ಹಳಿಯಾಳ:ಅಮೆರಿಕದ ಮಿಯಾಮಿಯಲ್ಲಿ ಭಾನುವಾರ ನಡೆಯುವ ಮ್ಯಾರಥಾನ್ ಓಟಕ್ಕೆ ಕನ್ನಡತಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಗೃಹಣಿ ನೀಲಿಮಾ ವಿವೇಕ ಪೈ (ದೇಶಪಾಂಡೆ) (ಬರಿಗಾಲಿನ ಓಟಗಾರ್ತಿ) ಕುರಿತು ಅಲ್ಲಿನ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ಮಿಯಾಮಿ ಹೆರಾಲ್ಡ್’ ವರದಿ ಪ್ರಕಟಿಸಿದ್ದು, ಭಾರತೀಯ ಮಹಿಳೆಯ ಕೀರ್ತಿ ಪಸರಿಸುವಂತೆ ಮಾಡಿದೆ.
ವಿದೇಶಿ ನೆಲದಲ್ಲಿ ನಡೆಯುತ್ತಿರುವ ಮ್ಯಾರಥಾನ್ ಓಟಕ್ಕೆ ಭಾರತೀಯ ಮಹಿಳೆಯ ಬರಿಗಾಲಿನ ಓಟವೇ ಮುಖ್ಯ ಆಕರ್ಷಣೆ ಹಾಗೂ ಪ್ರೇರಣೆಯಾಗಿ ಬಿಂಬಿಸಲ್ಪಟ್ಟಿದೆ. ಮಿಯಾಮಿಯಲ್ಲಿ 2018ರಲ್ಲಿ ಆಯೋಜಿಸಿದ್ದ ಮ್ಯಾರಥಾನ್​ನಲ್ಲಿ ಅಪ್ಪಟ ಭಾರತೀಯ ವೇಷಭೂಷಣ ಸೀರೆ ಧರಿಸಿಕೊಂಡು ಬರಿಗಾಲಿನಲ್ಲಿ 13.1 ಮೈಲು ದೂರ ಓಡುವ ಮೂಲಕ ನೀಲಿಮಾ ವಿವೇಕ ಪೈ ಮಿಯಾಮಿ ಮ್ಯಾರಥಾನ್​ದಲ್ಲಿ ಭಾರಿ ಸುದ್ದಿಯ ಕೇಂದ್ರಬಿಂದುವಾಗಿದ್ದರು. ಕಳೆದ 16 ವರ್ಷಗಳಿಂದ ಮಿಯಾಮಿಯಲ್ಲಿ ಮ್ಯಾರಥಾನ್ ಓಟವನ್ನು ಸಂಘಟಿಸಲಾಗುತ್ತಿದ್ದು, ನಾನಾ ರಾಷ್ಟ್ರಗಳ ಉತ್ಸಾಹಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ.
ಫೆ. 9ರಂದು ಈ ಸಾಲಿನ ‘ಲೈಫ್ ಟೈಮ್ ಮಿಯಾಮಿ ಮ್ಯಾರಥಾನ್’ ನಡೆಯಲಿದ್ದು, 21 ಸಾವಿರಕ್ಕಿಂತ ಹೆಚ್ಚು ಓಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಮ್ಯಾರಥಾನ್ ಪ್ರಚಾರಕ್ಕಾಗಿ ಮಿಯಾಮಿ ಹೆರಾಲ್ಡ್ ದಿನಪತ್ರಿಕೆ ನೀಲಿಮಾ ಅವರು 2018ರಲ್ಲಿ ಓಡಿದ ಬರಿಗಾಲಿನ ಓಟದ ಸುದ್ದಿಯನ್ನು ಕೇಂದ್ರವನ್ನಾಗಿಸಿಕೊಂಡು ಮ್ಯಾರಥಾನ್ ಪ್ರಚಾರದ ಕಾವು ಹೆಚ್ಚಿಸಿದೆ.
ಮ್ಯಾರಥಾನ್ ಓಟಕ್ಕೆ ನನಗೆ ಪ್ರೇರಣೆ ನನ್ನ ಪತಿ. ನಿತ್ಯ ಬೆಳಗ್ಗೆ ಜಾಗಿಂಗ್ ಸಮಯದಲ್ಲಿ ಕರೆದುಕೊಂಡು ಹೋಗುತ್ತಿದ್ದ ಅವರು ಓಡುವ ಅಭಿರುಚಿ ಹಚ್ಚಿದರು ಎನ್ನುತ್ತಾರೆ ನೀಲಿಮಾ. ಅಮೆರಿಕದಿಂದ ದೂರವಾಣಿ ಮೂಲಕ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ನೀಲಿಮಾ, ತಮ್ಮ ಎಂಟು ವರ್ಷಗಳ ಮ್ಯಾರಥಾನ್ ಓಟದ ಅನುಭವ ಹಂಚಿಕೊಂಡರು.
45 ವರ್ಷದ ನೀಲಿಮಾ ಅವರದ್ದು ಪತಿ, ಇಬ್ಬರು ಮಕ್ಕಳನ್ನೊಳಗೊಂಡ ಚಿಕ್ಕ ಕುಟುಂಬ. ಎಂಎ ಪದವಿ ಪಡೆದ ಅವರು ಕೆಲಕಾಲ ಮುಂಬೈನ ಲಾ ಕಾಲೇಜ್​ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಬರಿಗಾಲಿನ ಓಟಕ್ಕೆ ಬೆಂಗಳೂರಿನ ಮ್ಯಾರಥಾನ್ ಓಟಗಾರ ತೋಮಸ್ ಬಾಬಿ ಎಂಬುವರು ನೀಲಿಮಾ ಅವರಿಗೆ ಪ್ರೇರಣೆ. ಮೊದಲಿಗೆ ಮುಂಬೈನಲ್ಲಿ ಆಯೋಜಿಸಿದ್ದ ಮ್ಯಾರಥಾನ್​ನಲ್ಲಿ ಬರಿಗಾಲಿನಲ್ಲಿ ಓಡಿದ ನೀಲಿಮಾ, ಹೈದರಾಬಾದ್, ಸತಾರದಲ್ಲಿ ಆಯೋಜಿಸಿದ್ದ ಮ್ಯಾರಥಾನ್​ದಲ್ಲಿ ಪಾಲ್ಗೊಂಡಿದ್ದರು. ಇವರ ಪತಿ ಅಂತಾರಾಷ್ಟ್ರೀಯ ಖ್ಯಾತ ಮ್ಯೂಚವಲ್ ಫಂಡ್ ಆರ್ಥಿಕ ವಹಿವಾಟಿನ ಸಂಸ್ಥೆಯಲ್ಲಿ ಅಧಿಕಾರಿಯಾಗಿದ್ದು, ಅವರಿಗೆ ಮಿಯಾಮಿಗೆ ವರ್ಗವಾದ ನಂತರ ಅಲ್ಲಿಗೆ ತೆರಳಿದರು. ಇಲ್ಲಿಯೂ ಬರಿಗಾಲ ಓಟ ಮುಂದುವರಿಸಿ ಖ್ಯಾತಿ ಗಳಿಸಿದರು. ನ್ಯೂಯಾರ್ಕ್ ನಲ್ಲಿ 120 ರಾಷ್ಟ್ರಗಳ 53 ಸಾವಿರ ಜನ ಪಾಲ್ಗೊಂಡಿದ್ದ ಮ್ಯಾರಥಾನ್​ನಲ್ಲಿ ನೀಲಿಮಾ ಓಡಿ ಗಮನಸೆಳೆದಿದ್ದರು.
| ಓರ್ವಿಲ್ ಫರ್ನಾಂಡೀಸ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 15 =
Remember me
