಿಗಳು ರಾಜಕೀಯ ಬಿಟ್ಟು ಸಮಸ್ಯೆ ಬಗೆಹರಿಸಬೇಕು” ಎಂದು ನಾರಾಯಣ ಗೌಡ ಹೇಳಿದರು.
ಇದನ್ನೂ ಓದಿ:ಮಕ್ಕಳ ದೈಹಿಕ ಕ್ಷಮತೆ, ಕ್ರಿಯಶೀಲತೆಗೆ ಪೌಷ್ಠಿಕ ಆಹಾರ ಅಗತ್ಯ
“ನಾಳೆ (ಸೆ.21) ಗಾಂಧಿನಗರದ ಕಚೇರಿಯಿಂದ ವಿಧಾನಸೌಧ ಮುತ್ತಿಗೆಗೆ ಮುಂದಾಗಿದ್ದೇವೆ. ಸರ್ಕಾರ ಕಾವೇರಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುತ್ತಿದೆ. ನಮಗೆ ಕುಡಿಯಲು ನೀರಿಲ್ಲ, ಇನ್ನು ಅವರಿಗೆ ನೀರು ಕೊಡಿ ಎಂದರೆ ಹೇಗೆ? ಈಗಿರುವ ಸಂಸದರು ಪ್ರಧಾನಿ ಮಂತ್ರಿಗಳ ಜೊತೆ ಮಾತನಾಡಬೇಕು” ಎಂದು ಕರವೇ ಅಧ್ಯಕ್ಷರು ಹೇಳಿದರು.
‘ಗುಂಟೂರು​ ಖಾರಂ’ ಕೈಬಿಟ್ಟಿದ್ದೇ ತಪ್ಪಾಯ್ತಾ?; ಪೂಜಾ ಹೆಗ್ಡೆ ಮುಂದಿನ ಸಿನಿಮಾ​ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + sixteen =
Remember me
