ಚಿಕ್ಕೋಡಿ:ಕರ್ನಾಟಕ ಮತ್ತು ಮಹಾಷ್ಟ್ರದ ಗಡಿ ವಿವಾದ ದಿನೇ ದಿನೇ ಕಾವು ಪಡೆಯುತ್ತಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರೇ ಖಡಕ್​ ಉತ್ತರ ನೀಡಿದರೂ ಇನ್ನೂ ಮಹಾ ಪುಂಡರ ಆಟಾಟೋಪ ನಿಲ್ಲುತ್ತಿಲ್ಲ. ಉದ್ಧವ್​ ಠಾಕ್ರೆ ಬಣದವರು ಗಡಿ ಭಾಗದಲ್ಲಿ ‘ಮಹಾರಾಷ್ಟ್ರಕ್ಕೆ ಕರ್ನಾಟಕ ಬಸ್ ಬರೋದು ಬ್ಯಾನ್ ಮಾಡಬೇಕಾಗುತ್ತೆ’ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ.
ನಿನ್ನೆ ಉದ್ಧವ್ ಠಾಕ್ರೆ ಬಣದಿಂದ ಗಡಿಯಲ್ಲಿ ಪ್ರತಿಭಟನೆ ನಡೆದಿತ್ತು. ಇಂದು ರಾಜ್ ಠಾಕ್ರೆ ಬಣದವರಿಂದ ಗಡಿಯಲ್ಲಿ ಪ್ರತಿಭಟನೆ ನಡೆದಿದೆ. ಇವರ ಪ್ರತಿಭಟನೆ ಕಾಗವಾಡ ಚೆಕ್‌ ಪೋಸ್ಟ್‌ವರೆಗೂ ಬಂದಿತ್ತು. ಈ ಸಂದರ್ಭ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸಾಂಗ್ಲಿ ಜಿಲ್ಲಾಧ್ಯಕ್ಷ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಮನಸೇ ಅಧ್ಯಕ್ಷ ತಾನಾಜಿ ಸಾವಂತ 10ಕ್ಕೂ ಹೆಚ್ಚು ಕಾರ್ಯಕರ್ತರೊಡನೆ ಬಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ‘ಕರ್ನಾಟಕದವರು ನಮ್ಮ ಮೇಲೆಯೇ ಅವಲಂಬಿತರಾಗಿದ್ದಾರೆ. ಇವರಿಗೆ ಆರೋಗ್ಯ ಸೇವೆಗೆ ಮಹಾರಾಷ್ಟ್ರ ಬೇಕು. ಉದ್ಯೋಗಕ್ಕಾಗಿ ಹಲವು ಜನ ನಮ್ಮಲ್ಲಿಗೇ ಬರುತ್ತಾರೆ. ಇವರಿಗೆ ‌ಕುಡಿಯುವ ನೀರು ಸಹ ಮಹಾರಾಷ್ಟ್ರದಿಂದಲೇ‌ ಬೇಕು. ಆದರೆ ಗಡಿ ವಿಚಾರ ಬಂದಾಗ ಮಾತ್ರ ನಮ್ಮ ಮೇಲೆ ದೌರ್ಜನ್ಯ ಮಾಡ್ತಾರೆ. ಕರ್ನಾಟಕದ ಸಂಘಟನೆಗಳಿಂದ ಮಹಾ ಲಾರಿಗಳ ಮೇಲೆ ದಾಳಿ ಆಗುತ್ತೆ. ಇದು ಮುಂದುವರೆದರೆ ಮಹಾರಾಷ್ಟ್ರದಲ್ಲಿ ಇರುವಂತಹ ಕನ್ನಡಿಗರನ್ನು ಓಡಿಸಬೇಕಾಗುತ್ತೆ. ಮಹಾರಾಷ್ಟ್ರಕ್ಕೆ ಕರ್ನಾಟಕ ಬಸ್ ಬರೋದು ಕೂಡ ಬ್ಯಾನ್ ಮಾಡಬೇಕಾಗುತ್ತೆ’ ಎಂದು ಬೊಬ್ಬಿರಿದು ಹೋಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + five =
Remember me
