ರಾಜ್ಯದಲ್ಲಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿರುವ ಆಯವ್ಯಯವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ್ದಾರೆ. ಕಳೆದ ಬಾರಿಗಿಂತ ಈ ಬಜೆಟ್​ನಲ್ಲಿ ಸಾಕಷ್ಟು ಉತ್ತಮ ಕ್ರಮಗಳನ್ನು ಯಾರಿಗೂ ಹೊರೆಯಾಗದಂತೆ ಕೈಗೊಂಡಿದ್ದಾರೆ. ಕರೊನಾ ಸಂಕಷ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಕುಂಠಿತ ಬೆಳವಣಿಗೆ ಇದ್ದರೆ, ಕೃಷಿಯಲ್ಲಿ ಕಡಿಮೆಯಾಗಲಿಲ್ಲ. ಈಗ ಇನ್ನಷ್ಟು ಉತ್ತೇಜನಕಾರಿ ಕ್ರಮಗಳನ್ನು ಕೈಗೊಂಡಿರುವುದರಿಂದ ಕೃಷಿ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಆಗುವ ಬೆಳವಣಿಗೆಗಳು ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲು ಕಾರಣವಾಗುತ್ತವೆ.
ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ. 10 ಮೀಸಲಾತಿ ನೀಡಿರುವುದರಿಂದ ಗ್ರಾಮೀಣ ಭಾಗದ ರೈತ ಮಹಿಳೆಯರ ಸಬಲೀಕರಣಕ್ಕೆ ಅನುಕೂಲವಾಗುತ್ತದೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಇದ್ದ ಸೀಟುಗಳ ಮೀಸಲಾತಿಯನ್ನು ಶೇ. 50ಕ್ಕೆ ಹೆಚ್ಚಿಸಿರುವುದರಿಂದ ರೈತರ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಪದವಿ ಪಡೆಯುವುದಕ್ಕೆ ಅನುಕೂಲವಾಗುತ್ತದೆ. ಇವೆರಡು ರೈತಾಪಿ ವರ್ಗಕ್ಕೆ ನೇರವಾಗಿ ಆಗುವ ಅನುಕೂಲವಾಗಿವೆ.
ರಾಮನಗರದಲ್ಲಿ ಹೈಟೆಕ್ ಸಿಲ್ಕ್ ಮಾರುಕಟ್ಟೆ, ವಿಜಯಪುರ ಜಿಲ್ಲೆಯ ಇಟ್ಟಂಗಿಹಳ್ಳಿಯಲ್ಲಿ ಫುಡ್​ಪಾರ್ಕ್ ಮಾಡುವುದರಿಂದ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಗೆ ಸಹಕಾರಿಯಾಗುವ ನಡೆಯಾಗಿದೆ. ಪಿಎಂ ಕಿಸಾನ್ ಸಂಚಯ ಹಾಗೂ ಇತರ ಕಾರ್ಯಕ್ರಮಗಳಿಗೆ ರಾಜ್ಯದಲ್ಲಿಯೂ ಪೂರಕವಾಗಿ ಅನುದಾನ ನೀಡಲಾಗಿದೆ. ತೋಟಗಾರಿಕೆ, ಸಾವಯವ ಕೃಷಿ, ಬೆಂಗಳೂರಿನ ಹೆಸರಘಟ್ಟದಲ್ಲಿ 100 ಎಕರೆ ಪ್ರದೇಶದಲ್ಲಿ ಸಂಶೋಧನೆಗೆ ಆದ್ಯತೆ, ಹೈಬ್ರಿಡ್ ಬೀಜ ವಿತರಣೆಗೆ ಕ್ರಮ, ರಸಗೊಬ್ಬರ ವಿತರಣೆ ಸೂಕ್ತವಾಗಿ ನಡೆಯಲು 10 ಕೋಟಿ ರೂ., ಅಡಕೆಗೆ ತಗುಲಿರುವ ಹಳದಿ ಎಲೆರೋಗ ಸಂಶೋಧನಾ ಕೇಂದ್ರಕ್ಕೆ 25 ಕೋಟಿ ರೂ. ನೀಡುವ ಮೂಲಕ ಕೃಷಿಯ ಸಮಗ್ರ ಆಯಾಮವನ್ನು ಸರ್ಕಾರ ನೋಡಿದೆ. ನೀರಾವರಿಗೂ ಆದ್ಯತೆ ನೀಡಲಾಗಿದೆ. ರೈತರಿಗೆ ಅಡಮಾನ ಸಾಲದ ಮೇಲಿನ ಬಡ್ಡಿ ಕಡಿಮೆ ಮಾಡಿರುವ ಕ್ರಮವು ಸಾಕಷ್ಟು ಅನುಕೂಲವನ್ನುಂಟು ಮಾಡುತ್ತದೆ. ಹೂವು, ಒಣಮೆಣಸಿನಕಾಯಿಗೆ ಪ್ರತ್ಯೇಕ ಮಾರುಕಟ್ಟೆ ಸ್ಥಾಪಿಸಲು ಮುಂದಾಗಿರುವುದು ಒಳ್ಳೆಯದು. ಕುರಿ ಸಂವರ್ಧನೆ ಕೇಂದ್ರ ಮಾಡುವುದು, ಬೇಡ್ತಿ ಹಾಗೂ ವರದಾನದಿಗಳ ಜೋಡಣೆಗೆ ಒತ್ತು ನೀಡಿರುವುದು ಸಹ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿಯೇ ಇವೆ.
ಕೇಂದ್ರ ಸರ್ಕಾರ 300 ಮಿಲಿಯನ್ ಟನ್ ಆಹಾರ ಧಾನ್ಯ ಉತ್ಪಾದನೆ ಮಾಡಬೇಕೆಂಬ ಉದ್ದೇಶ ಹೊಂದಿದೆ. ರಾಜ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಿರುವ ಒತ್ತನ್ನು ಗಮನಿಸಿದಾಗ ಅದಕ್ಕೆ ಪೂರಕವಾಗಿಯೇ ಕ್ರಮಗಳನ್ನು ಕೈಗೊಂಡಿರುವುದು ಕಂಡು ಬರುತ್ತದೆ. ರೈತರ ಆದಾಯ ದ್ವಿಗುಣ ಮಾಡುವುದಕ್ಕೆ ನೇರವಾಗಿ ಕಾರ್ಯಕ್ರಮ ಇಲ್ಲದಿದ್ದರೂ ಪರೋಕ್ಷವಾಗಿ ಈ ಎಲ್ಲ ಕಾರ್ಯಕ್ರಮಗಳು ನೆರವಾಗುತ್ತವೆ. ಗ್ರಾಮೀಣ ಭಾಗದಲ್ಲಿ ಉತ್ತಮ ಬೆಳವಣಿಗೆಯನ್ನು ಇದರಿಂದ ನಿರೀಕ್ಷೆ ಮಾಡಬಹುದಾಗಿದೆ. ಯಡಿಯೂರಪ್ಪ ಅವರು ಯಾರಿಂದಲೂ ಕಿತ್ತು ಕೊಳ್ಳದೇ ಎಲ್ಲ ವಲಯಕ್ಕೂ ಕೊಡುಗೆ ನೀಡಿದ್ದಾರೆ.
|ಎಸ್.ಎಸ್. ಪಾಟೀಲ್ಡೀನ್, ಕೃಷಿ ಕಾಲೇಜು, ಕಲಬುರಗಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
