|ಪಂಕಜ ಕೆ.ಎಂ.ಬೆಂಗಳೂರು
ಕೇಂದ್ರ ಸರ್ಕಾರ ಜಾರಿಗೊಳಿಸಿದ ‘ಇ-ಸಂಜೀವಿನಿ’ ಆಪ್ ಕೋವಿಡ್ ಸಂದರ್ಭದಲ್ಲಿ ಜನರಿಗೆ ಬಹಳ ಉಪಯುಕ್ತವಾಗಿತ್ತು. ಇದರ ಮೂಲಕ ವೈದ್ಯರಿಂದ ಮಾಹಿತಿ ಹಾಗೂ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ರಾಜ್ಯದಲ್ಲಿ ಆಸ್ಪತ್ರೆಗಳ ಮೇಲಿನ ಒತ್ತಡ ಕೊಂಚ ತಗ್ಗಿದಂತಾಗಿದೆ.
ರೋಗಿಗಳು ಮನೆಯಲ್ಲಿಯೇ ಕುಳಿತು ಉಚಿತವಾಗಿ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆ ಪಡೆಯುವುದಕ್ಕೆ ಇ- ಸಂಜೀವಿನಿ ಆಪ್ ವೇದಿಕೆಯಾಗಿದ್ದು, ರಾಜ್ಯದಲ್ಲಿ ಈವರೆಗೂ 38.39 ಲಕ್ಷಕ್ಕೂ ಅಧಿಕ ಮಂದಿ ಇದರ ಉಪಯೋಗ ಪಡೆದುಕೊಂಡಿದ್ದಾರೆ. ದೇಶದಲ್ಲಿ ಈ ಆಪ್ ಅತಿಹೆಚ್ಚು ಬಳಕೆ ಮಾಡಿರುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಬೆಂಗಳೂರು, ತುಮಕೂರು ಮತ್ತು ಹಾಸನ ಜಿಲ್ಲೆಗಳ ಜನರು ಇ-ಸಂಜೀವಿನಿ ಸೌಲಭ್ಯ ಪಡೆಯುವಲ್ಲಿ ಮುಂದಿದ್ದಾರೆ.
2 ಪ್ರಕಾರಗಳಲ್ಲಿ ಸೇವೆ:ಇ- ಸಂಜೀವಿನಿ ಎರಡು ರೀತಿಯಲ್ಲಿ ಸೇವೆ ಒದಗಿಸುತ್ತಿದೆ. ಒಂದು, ರೋಗಿಗಳು ವೈದ್ಯರಿಂದ ಹೊರ ರೋಗಿಗಳ (ಒಪಿಡಿ) ಸೇವೆ ಪಡೆದರೆ, ಮತ್ತೊಂದು ವೈದ್ಯರಿಂದ ವೈದ್ಯರು ಮಾಹಿತಿ ಪಡೆಯುವುದಾಗಿದೆ. ಆಪ್ ಮೂಲಕ ರೋಗಿಗಳು ನೇರ ವೈದ್ಯರನ್ನು ಸಂರ್ಪಸಿ ತಮ್ಮ ಸಮಸ್ಯೆ ಹೇಳಿಕೊಂಡು ಚಿಕಿತ್ಸೆ ಪಡೆಯಬಹುದು. ಜಾಲತಾಣ ಮೂಲಕ ತಾಲೂಕು, ಜಿಲ್ಲಾ ಆಸ್ಪತ್ರೆಗಳು ಸೇರಿ ಸಣ್ಣ ಪ್ರಮಾಣದ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರು ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಹೆಚ್ಚಿನ ಚಿಕಿತ್ಸೆಯ ಅಗತ್ಯತೆ ಕುರಿತು ವೈದ್ಯಕೀಯ ಶಿಕ್ಷಣ ಸಂಸ್ಥೆ ಅಥವಾ ದೊಡ್ಡ ಆಸ್ಪತ್ರೆಗಳ ಸಂಬಂಧಪಟ್ಟ ವೈದ್ಯರನ್ನು ಸಂರ್ಪಸಿ ರೋಗಿಯ ವಿವರ ನೀಡುವ ಮೂಲಕ ಮಾಹಿತಿ ಪಡೆದು ರೋಗಿಗಳನ್ನು ಉಪಚರಿಸುವ ಅಥವಾ ಹೆಚ್ಚಿನ ಚಿಕಿತ್ಸೆಗೆ ನಿರ್ದಿಷ್ಟ ಆಸ್ಪತ್ರೆಗೆ ಶಿಫಾರಸು ಮಾಡಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಈವರೆಗೂ ರಾಜ್ಯದಲ್ಲಿ 18.37 ಲಕ್ಷ ವೈದ್ಯರು ಹಾಗೂ 20 ಲಕ್ಷ ರೋಗಿಗಳು ಸೇರಿ 38.39 ಲಕ್ಷಕ್ಕೂ ಅಧಿಕ ಮಂದಿ ‘ಇ-ಸಂಜೀವಿನಿ’ ಬಳಕೆ ಮಾಡಿದ್ದಾರೆ.
ಕೋವಿಡ್​ರಹಿತರಿಂದಲೂ ಬಳಕೆ:ಕೋವಿಡ್ ಸಂದರ್ಭದಲ್ಲಿ ‘ಇ- ಸಂಜೀವಿನಿ’ ರೋಗಿಗಳ ಪಾಲಿಗೆ ನಿಜಕ್ಕೂ ಸಂಜೀವಿನಿ ಆಗಿಯೇ ಕಾರ್ಯನಿರ್ವಹಿಸಿದೆ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆ ದೊರೆಯದೆ ಪರದಾಡುತ್ತಿದ್ದ ವೇಳೆ, ಅನ್ಯ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದು ಕಷ್ಟವಾಗಿತ್ತು. ಹೀಗಾಗಿ ಕೋವಿಡ್ ಸೋಂಕಿತರ ಜತೆಗೆ ಕೋವಿಡ್​ರಹಿತ ಆರೋಗ್ಯ ಸಮಸ್ಯೆ ಹೊಂದಿರುವವರೂ ಇ-ಸಂಜೀವಿನಿ ಮೊರೆ ಹೋಗಬೇಕಾಯಿತು.
ಅಪ್ಲಿಕೇಷನ್ ಬಳಸೋದು ಹೇಗೆ?:ಆಸ್ಪತ್ರೆಗೆ ಅನಗತ್ಯ ಭೇಟಿ ತಪ್ಪಿಸಿ, ತಾವಿರುವಲ್ಲಿಯೇ ವೈದ್ಯರನ್ನು ಸಂರ್ಪಸಿ ಚಿಕಿತ್ಸೆ ಪಡೆಯಲು ಇ-ಸಂಜೀವಿನಿ ಉತ್ತಮ ಆಯ್ಕೆ. ಇದರ ಸೌಲಭ್ಯ ಪಡೆಯಲು ತಮ್ಮ ಮೊಬೈಲ್​ನಲ್ಲಿ esanjeevaniopd ಆಪ್ ಡೌನ್​ಲೋಡ್ ಮಾಡಿಕೊಳ್ಳಬಹುದು ಅಥವಾ https://esanjeevaniopd.in ಜಾಲತಾಣಕ್ಕೆ ಭೇಟಿ ನೀಡಬಹುದು. ರೋಗಿಯ ಹೆಸರು ನೋಂದಣಿ ಮಾಡಿ ಟೋಕನ್ ಸಂಖ್ಯೆ ಪಡೆಯಬೇಕು. ಮೊಬೈಲ್ ಸಂಖ್ಯೆ ಮತ್ತು ಟೋಕನ್ ಸಂಖ್ಯೆ ಸಮೂದಿಸಿ ಲಾಗಿನ್ ಆಗಬೇಕು. ರೋಗಿಗೆ ಸಂಬಂಧಿಸಿದ ದಾಖಲೆಗಳು, ಪ್ರಯೋಗಾಲಯ ವರದಿಗಳು ಇದ್ದಲ್ಲಿ ಅಪ್​ಲೋಡ್ ಮಾಡಬೇಕು. ಸೂಚನೆ ಪಡೆದ ಕೂಡಲೇ ಕರೆ ಮಾಡಿ. ವಿಡಿಯೊ, ಆಡಿಯೊ, ಮೆಸೇಜ್ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಸಂವಾದ ನಡೆಸಿ ಮತ್ತು ವೈದ್ಯರ ಸಲಹೆ ಚೀಟಿ ಪಡೆಯಬಹುದು. ನಿತ್ಯ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಉಚಿತವಾಗಿ ಸೇವೆ ಲಭ್ಯವಿರಲಿದೆ.
ಆಂಧ್ರ ಪ್ರದೇಶಕ್ಕೆ ಪ್ರಥಮ ಸ್ಥಾನ:ಇ- ಸಂಜೀವಿನಿ ಸೇವೆ ಪಡೆಯುವಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ಈವರೆಗೂ 38.39 ಲಕ್ಷಕ್ಕೂ ಅಧಿಕ ಮಂದಿ ಇದರ ಲಾಭ ಪಡೆದುಕೊಂಡಿದ್ದಾರೆ. ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಈವರೆಗೂ 1.05 ಕೋಟಿಗೂ ಅಧಿಕ ಮಂದಿ ಪ್ರಯೋಜನ ಪಡೆದಿದ್ದಾರೆ. ಪಶ್ಚಿಮ ಬಂಗಾಳ 22.09 ಲಕ್ಷ, ತಮಿಳುನಾಡು 17.91 ಲಕ್ಷ, ಉತ್ತರ ಪ್ರದೇಶ 16.43 ಲಕ್ಷ, ಬಿಹಾರ 7.48 ಲಕ್ಷ, ಮಹಾರಾಷ್ಟ್ರ 7.17 ಲಕ್ಷ, ಮಧ್ಯಪ್ರದೇಶ 6.85 ಲಕ್ಷ, ಗುಜರಾತ್ 6.81 ಲಕ್ಷ, ಉತ್ತರಾಖಂಡ 4.27 ಲಕ್ಷ ಜನರು ಆಪ್ ಮೂಲಕ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. 2019ರ ಡಿಸೆಂಬರ್​ನಲ್ಲಿ ಆರಂಭ ವಾದ ಇ-ಸಂಜೀವಿನಿ ಆಪ್ ಮೂಲಕ ದೇಶಾದ್ಯಂತ 2 ಕೋಟಿಗೂ ಅಧಿಕ ಜನರ ಸೌಲಭ್ಯ ಪಡೆದುಕೊಂಡಿದ್ದಾರೆ.
ಫೇಸ್​​ಬುಕ್​​ ಗೆಳತಿಗೆ ಸಿನಿಮಾ ನಟಿ ಮಾಡುವ ಆಮಿಷ: ಹಣ, ಚಿನ್ನಾಭರಣ ದೋಚಿದ್ದ ನಕಲಿ ಫೋಟೋಗ್ರಾಫರ್ ಬಂಧನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
