ಬೆಂಗಳೂರು:ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಜಾರಿಗೆ ತಂದಿರುವ ಚುನಾವಣಾ ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಯಶಸ್ವಿಯಾಗಿ ಒಂದು ವಾರ ಪೂರೈಸಿದೆ. ಉಚಿತ ಪ್ರಯಾಣ ಘೋಷಣೆಯಾದ ಬೆನ್ನಲ್ಲೇ ಮಹಿಳೆಯರ ಓಡಾಟ ದ್ವಿಗುಣಗೊಂಡಿದೆ, ಯಾವುದೇ ಸರ್ಕಾರಿ ಬಸ್​ ನೋಡಿದರೂ ತುಂಬಿ ತುಳುಕುತ್ತಿದೆ. ರಾಜ್ಯದ ಪುಣ್ಯ ಕ್ಷೇತ್ರಗಳಲ್ಲಂತೂ ಮಹಿಳೆಯರೇ ಸಂಖ್ಯೆಯೇ ಹೆಚ್ಚಿದ್ದು, ಶಕ್ತಿ ಯೋಜನೆಗೆ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಜೂನ್​. 11ರ ಭಾನುವಾರದಂದು ಆರಂಭವಾದ ಶಕ್ತಿ ಯೋಜನೆ ಕಳೆದ ಭಾನುವಾರ (ಜೂ.18)ಕ್ಕೆ 8 ದಿನ ಪೂರೈಸಿದೆ. ಈ 8 ದಿನದಲ್ಲಿ ಬರೊಬ್ಬರಿ 3 ಕೋಟಿ 63 ಲಕ್ಷದ 70 ಸಾವಿರದ 179 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ನಾಲ್ಕೂ ನಿಗಮಗಳಲ್ಲಿಯೂ ಮಹಿಳಾ ಪ್ರಯಾಣಿಕರದ್ದೇ ದರ್ಬಾರ್​ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಯಾವ್ಯಾವ ದಿನ ಎಷ್ಟು ಪ್ರಯಾಣಿಕರು ಸಂಚರಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ.* ಭಾನುವಾರ (ಯೋಜನೆ ಜಾರಿಯಾದ ದಿನ ಜೂ. 11): 5,71,023 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 1,40,22,878 ರೂಪಾಯಿ.* ಸೋಮವಾರ (ಜೂ.12): 41,34,726 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 8,83,53,434 ರೂಪಾಯಿ.* ಮಂಗಳವಾರ (ಜೂ.13): 51,52,769 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 10,82,02,191 ರೂಪಾಯಿ.* ಬುಧವಾರ (ಜೂನ್​ 14): 50,17,174 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 11,51,08,324 ರೂಪಾಯಿ.* ಗುರುವಾರ (ಜೂ.15): 54,05,629 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 12,37,89,585 ರೂಪಾಯಿ.* ಶುಕ್ರವಾರ (ಜೂ. 16): 55,09,770 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣ ವೆಚ್ಚ 12,45,19,265 ರೂಪಾಯಿ.* ಶನಿವಾರ (ಜೂ. 17): 54,30,150 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 12,88,81,618 ರೂಪಾಯಿ.* ಭಾನುವಾರ (ಜೂ. 18): 51,48,938 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 13,99,98,299 ರೂಪಾಯಿ.
ಇದನ್ನೂ ಓದಿ:ಮೆಗಾ ಕುಟುಂಬಕ್ಕೆ ಹೊಸ ಅತಿಥಿ ಆಗಮನ: ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಮ್​ಚರಣ್​ ಪತ್ನಿ ಉಪಾಸನಾ
ಯೋಜನೆ ಜಾರಿಯಾದ ದಿನದಿಂದ ಭಾನುವಾರದವರೆಗೆ ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚ 84 ಕೋಟಿ 28 ಲಕ್ಷದ 75 ಸಾವಿರದ 591ರೂ. ಆಗಿದೆ. 3 ಕೋಟಿ 63 ಲಕ್ಷದ 70 ಸಾವಿರದ 179 ಮಹಿಳೆಯರು ಪ್ರಯಾಣ ಪ್ರಯಾಣ ಮಾಡಿದ್ದು, ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ.
ಅಂದಹಾಗೆ ಶಕ್ತಿ ಯೋಜನೆಗೆ ಜೂನ್​ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹಾಗೂ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ವಿಧಾನಸೌಧದ ಮುಂಭಾಗ ಚಾಲನೆ ನೀಡಿದರು.(ದಿಗ್ವಿಜಯ ನ್ಯೂಸ್​)
ಜಲ್ಲಿಕಲ್ಲು, ಮರಳು ದುಬಾರಿ?: ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ರಾಜ್ಯ ಸರ್ಕಾರ ಸರ್ಕಸ್

ಸುಕ್ಕು ಕೂದಲಿಗೆ ಶಾಶ್ವತ ಪರಿಹಾರ ಹೇರ್ ಸ್ಟ್ರೈಟ್​ನಿಂಗ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + seventeen =
Remember me
