ಬೆಂಗಳೂರು:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿವಿಧ ಕೋರ್ಸ್​​ಗಳ ಈ ಶೈಕ್ಷಣಿಕ ಸಾಲಿನ (2020-21) ಜುಲೈ ತಿಂಗಳ ಪ್ರವೇಶಾತಿ ಈಗಾಗಲೇ ಆರಂಭವಾಗಿದ್ದು, ದಂಡ ರಹಿತವಾಗಿ ಪ್ರವೇಶ ಪಡೆಯಲು ಅಕ್ಟೋಬರ್ 10ಕ್ಕೆ ಕೊನೇ ದಿನವಾಗಿರುತ್ತದೆ ಎಂದು ವಿವಿಯ ಪ್ರಾದೇಶಿಕ ನಿರ್ದೇಶಕ ಗಿರೀಶ್​ ಎಚ್​.ಎನ್​. ತಿಳಿಸಿದ್ದಾರೆ.
ಸ್ನಾತಕ/ಸ್ನಾತಕೋತ್ತರ ಕೋರ್ಸ್​ಗಳಾದ ಬಿ.ಎ, ಬಿಕಾಂ, ಬಿಲಿಬ್​ ಐಎಸ್​ಸಿ, ಎಂಎ, ಎಂಕಾಂ. ಎಂಎ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಎಂಲಿಬ್​ಐಎಸ್​ಸಿ, ಎಂ.ಎಸ್ಸಿ, ಎಂಬಿಎ, ಪಿಜಿ ಡಿಪ್ಲೊಮಾ, ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್​ಗಳ ಪ್ರವೇಶಾತಿ ಚಾಲ್ತಿಯಲ್ಲಿದೆ. ಪ್ರಥಮ ವರ್ಷದ ಕೋರ್ಸ್​ಗಳಿಗೆ ದಂಡ ರಹಿತವಾಗಿ ಪ್ರವೇಶ ಪಡೆಯಲು ಅಕ್ಟೋಬರ್​ 10 ಕೊನೇ ದಿನವಾಗಿರುತ್ತದೆ.
ಇದನ್ನೂ ಓದಿ:ದೀದಿ ನಾಡಲ್ಲಿ ಭುಗಿಲೆದ್ದ ಘರ್ಷಣೆ; ನಬನ್ನಾ ಚಲೋ ತಡೆದ ಪೊಲೀಸರ ವಿರುದ್ಧ ಬಿಜೆಪಿ ಆಕ್ರೋಶ
ಈ ಕೋರ್ಸ್​ಗಳಿಗೆ 100 ರೂಪಾಯಿ ದಂಡ ಶುಲ್ಕದೊಂದಿಗೆ ಅಕ್ಟೋಬರ್ 20ರ ತನಕ ಪ್ರವೇಶ ಪಡೆಯಬಹುದು. ಅದೇ ರೀತಿ, 200 ರೂಪಾಯಿ ದಂಡ ಶುಲ್ಕದೊಂದಿಗೆ ಪ್ರವೇಶ ಪಡೆಯಲು ಅಕ್ಟೋಬರ್ 29ರ ತನಕ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವೆಬ್​ಸೈಟ್​https://ksoumysuru.ac.in/ಗಮನಿಸಬಹುದು ಅಥವಾ ಪ್ರಾದೇಶಿಕ ಕಚೇರಿಯ ದೂರವಾಣಿ ಸಂಖ್ಯೆ 080-26603664 ಗೆ ಕರೆ ಮಾಡಬಹುದು ಎಂದು ಗಿರೀಶ್ ತಿಳಿಸಿದ್ದಾರೆ.
ವೆಹಿಕಲ್​ ಫಿಟ್​ನೆಸ್ ಸರ್ಟಿಫಿಕೇಟ್ ತಗೊಳ್ಳೋಕೆ ಇನ್ನು ಪರದಾಡಬೇಕಾಗಿಲ್ಲ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 16 =
Remember me
