ಬೆಂಗಳೂರು:ವೃತ್ತಿ ಆಧಾರದಲ್ಲಿ ಸಮುದಾಯಗಳನ್ನು ನಿಂದಿಸುವುದು ಸರಿಯಲ್ಲ. ಹಜಾಮ ಎಂಬ ಪದ ಪ್ರಯೋಗಿಸಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್​ ಭರವಸೆ ನೀಡಿದರು.
ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಮಂಗಳವಾರ ನಡೆದ ಕರ್ನಾಟಕ ಸವಿತಾ ಕ್ಷೌರಿಕರ ಹಿತರಕ್ಷಣಾ ವೇದಿಕೆಯ 15ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ವೃತ್ತಿ ಆಧಾರದಲ್ಲಿ ಸಮುದಾಯಗಳನ್ನು ವಿಂಗಡಿಸಿರುವುದು ದುರದೃಷ್ಟಕರ. ಜಾತಿಗೂ, ಬುದ್ಧಿಗೂ ಸಂಬಂಧ ಇದೆಯಾ ಎಂಬುದನ್ನು ಸಮಾಜದ ಎಲ್ಲರೂ ಪ್ರಶ್ನಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಜನರ ವೃತ್ತಿಯ ಆಧಾರದ ಮೇಲೆ ಸಮಾಜವನ್ನು ವರ್ಗೀಕರಣ ಮಾಡಲಾಯಿತು. ಇದು ಮುಂದೆ ವಿವಿಧ ಜಾತಿಗಳಾಗಿ ಬದಲಾಗಿ ಸಮಾಜದ ಒಂದೊಂದು ವರ್ಗವನ್ನು ಒಂದೊಂದು ರೀತಿಯಲ್ಲಿ ಕಾಣುವಂತೆ ಮಾಡಿತು ಎಂದರು.
ಇದನ್ನೂ ಓದಿ:ಮಕ್ಕಳೊಂದಿಗೆ ಹಿಂದಿರುಗಿ ಬಾ ಎಂದು ಪತಿ ಮನವಿ; ಗಂಡನಿಗೆ ಪ್ರತಿಕ್ರಿಯಿಸಿದ ಪಾಕಿಸ್ತಾನಿ ಮಹಿಳೆ!
ಸಹಕಾರ ಸಚಿವ ಕೆ.ಎನ್​. ರಾಜಣ್ಣ ಮಾತನಾಡಿ, ಒಗ್ಗಟ್ಟು ಮತ್ತು ವಿದ್ಯೆ ಇದ್ದಾಗ ಮಾತ್ರ ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಎಲ್ಲರು ಅರಿತುಕೊಳ್ಳಬೇಕು. ವಿದ್ಯೆ ಎಂಬುದು ಸಾಧಕರ ಸೊತ್ತಾಗಿದ್ದು, ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲರೂ ಶಿಕ್ಷಣ ಪಡೆದಾಗ ಸಮಾಜದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು. ಆರ್ಥಿಕ ಸದೃಢತೆಗೆ ಉದ್ಯೋಗ ಬೇಕು. ಹೀಗಿರುವಾಗ ಯಾರೂ ಕೂಡ ತಮ್ಮ ತಮ್ಮ ವೃತ್ತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್​ ಹೆಗಡೆ ಮಾತನಾಡಿ, ಶಿಕ್ಷಣದಲ್ಲಿ ಮೇಲ್ಮಟ್ಟಕ್ಕೆ ಹೋದಾಗ ಸಮಾನತೆ ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಮುದಾಯದ ಮುಂದಿನ ಪೀಳಿಗೆಗೆ ಏನು ಅಗತ್ಯವಿದೆ ಎಂಬುದರ ಬಗ್ಗೆ ಹಿರಿಯರು ಚಿಂತನೆ ನಡೆಸಬೇಕಾದ ಅಗತ್ಯವಿದೆ. ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ಶಿಕ್ಷಣ ಪೂರೈಸಿದರೆ ಮೀಸಲಾತಿ ಇಲ್ಲದೆಯೂ ಜೀವನದಲ್ಲಿ ಮೇಲೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊ. ಎನ್​.ವಿ. ನರಸಿಂಹಯ್ಯ ಅವರಿಗೆ ಸವಿತಾ ಭೀಷ್ಮ ಪ್ರಶಸ್ತಿ ಹಾಗೂ ಎಂ. ಕೃಷ್ಣಪ್ಪ ಅವರಿಗೆ ಕ್ಷೌರಿಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊಂಚೂರು ಸವಿತಾಪೀಠ ಸಂಸ್ಥಾನದ ಶ್ರೀ ಸವಿತಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ವಿಧಾನ ಪರಿಷತ್​ ಸದಸ್ಯ ಎಂ.ಸಿ. ವೇಣುಗೋಪಾಲ್​, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್​. ದ್ವಾರಕನಾಥ್​ ಇನ್ನಿತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 1 =
Remember me
