ಮಂಗಳೂರು: ಒಂದು ದೇಶ, ಒಂದು ಪಡಿತರ ಚೀಟಿ (ಣ್ಞಛಿ ಘಚಠಿಜಿಟ್ಞಣ್ಞಛಿ ್ಕಠಿಜಿಟ್ಞ ಇಚ್ಟಛ) ಯೋಜನೆಯನ್ನು ಜಿಲ್ಲೆಗಳ ನಡುವೆ ಯಶಸ್ವಿಯಾಗಿ ಜಾರಿಗೊಳಿಸಿದ ಬಳಿಕ ಈಗ ರಾಷ್ಟ್ರ ಮಟ್ಟದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಆಹಾರ ಇಲಾಖೆ ಸಜ್ಜಾಗಿದೆ.
ಪಡಿತರ ಚೀಟಿ ಹೊಂದಿರುವವರು ದೇಶಾದ್ಯಂತ ಎಲ್ಲಿ ಬೇಕಾದರೂ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯುವ ಪೋರ್ಟಬಿಲಿಟಿ ವ್ಯವಸ್ಥೆ ಇದು. ಜ.1ರಿಂದ ದೇಶದ 12 ರಾಜ್ಯಗಳಲ್ಲಿ ಜಾರಿಗೆ ಬಂದಿದ್ದು, ಇದರಲ್ಲಿ ಕರ್ನಾಟಕವೂ ಸೇರಿದೆ. ಇದರಂತೆ ಪ್ರಾಯೋಗಿಕವಾಗಿ ರಾಜ್ಯದ ಜನರು ಹೊರ ರಾಜ್ಯಗಳಲ್ಲಿ, ಹೊರ ರಾಜ್ಯದ ಚೀಟಿದಾರರು ರಾಜ್ಯದಲ್ಲಿ ಪಡಿತರ ಪಡೆದುಕೊಂಡಿದ್ದಾರೆ. ಜೂನ್ ಒಳಗೆ ದೇಶಾದ್ಯಂತ ಜಾರಿಗೆ ಬರಲಿದೆ.
ಜಾರಿಯಾಗದ ನಿಯಮಾವಳಿ: ರಾಜ್ಯದಲ್ಲಿ ಪಡಿತರ ಚೀಟಿ ರಾಷ್ಟ್ರೀಯ ಪೋರ್ಟಬಿಲಿಟಿ ಜಾರಿ ಘೊಷಣೆಯಾದರೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಈ ಸಂಬಂಧ ತಿಂಗಳ ಹಿಂದೆಯೇ ಪೂರಕವಾದ ಸಾಫ್ಟ್​ವೇರ್ ಸಿದ್ಧಗೊಳಿಸಲಾಗಿದೆ. ಯಶಸ್ವಿಯಾಗಿರುವುದಕ್ಕೆ ನಿದರ್ಶನವಾಗಿ ರಾಜ್ಯದ ಗಡಿಭಾಗದ ಶೇ.23 ಮಂದಿ ಕಳೆದ ಒಂದು ವಾರದಲ್ಲಿ ತೆಲಂಗಾಣ, ಆಂಧ್ರ, ಕೇರಳ ರಾಜ್ಯಗಳಿಗೆ ತೆರಳಿ ಪಡಿತರ ಪಡೆದುಕೊಂಡಿದ್ದಾರೆ.
ಕಳೆದ ತಿಂಗಳು ದಕ್ಷಿಣ ಕನ್ನಡದ ಆಹಾರ ಇಲಾಖೆಯವರು ಪ್ರಾಯೋಗಿಕವಾಗಿ ನೆರೆಯ ಕೇರಳ ರಾಜ್ಯಕ್ಕೆ ಇಲ್ಲಿನ ಪಡಿತರ ಚೀಟಿದಾರರನ್ನು ಕೊಂಡೊಯ್ದು ಅಲ್ಲಿ ಪಡಿತರ ಪಡೆದಿದ್ದಾರೆ. ಅಲ್ಲಿನವರನ್ನು ಇಲ್ಲಿಗೆ ಕರೆತಂದು ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ಈ ವ್ಯವಸ್ಥೆ ಪರಿಪೂರ್ಣಗೊಂಡಿದೆ, ಅಂತಿಮ ಹಂತದ ನಿಯಮಾವಳಿ ಇನ್ನೂ ಜಾರಿಯಾಗಿಲ್ಲ. ಕೇರಳದಲ್ಲಿ ಇದು ಜಾರಿಗೊಂಡಿದೆ ಎಂದು ದ.ಕ. ಜಿಲ್ಲಾ ಆಹಾರ ಇಲಾಖೆ ಜಂಟಿ ನಿರ್ದೇಶಕ ಡಾ.ಮಂಜುನಾಥನ್ ತಿಳಿಸಿದ್ದಾರೆ.
ಉಪಯೋಗವೇನು?: ಮೊಬೈಲ್ ಪೋರ್ಟಬಲಿಟಿಯಲ್ಲಿ ನಂಬರ್ ಉಳಿಸಿಕೊಳ್ಳುವಂತೆ ರೇಷನ್ ಕಾರ್ಡಿನಲ್ಲೂ ಬದಲಾವಣೆ ಇಲ್ಲದೆ ಪಡಿತರ ಪಡೆಯಬಹುದು. ಎಲ್ಲಿ ಪಡಿತರ ಪಡೆದರೂ ಬಯೋಮೆಟ್ರಿಕ್ ವ್ಯವಸ್ಥೆ ಇರುವುದರಿಂದ ದಾಖಲಾಗುತ್ತದೆ. ಹಾಗಾಗಿ ದುರ್ಬಳಕೆಗೆ ಅವಕಾಶವಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುತ್ತಿರುವವರಿಗೆ ಈ ವ್ಯವಸ್ಥೆ ಅನುಕೂಲ. ಉದಾಹರಣೆಗೆ ಬಿಹಾರದಿಂದ ಕರ್ನಾಟಕಕ್ಕೆ ಕೆಲಸಕ್ಕೆಂದು ಆಗಮಿಸುವ ಕಾರ್ವಿುಕರು ಪಡಿತರ ಪಡೆಯಲು ತವರು ರಾಜ್ಯಕ್ಕೆ ಹೋಗಬೇಕಿತ್ತು. ನ್ಯಾಷನಲ್ ಪೋರ್ಟಬಿಲಿಟಿ ಪೂರ್ಣ ಪ್ರಮಾಣದಲ್ಲಿ ಜಾರಿಯಾದ ಬಳಿಕ ಕಾರ್ವಿುಕರು ತಾವಿರುವಲ್ಲಿ ಹತ್ತಿರದ ರೇಷನ್ ಅಂಗಡಿಗೆ ಹೋಗಿ ಆಹಾರ ಪದಾರ್ಥ ಪಡೆಯಬಹುದು.
ರಾಜ್ಯ ಪೋರ್ಟಬಿಲಿಟಿ ಯಶಸ್ವಿ: ಕೆಲವು ತಿಂಗಳ ಹಿಂದೆ ರಾಜ್ಯದೊಳಗೆ ಯಾವ ಜಿಲ್ಲೆಯ ಗ್ರಾಹಕರೂ ಎಲ್ಲಿ ಬೇಕಾದರೂ ರೇಷನ್ ಪಡೆಯುವ ವ್ಯವಸ್ಥೆ ಜಾರಿಗೆ ಬಂದಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ದೊಡ್ಡ ಸಂಖ್ಯೆಯಲ್ಲಿ ಕೆಲಸ ಹುಡುಕಿ ಬರುವ ಇತರ ಜಿಲ್ಲೆಗಳ ಮಂದಿಗೆ
ಇದು ಬಹಳ ಉಪಯೋಗವಾಗುತ್ತಿದೆ. ಒಟ್ಟಾರೆ 8000ಕ್ಕೂ ಅಧಿಕ ಮಂದಿ ಹೊರಜಿಲ್ಲೆಯವರು ನಮ್ಮಲ್ಲಿ ರೇಷನ್ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾವೆಲ್ಲ ರಾಜ್ಯಗಳು
ಪ್ರಾರಂಭಿಕ ಹಂತದಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು 12 ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದೆ. ಕರ್ನಾಟಕ, ಕೇರಳ, ಆಂಧ್ರ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಗೋವಾ, ಜಾರ್ಖಂಡ್, ಹರಿಯಾಣ, ತ್ರಿಪುರಗಳಲ್ಲಿ ಜಾರಿಯಾಗಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್​ಲಾಸ್ ಪಾಸ್ವಾನ್ ಪ್ರಕಟಿಸಿದ್ದಾರೆ.
ಸವಾಲೇನು?
ಪ್ರಸ್ತುತ ಕರ್ನಾಟಕದಲ್ಲಿ ಉಚಿತವಾಗಿ ಪಡಿತರ ನೀಡಲಾಗುತ್ತಿದ್ದರೆ, ಕೇರಳದಲ್ಲಿ 5 ಯುನಿಟ್ ಅಕ್ಕಿ ಹಾಗೂ ಗೋಧಿ ಕಿಲೋಗೆ 2 ರೂ.ನಂತೆ ಸಿಗುತ್ತಿದೆ. ಬೇರೆ ರಾಜ್ಯಗಳಲ್ಲೂ ಕನಿಷ್ಠ ದರ ಇರುತ್ತದೆ. ಹಾಗಾಗಿ ಇದನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ಗೊಂದಲ ರಾಜ್ಯದ ಅಧಿಕಾರಿಗಳಲ್ಲಿದೆ. ಅದಕ್ಕಾಗಿ ಸೂಕ್ತ ಗೈಡ್​ಲೈನ್ಸ್ ಬರಬೇಕಿದೆ. ಆ ಬಳಿಕವೇ ಕರ್ನಾಟಕದಲ್ಲೂ ನ್ಯಾಷನಲ್ ರೇಷನ್ ಪೋರ್ಟಬಲಿಟಿ ಜಾರಿಗೊಳ್ಳಬಹುದಷ್ಟೇ.
ವೇಣುವಿನೋದ್ ಕೆ.ಎಸ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 2 =
Remember me
