ಬೆಂಗಳೂರು:ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕವಯಿತ್ರಿ ಡಾ.ಎಚ್.ಎಲ್. ಪುಷ್ಪಾ ಜಯಗಳಿಸಿದ್ದು, ಮೂರು ವರ್ಷಗಳ ಅವಧಿಗೆ ಚುನಾಯಿತರಾಗಿದ್ದಾರೆ.
ಭಾರಿ ಕುತೂಹಲ ಮೂಡಿಸಿದ್ದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಹಾಗೂ ಡಾ. ಎಚ್.ಎಲ್. ಪುಷ್ಪಾ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಎಚ್.ಎಲ್. ಪುಷ್ಪಾ 62 ಮತಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಚ್.ಎಲ್. ಪುಷ್ಪಾಗೆ 342 ಮತಗಳು, ವನಮಾಲಾ ಸಂಪನ್ನಕುಮಾರ್‌ಗೆ 280 ಮತಗಳು ಹಾಗೂ ಶೈಲಜಾ ಸುರೇಶ್ 33 ಮತಗಳನ್ನು ಪಡೆದಿದ್ದಾರೆ.
ಬೆಂಗಳೂರಿನ ಎನ್.ಆರ್.ಕಾಲನಿಯಲ್ಲಿರುವ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಿತು. ಸಂಘದಲ್ಲಿ 1,330 ಸದಸ್ಯರಿದ್ದು, ಈ ಪೈಕಿ 1,295 ಮಂದಿ ಮತದಾನದ ಅರ್ಹತೆ ಹೊಂದಿದ್ದರು. ಬೆಂಗಳೂರಿನಲ್ಲಿ 650 ಮತದಾರರಿದ್ದರೂ, ಕೇವಲ 280 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಸದಸ್ಯರು ಅಂಚೆ ಮೂಲಕ ಮತ ಚಲಾಯಿಸಿದ್ದಾರೆ. ರಾಜ್ಯದ ಎಲ್ಲೆಡೆಯಿಂದ 699 (ಶೇ.45) ಮತಗಳು ಚಲಾವಣೆಯಾಗಿದ್ದವು. ಇವುಗಳಲ್ಲಿ 44 ಮತಗಳು ತಿರಸ್ಕೃತಗೊಂಡಿವೆ.
ಸಂಘದಲ್ಲಿ ಲೇಖಕಿ ಟಿ. ಸುನಂದಮ್ಮ, ಎಚ್.ಎಸ್. ಪಾರ್ವತಿ, ಹೇಮಲತಾ ಮಹಿಷಿ, ನಾಗಮಣಿ ಎಸ್. ರಾವ್, ಶಶಿಕಲಾ ವೀರಯ್ಯ ಸ್ವಾಮಿ, ಉಷಾ ಪಿ. ರೈ, ಕೆ.ಆರ್. ಸಂಧ್ಯಾ ರೆಡ್ಡಿ, ಡಾ. ವಸುಂಧರಾ ಭೂಪತಿ ಹಾಗೂ ವನಮಾಲ ಸಂಪನ್ನಕುಮಾರ್ ಈವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಡಾ.ಎಚ್.ಎಲ್. ಪುಷ್ಪಾ ಅವರು 10ನೇ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಸಂಘದ ಚೌಕಟ್ಟಿನೊಳಗೆ ಎಲ್ಲಾ ಲೇಖಕಿಯರನ್ನು ತಂದು ಅವರ ಕೃತಿಗಳಿಗೆ ಸಿಗಬೇಕಾದ ಮನ್ನಣೆ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ.
|ಡಾ. ಎಚ್.ಎಲ್. ಪುಷ್ಪಾ, ನೂತನ ಅಧ್ಯಕ್ಷೆ
ನೂತನವಾಗಿ ಆಯ್ಕೆಯಾಗಿರುವ ಡಾ.ಎಚ್.ಎಲ್. ಪುಷ್ಪಾ ಅವರು ಪ್ರತಿಕ್ರಿಯಿಸಿ, ಸಂಘಕ್ಕೆ ಸುಸಜ್ಜಿತ ಕಟ್ಟಡದ ವ್ಯವಸ್ಥೆ ಮಾಡುವ ಆಶಯ ಹೊಂದಿದ್ದು, ಗ್ರಂಥಾಲಯ, ಹಿರಿಯ ಕಲಾವಿದರು ಡಾಕ್ಯುಮೆಂಟೇಷನ್ ತಯಾರಿಕೆ, ಸಂಘಕ್ಕೆ ಹೆಚ್ಚಿನ ಅನುದಾನ ಪಡೆಯುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವುದು, ಎಲ್ಲಾ ಪಂಥಗಳನ್ನು ಒಗ್ಗೂಡಿಸುವುದರ ಜತೆಗೆ ಯುವ ಲೇಖಕಿಯರು ಹಾಗೂ ಯುವ ಚಿಂತನೆಗಳನ್ನು ಬಳಸಿಕೊಂಡು ಸಂಘ ಮುನ್ನಡೆಸುವ ಆಶಯ ಹೊಂದಿದ್ದೇನೆ ಎಂದರು.
ಸ್ನೇಹಿತೆಯ ಮನೆಯಲ್ಲಿ ಬಟ್ಟೆ ಬದಲಿಸುವ ನೆಪದಲ್ಲಿ ಬಾಗಿಲು ಹಾಕಿಕೊಂಡ ಈಕೆ ಮಾಡಿದ್ದೇ ಬೇರೆ!
ಲಾಟರಿಯಲ್ಲಿ ಆಟೋ ಚಾಲಕನಿಗೆ 25 ಕೋಟಿ ರೂ. ಬಂಪರ್​ ಪ್ರೈಜ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 6 =
Remember me
