ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ತರಬೇತಿ ನೀಡುವ ಉದ್ದೇಶದಿಂದ ರಾಜಕೀಯ ಕಾಲೇಜು ಸ್ಥಾಪನೆ ಕುರಿತು ಮುಖ್ಯಮಂತ್ರಿ ಜತೆಗೆ ಚರ್ಚಿಸಿದ್ದು, ಅವರು ಸಮ್ಮತಿಸಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ವಿಕಾಸ ಸೌಧದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯಮಟ್ಟದ ‘ಯುವ ಸಂಸತ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ‘ಯುವ ಸಂಸತ್’ ಕಾರ್ಯಕ್ರಮಕ್ಕೆ ಸೀಮಿತವಾಗದೆ, ರಾಜ್ಯದಲ್ಲಿ ಉತ್ತಮ ರಾಜಕೀಯ ವಾತಾವರಣ ನಿರ್ಮಿಸಬೇಕು.
ಈ ದಿಸೆಯಲ್ಲಿ ಸಲಹೆಗಳನ್ನು ನೀಡಬೇಕು. ಯುವ ಜನರು ರಾಜಕೀಯಕ್ಕೆ ಬಂದು ಉತ್ತಮವಾಗಿ ಕೆಲಸ ಮಾಡಿ, ಇತಿಹಾಸದಲ್ಲಿ ಹೆಸರು ಉಳಿಯುವಂತೆ ಮಾಡಬೇಕು ಎಂದು ಬಸವರಾಜ ಹೊರಟ್ಟಿ ಸಲಹೆ ನೀಡಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿತಾಲೂಕು, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಹಾಗೂ ವಿಧಾನಸಭೆ ಸದಸ್ಯರಿಗೆ ಸಮಾಜದಲ್ಲಿ ಉತ್ತಮವಾಗಿ ಕೆಲಸ ಮಾಡಲು ಅವಕಾಶವಿದೆ ಎಂದರು.
ಮಾನವೀಯ ಗುಣಗಳಾದ ಕರುಣೆ, ದಯೆ, ಜನರ ವಿಶ್ವಾಸವನ್ನು ಯುವಜನರು ಹೊಂದಬೇಕು. ರಚನಾತ್ಮಕ ಕೆಲಸ, ಸಂಸದೀಯ ಮೌಲ್ಯವನ್ನು ತಿಳಿದುಕೊಂಡು ಜನರ ಪ್ರತಿನಿಧಿಯಾಗಿ ಜನರ ಹಿತ ಕಾಪಾಡಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಯುವಜನರು ಮುಂದೆ ಬಂದು, ಸಮಾಜದ ಪ್ರತಿನಿಧಿಯಾಗಿ ಕೆಲಸ ಮಾಡಬೇಕು. ಉತ್ತಮ ಸಮಾಜದ ನಿರ್ಮಾಣ ಯುವಜನರ ಕೈಯ್ಯಲ್ಲಿದೆ ಎಂದರು.
ಮಾತಿನ ಚಾತುರ್ಯ, ವೈಚಾರಿಕೆ, ಇತರರ ಅಭಿಪ್ರಾಯ ಗೌರವುದು, ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡುವ ಉದ್ದೇಶ ಹೊಂದಿ, ಜನ ಸೇವೆಯೇ ಜನಾರ್ದನ ಸೇವೆ ಎಂದು ತಿಳಿದು ದೇಶ ನಿರ್ಮಾಣದಲ್ಲಿ ಹೆಜ್ಜೆ ಹಾಕಬೇಕು ಎಂದು ಎಚ್.ಕೆ.ಪಾಟೀಲ್ ಕಿವಿಮಾತು ಹೇಳಿದರು.
ಸಿಟಿಜನ್ ಕನ್ನಡ, ಸಿಟಿಜನ್ ಇಂಡಿಯಾ ಸಮೂಹ ಮಾಧ್ಯಮ ಸಂಸ್ಥೆ, ರಾಜ್ಯ ಕಾನೂನು ಮತ್ತು ಸಸದೀಯ ಸುಧಾರಣಾ ಸಂಸ್ಥೆ, ಬೆಂಗಳೂರು ವಿವಿ ಕಾನೂನು ಕಾಲೇಜು ಸಂಯುಕ್ತವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದವು.
ಬೆಂಗಳೂರು ವಿವಿ ಕುಲಪತಿ ಡಾ.ಎಸ್.ಎಂ.ಜಯಕರ್, ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ಕೆ.ದ್ವಾರಕನಾಥ್ ಬಾಬು, ಕಾನೂನು ಕಾಲೇಜು ಪ್ರಾಧ್ಯಾಪಕ ಡಾ.ಸುರೇಶ ವಿ.ನಾಡಗೌಡ, ಸಿಟಿಜನ್ ಗ್ರೂಪ್‌ನ ಸ್ವಾತಿ ಚಂದ್ರಶೇಖರ್ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + three =
Remember me
