ಬೆಂಗಳೂರು:2018 ಹಾಗೂ 2019ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಶುಕ್ರವಾರ ಪ್ರಕಟಿಸಿದೆ. 2019ನೇ ಸಾಲಿನ ಗೌರವ ದತ್ತಿ ಪ್ರಶಸ್ತಿಯನ್ನು ಕೆ.ಜಿ. ನಾಗರಾಜಪ್ಪ, ಬಾಬು ಕೃಷ್ಣಮೂರ್ತಿ, ಉಷಾ ಪಿ. ರೈ, ಲಕ್ಷ್ಮಣ ತೆಲಗಾವಿ, ಡಾ. ವೀರಣ್ಣ ರಾಜೂರ ಅವರಿಗೆ ನೀಡಲಾಗಿದೆ.
2019ನೇ ಸಾಲಿನ ಸಾಹಿತ್ಯ ಪ್ರಶಸ್ತಿಯನ್ನು ಡಾ. ಅಮರೇಶ ನುಗಡೋಣಿ, ಡಾ. ವಿ.ಎಸ್.ಮಾಳಿ, ಸುಬ್ಬು ಹೊಲೆಯಾರ್, ಡಾ. ಶಾರದಾ ಕುಪ್ಪಂ, ಪಿ. ಶಿವಣ್ಣ, ಡಾ. ಎಂ.ಎಸ್. ವೇದಾ, ಎಫ್.ಟಿ. ಹಳ್ಳಿಕೇರಿ, ಡಾ. ಮಾಧವ ಪೆರಾಜೆ, ವಸುಧೇಂದ್ರ, ಡಾ. ಜಿ. ಪ್ರಶಾಂತ ನಾಯಕ ಅವರಿಗೆ ನೀಡಲಾಗಿದೆ.
10 ಜನರಿಗೆ 2019ನೇ ಸಾಲಿನ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ, 2018ರ ವರ್ಷದ ಪುಸ್ತಕ ಬಹುಮಾನ ಮತ್ತು 2018ರ ವರ್ಷದ ಅಕಾಡೆಮಿಯ 9 ದತ್ತಿನಿಧಿ ಬಹುಮಾನ ಘೊಷಿಸಲಾಗಿದೆ.  ಕಾ.ತ. ಚಿಕ್ಕಣ್ಣ, ಜಿ.ಕೆ. ರವೀಂದ್ರಕುಮಾರ್, ಎಸ್.ಆರ್. ವಿಜಯಶಂಕರ್ ಸೇರಿ 19 ಮಂದಿಗೆ ಪುಸ್ತಕ ಬಹುಮಾನ ಪ್ರಕಟಿಸಲಾಗಿದೆ. ಲಕ್ಮೀಷ ತೊಳ್ಪಾಡಿ, ಲೋಕೇಶ್ ಅಗಸನಕಟ್ಟೆ ದತ್ತಿ ಪ್ರಶಸ್ತಿಗೆ ಪಾತ್ರರಾದ ಪ್ರಮುಖರು.
2018ರ ವರ್ಷದ ಪುಸ್ತಕ ಬಹುಮಾನಕ್ಕೆ ಕಾವ್ಯ, ಕಾದಂಬರಿ, ಸಣ್ಣ ಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಆತ್ಮಕಥೆ, ಮಕ್ಕಳ ಸಾಹಿತ್ಯ, ವಿಜ್ಞಾನ, ಅನುವಾದ, ಅಂಕಣ ಬರಹ ಸೇರಿ 19 ವಿಭಾಗದಿಂದ ಪುಸ್ತಕಗಳನ್ನು ಆರಿಸಿಕೊಳ್ಳಲಾಗಿದೆ.
ಪ್ರಶಸ್ತಿಯು 25 ಸಾವಿರ ರೂ. ಪ್ರಮಾಣ ಪತ್ರ ಒಳಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2019ನೇ ಸಾಲಿನ ವರ್ಷದ ಗೌರವ ಪ್ರಶಸ್ತಿ 50 ಸಾವಿರ ರೂ. ನಗದು, ಫಲಕ ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ. ಸಾಹಿತ್ಯ ಶ್ರೀ ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಮಾಣಪತ್ರಗಳಿರುತ್ತವೆ.
9 ದತ್ತಿ ಬಹುಮಾನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + ten =
Remember me
