ಬೆಂಗಳೂರು: ಗಗನಕ್ಕೇರಿರುವ ಇಂಧನ ಬೆಲೆಯು ಎಂಎಸ್‌ಎಂಇಗಳನ್ನು ಸಂಪೂರ್ಣವಾಗಿ ಆತಂಕಕ್ಕೆ ಈಡು ಮಾಡಿದೆ ಮತ್ತು ಅವುಗಳು ಅಳಿವಿನಂಚಿನಲ್ಲಿರುವ ಭೀತಿಯನ್ನು ಎದುರಿಸುತ್ತಿವೆ ಎಂದು ಕರ್ನಾಟಕದಲ್ಲಿ ಮೂರು ಅಂಕಿಗಳತ್ತ ಸಾಗುತ್ತಿರುವ ಇಂಧನ ಬೆಲೆಗೆ ಪ್ರತಿಕ್ರಿಯೆಯಾಗಿ ಕಾಸಿಯಾ (Karnataka Small Scale Industries Association) ಹೇಳಿದೆ.
“ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಆರ್ಥಿಕ ಮಂದಗತಿ, ಲಾಕ್‌ಡೌನ್ ಮತ್ತು ಕರೋನಾ ವೈರಸ್ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುತ್ತಿರುವಾಗ, ಗಗನಕ್ಕೇರಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಎಂಎಸ್‌ಎಂಇಗಳ ಕಾರ್ಯಾಚರಣೆಯ ವೆಚ್ಚವನ್ನು ಸುಮಾರು 25-30% ರಷ್ಟು ಹೆಚ್ಚು ಮಾಡಿದ್ದು, ಇದರಿಂದಾಗಿ ಎಂ.ಎಸ್.ಎಂ.ಇ.ಗಳ ಕಾರ್ಯಸಾಧ್ಯತೆಯನ್ನು ಸಂಕಷ್ಟಕ್ಕೀಡುಮಾಡಿದೆ” ಎಂದು ಕಾಸಿಯಾ  ಅಧ್ಯಕ್ಷ ಕೆ .ಬಿ. ಅರಸಪ್ಪ, ತಿಳಿಸಿದ್ದಾರೆ.
“ಉತ್ಪಾದನೆ, ಯಂತ್ರೋಪಕರಣಗಳು, ಆಟೋಮೋಟಿವ್ ಬಿಡಿಭಾಗಗಳು, ಲಾಜಿಸ್ಟಿಕ್ಸ್, ಕಚ್ಚಾ ವಸ್ತುಗಳ ವೆಚ್ಚ, ಸಾಮೂಹಿಕ ಮತ್ತು ವೈಯಕ್ತಿಕ ಸಾರಿಗೆಯ ಮೇಲೆ ಪರಿಣಾಮವು ಹೆಚ್ಚಾಗಿ ಬೀರಲಿದ್ದು ಇದು ಕಚ್ಚಾ ವಸ್ತುಗಳ ಮತ್ತು ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ. “ಹೆಚ್ಚಳವನ್ನು ತಡೆಯಲು ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ, ಇಲ್ಲದಿದ್ದರೆ ಸಣ್ಣ ಕೈಗಾರಿಕೆಗಳ ಚೇತರಿಕೆ ಮರೀಚಿಕೆಯಾಗಲಿದೆ. ಯಾವುದೇ ವಿಳಂಬವು ಬಹುಶಃ ಆರ್ಥಿಕತೆಯ ಮೇಲೆ ಬದಲಾಯಿಸಲಾಗದ ಪರಿಣಾಮವನ್ನು ಬೀರುವ ಕಾರಣ ರಾಜ್ಯ ಸರ್ಕಾರವು ವ್ಯಾಟ್ ಅನ್ನು ಕಡಿಮೆ ಮಾಡಿ ಮೂಲಕ ಮತ್ತು ಬೆಲೆಯನ್ನು ತಗ್ಗಿಸುವ ಮೂಲಕ ಮಧ್ಯಪ್ರವೇಶಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ಈ ವಿಷಯದ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿರುವ ಕಾಸಿಯಾ ಅಧ್ಯಕ್ಷರು, ಪೆಟ್ರೋಲಿಯಂ ಸಚಿವಾಲಯ ಮತ್ತು ತೈಲ ಕಂಪನಿಗಳಂತಹ ಎಲ್ಲ ಪಾಲುದಾರರೊಂದಿಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಖಂಡಿತವಾಗಿಯೂ ಇದೆ. ಏಕೆಂದರೆ ಪೆಟ್ರೋಲ್ ಮತ್ತು ಡೀಸೆಲ್‌ನ ಅಂತಿಮ ಬೆಲೆಯ ಮೂರನೇ ಎರಡರಷ್ಟು ತೆರಿಗೆಗಳು ಸೇರಿದ್ದು, ಅದನ್ನು ಕಡಿಮೆ ಮಾಡಬಹುದು. ಆರ್ಥಿಕತೆಯ ಮೇಲೆ ಯಾವುದೇ ಹಣದುಬ್ಬರ ಒತ್ತಡವನ್ನು ತಪ್ಪಿಸಲು ಇದು ನಿರ್ಣಾಯಕವಾಗಿದೆ ಹಾಗೂ ಇದು ಆರ್ಥಿಕ ಹಿಂಜರಿತವನ್ನು ತಡೆಯಬಲ್ಲದು ಎಂದು ಕಾಸಿಯಾ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
