ಬೆಂಗಳೂರು:ಯುವ ಸಮುದಾಯದಲ್ಲಿರುವ ಕೌಶಲವನ್ನು ಉದ್ಯೋಗಕ್ಕೆ ತಕ್ಕಂತೆ ಪರಿವರ್ತನೆ ಮಾಡುವ ಸಲುವಾಗಿ ಸರ್ಕಾರ ಇಡೀ ದೇಶದಲ್ಲಿಯೇ ವಿಶೇಷವಾದ ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ ಅಭಿವೃದ್ಧಿಪಡಿಸುತ್ತಿದೆ. ಉದ್ಯಮಗಳಿಗೆ ಅಗತ್ಯವಾದ ಕೌಶಲವನ್ನು ನೀಡುವ ಮೂಲಕ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ತೆರೆದಿಡುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಪೋರ್ಟಲ್ ಉತ್ತಮ ವೇದಿಕೆಯಾಗಲಿದೆ. ಒಂದು ಜಿಲ್ಲೆಗೆ ಒಂದು ಕೌಶಲ, ಗಾಲಿಗಳ ಮೇಲೆ ಕೌಶಲ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಉದ್ಯಮಗಳಿಗೆ ತಕ್ಕಂತೆ ಯುವ ಸಮುದಾಯವನ್ನು ಸಿದ್ಧಪಡಿಸುವ ಕಾರ್ಯವನ್ನು ರಾಜ್ಯ ಕೌಶಲಾಭಿವೃದ್ಧಿ ಪ್ರಾಧಿಕಾರದ ಮೂಲಕ ಅನಾವರಣಗೊಳಿಸಲಾಗಿದೆ. ಶುಕ್ರವಾರ ವಿಶ್ವ ಯುವ ಕೌಶಲ ದಿನವಾಗಿದ್ದರೂ ಸರ್ಕಾರ ಈ ಪೋರ್ಟಲ್ ಅನ್ನು ಜುಲೈ ತಿಂಗಳ ಕೊನೆಯಲ್ಲಿ ಅನಾವರಣ ಮಾಡಲಿದೆ.
ಏನಿದು ಪೋರ್ಟಲ್?:ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್​ನಲ್ಲಿ ಪದವಿ ಮುಗಿಸಿದ ಯಾವುದೇ ವಿದ್ಯಾರ್ಥಿ ತಮ್ಮಲ್ಲಿರುವ ಕೌಶಲವನ್ನು ಇದರಲ್ಲಿ ದಾಖಲಿಸಿದರೆ, ಉದ್ಯಮ ಸಂಸ್ಥೆಗಳು ಅಂತಹವರನ್ನು ಸಂಪರ್ಕಿಸಲಿವೆ. ಪ್ಲಂಬರ್​ನಿಂದ ಹಿಡಿದು ಎಲ್ಲ ರೀತಿಯ ಕೌಶಲವನ್ನು ಇದರಲ್ಲಿ ವಿದ್ಯಾರ್ಥಿಗಳು ಅಪ್​ಲೋಡ್ ಮಾಡುವುದಕ್ಕೆ ಅವಕಾಶಗಳಿರುತ್ತವೆ. ಪೋರ್ಟಲ್ ಉದ್ಯಮಗಳಿಗೆ ಸಂಪರ್ಕ ಸಾಧಿಸಿರುತ್ತದೆ. ಕನೆಕ್ಟ್​ನಲ್ಲಿ ನೋಂದಾಯಿಸುವ ಅಭ್ಯರ್ಥಿಗಳಿಗೆ ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ತರಬೇತಿಯನ್ನು ಸಹ ಕೌಶಲಾಭಿವೃದ್ದಿ ಪ್ರಾಧಿಕಾರದ ವತಿಯಿಂದಲೇ ನೀಡಲಾಗುತ್ತದೆ. ಒಟ್ಟಾರೆ ಉದ್ಯೋಗದ ಅವಕಾಶಗಳು ಸಿಗುವಂತಾಗಬೇಕು ಎಂಬುದು ಉದ್ದೇಶವಾಗಿದೆ.
2 ಕಾರ್ಯಗಳಿಗೆ ಚಾಲನೆ:ಶುಕ್ರವಾರ ವಿಶ್ವ ಯುವ ಕೌಶಲ ದಿನ ಇದ್ದರೂ ರಾಜ್ಯ ಸರ್ಕಾರ ಗುರುವಾರವೇ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ 2 ಕಾರ್ಯಕ್ರಮಗಳಿಗೆ ಚಾಲನೆ ನೀಡ ಲಾಗುತ್ತಿದೆ. ವಿಶ್ವ ಕೌಶಲ ಸ್ಪರ್ಧೆಗೆ ಯುವಕರನ್ನು ಸಿದ್ಧಪಡಿಸಲು ಹಾಗೂ ಇ-ಕೌಶಲ ಲರ್ನಿಂಗ್ ತರಬೇತಿಗೆ ಚಾಲನೆ ನೀಡಲಾಗುತ್ತಿದೆ.
ಯುವ ಸಮುದಾಯಕ್ಕೆ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವುದಕ್ಕೆ ಅಗತ್ಯವಾದ ಕೌಶಲಗಳನ್ನು ನೀಡಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾ ಗುತ್ತಿದೆ. ಸ್ಕಿಲ್ ಕನೆಕ್ಟ್ ಪೋರ್ಟಲ್ ವಿಶಿಷ್ಟವಾದ ಪರಿಕಲ್ಪನೆ ಹೊಂದಿದೆ.
|ಡಾ.ಸಿ.ಎನ್.ಅಶ್ವತ್ಥನಾರಾಯಣಕೌಶಲಾಭಿವೃದ್ಧಿ ಸಚಿವ
ಜಾಗತಿಕ ಕೌಶಲ ಸ್ಪರ್ಧೆಗೆ ಹೆಚ್ಚು ಜನ ರಾಜ್ಯದಿಂದ ಭಾಗವಹಿಸುವಂತಾಗಬೇಕು. ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು.
|ಅಶ್ವಿನ್​ ಗೌಡವ್ಯವಸ್ಥಾಪಕ ನಿರ್ದೇಶಕ, ಕೌಶಲಾಭಿವೃದ್ಧಿ ಪ್ರಾಧಿಕಾರ
ಇ-ಸ್ಕಿಲ್ ಲರ್ನಿಂಗ್:ಗುರುವಾರ ಚಾಲನೆ ಸಿಗುತ್ತಿರುವ ಮತ್ತೊಂದು ಯೋಜನೆ ಇ-ಕೌಶಲ ಲರ್ನಿಂಗ್. ಆರ್​ವಿ ಸ್ಕಿಲ್ ಸಂಸ್ಥೆಯೊಂದಿಗೆ ಸೇರಿ ರೂಪಿಸಿರುವ ಆನ್​ಲೈನ್ ಕೋರ್ಸ್ ಇದಾಗಿದೆ. ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿರುವ ವಿದ್ಯಾರ್ಥಿಗಳು ಸೇರ್ಪಡೆಯಾಗಿ ಹೊಸ ಕೌಶಲದ ತರಬೇತಿಯನ್ನು ಆನ್​ಲೈನ್​ನಲ್ಲಿಯೇ ಪಡೆಯಬಹುದಾಗಿದೆ. ಬೇರೆ ಯಾವುದೇ ರಾಜ್ಯದಲ್ಲಿಯೂ ಇಲ್ಲದಿರುವಂತಹ ಹೊಸ ಯೋಜನೆಯಾಗಿದೆ. ಬ್ಯುಸಿನೆಸ್ ಇಂಟಲಿಜೆನ್ಸ್ ಅನಾಲಿಸ್ಟ್, ಡಾಟಾ ಕ್ವಾಲಿಟಿ ಅನಾಲಿಸ್ಟ್, ಬ್ಯಾಟರಿ ಮ್ಯಾನೇಜ್​ವೆುಂಟ್ ಸಿಸ್ಟಂ, ಬ್ಲಾಕ್​ಚೈನ್ ಟೆಕ್ನಾಲಜಿ, ಕ್ಲೌಡ್ ಅಪ್ಲಿಕೇಷನ್ ಡೆವಲಪರ್, ಕ್ಲೌಡ್ ಆರ್ಕಿಟೆಕ್, ಆರ್​ಟಿಎಲ್ ಡಿಸೈನ್ ಇಂಜಿನಿಯರ್ ಸೇರಿ 30 ಕೋರ್ಸ್​ಗಳಿವೆ.
ವಿಶ್ವ ಮಟ್ಟದ ಸ್ಪರ್ಧೆ:ಪ್ರತಿ ಎರಡು ವರ್ಷಕ್ಕೊಮ್ಮೆ ವಿವಿಧ ದೇಶಗಳಲ್ಲಿ ವಿಶ್ವ ಯುವ ಕೌಶಲ ಸ್ಪರ್ಧೆ ನಡೆಯುತ್ತದೆ. 2022ರ ಸ್ಪರ್ಧೆಗಳು ಚೀನಾದ ಶಾಂಘೈ ನಗರದಲ್ಲಿ ಅಕ್ಟೋಬರ್​ನಲ್ಲಿ ನಡೆಯಲಿವೆ. 2024ರ ಸ್ಪರ್ಧೆ ಫ್ರಾನ್ಸ್​ನ ಲಿಯೋನ್​ನಲ್ಲಿ ನಡೆಯಲಿದೆ. ಶಾಂಘೈನಲ್ಲಿ ನಡೆಯುವ ಸ್ಪರ್ಧೆಗೆ ರಾಜ್ಯದ 24 ಜನ ಯುವಕರು ಆಯ್ಕೆಯಾಗಿದ್ದಾರೆ.ಆಯ್ಕೆಯ ವಿವಿಧ ಹಂತದಲ್ಲಿ 54 ಟ್ರೇಡ್​ಗಳಲ್ಲಿ ಸ್ಪರ್ಧೆಗಳಿರುತ್ತವೆ. ರಾಜ್ಯ, ಪ್ರಾದೇಶಿಕ, ಹಾಗೂ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ನಡೆಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಮಾಡಬೇಕಾಗುತ್ತದೆ. ಪ್ರತಿಯೊಂದು ವಿಷಯದ ಸ್ಪರ್ಧೆಗೆ ರಾಷ್ಟ್ರ ಮಟ್ಟಕ್ಕೆ ಇಬ್ಬರನ್ನು ಕಳುಹಿಸಲು ಅವಕಾಶ ಇರುತ್ತದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆಯ್ಕೆಯಾದರೆ ನಂತರ ಕೈಗಾರಿಕೆಗಳ ಮೂಲಕ ತರಬೇತಿಯನ್ನು ನೀಡಲಾಗುತ್ತದೆ. ಯಾವುದೇ ವಿದ್ಯಾರ್ಥಿಗಳು 54 ಟ್ರೇಡ್​ಗಳಲ್ಲಿ ತಮಗೆ ಇಷ್ಟವಾದ ವಿಷಯ ಆಯ್ಕೆ ಮಾಡಿಕೊಂಡು ಅದರ ಬಗ್ಗೆ ಮೂರು ನಿಮಿಷಗಳ ವಿಡಿಯೋ ತಯಾರಿಸಿ ಡಿಡಿಡಿ.kಚ್ಠಠಜಚ್ಝkಚ್ಟ.ಟಞ ವೆಬ್​ಸೈಟ್​ಗೆ ಅಪ್​ಲೋಡ್ ಮಾಡಬೇಕು. ಅದನ್ನು ಗಮನಿಸಿ ಉತ್ತಮವಾಗಿರುವವರನ್ನು ಆಯ್ಕೆ ಮಾಡಲಾಗುತ್ತದೆ. ನಂತರ ತರಬೇತಿ ನೀಡಿ ರಾಜ್ಯ ಮಟ್ಟದ ಸ್ಪರ್ಧೆಗೆ ಸಿದ್ಧಪಡಿಸಲಾಗುತ್ತದೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ 108 ಜನರನ್ನು ಕಳುಹಿಸಲಾಗುತ್ತದೆ. ಲ್ಯಾಂಡ್​ಸ್ಕೇಪ್ ಗಾರ್ಡನಿಂಗ್, ಫ್ಯಾಷನ್ ಟೆಕ್ನಾಲಜಿ, ಹೇರ್ ಡ್ರೆಸಿಂಗ್, ವೆಲ್ಡಿಂಗ್, ಪ್ಲಾಸ್ಟಿಕ್ ಡೈ ಇಂಜಿನಿಯರಿಂಗ್, ಬ್ರಿಕ್​ಲೇಯಿಂಗ್, ವಾಲ್ ಅಂಡ್ ಪ್ಲೋರ್ ಟಿಲಿಂಗ್, ಡಿಜಿಟಲ್ ಕನ್​ಸ್ಟ್ರಕ್ಷನ್, ಮೊಬೈಲ್ ರೋಬೋಟಿಕ್, ಕಾರ್ಪೆಂಟರಿ, ವಾಟರ್ ಟೆಕ್ನಾಲಜಿ… ಹೀಗೆ 54 ವಿಷಯಗಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 4 =
Remember me
