ಬೆಂಗಳೂರು:ಕರ್ನಾಟಕ ಮಹಿಳಾ ಯಕ್ಷಗಾನ ತಂಡ 25ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಇದೀಗ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಬೆಳ್ಳಿಹಬ್ಬದ ಪ್ರಯುಕ್ತ ತಂಡದ ಬ್ಯಾನರ್​ ಮತ್ತು ಲಾಂಛನವನ್ನು ಭಾನುವಾರ ನಗರದ ನಯನ ಸಭಾಂಗಣದಲ್ಲಿ ಮುಖ್ಯಮಂತ್ರಿಯವರ ವಾರ್ತಾಧಿಕಾರಿ ಎಂ.ಸಹನಾ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು ಮಹಿಳಾ ಯಕ್ಷಗಾನ ತಂಡವೊಂದನ್ನು 25 ವರ್ಷಗಳ ಕಾಲ ಮುನ್ನಡೆಸಿ ಇನ್ನು ಮುಂದಕ್ಕೂ ಗಟ್ಟಿ ಹೆಜ್ಜೆ ಹಾಕುತ್ತಿರುವುದು ಅಭಿಮಾನದ ವಿಷಯ. ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಮತ್ತಿತರ ಕ್ಷೇತ್ರಗಳ ಮಹಿಳೆಯರನ್ನು ಒಂದೆಡೆ ಸೇರಿಸಿ ಯಕ್ಷಗಾನ ಕಲಿಸಿ ಕಲೆಯನ್ನು ಉಳಿಸುವುದು ಮಾತ್ರವಲ್ಲ, ಕನ್ನಡ ಕಂಪನ್ನು ಪಸರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಈ ಪ್ರಯತ್ನದ ಹಿಂದಿರುವ ಧೀ ಶಕ್ತಿ ಕೆ. ಗೌರಿ ಮತ್ತು ಅವರ ಪತಿ, ಯಕ್ಷಗುರು ಶ್ರೀನಿವಾಸ ಸಾಸ್ತಾನ ಅವರ ಕಾರ್ಯ ಮೆಚ್ಚುವಂಥದ್ದು ಎಂದೂ ಹೇಳಿದರು.
ಇದನ್ನೂ ಓದಿ:ರಾಜಧಾನಿ ಬೆಂಗಳೂರಲ್ಲೇ ನಡೆಯಲಿದೆ ಕಂಬಳ!; ನೋಡಿ.. ಇಲ್ಲಿದೆ ವಿವರ..
ಸಮಾರಂಭದಲ್ಲಿ ಶ್ರೀಲಕ್ಷ್ಮಿನರಸಿಂಹ ಟ್ರಸ್ಟ್ ಸ್ಥಾಪಕ ಪಿ.ಸಿ.ಮುಕುಂದ ರಾವ್ ಮಾತನಾಡಿ, ಯಕ್ಷಗಾನ ಕಲೆ ಶ್ರೇಷ್ಠ ಕಲೆ. ನಗರೀಕರಣದ ಸಂದರ್ಭದಲ್ಲೂ ಇಂತಹ ಕಲೆಯನ್ನು ಬೆಂಗಳೂರಿನಲ್ಲಿ ಉಳಿಸಲು ಪ್ರಯತ್ನಿಸುತ್ತಿರುವ ಸಾಸ್ತಾನ ದಂಪತಿಗೆ ಶುಭವಾಗಲಿ ಎಂದು ಹಾರೈಸಿದರು. ರೇವತಿ ಸುರೇಶ್, ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ನಿರ್ದೇಶಕಿ ಕೆ. ಗೌರಿ ಉಪಸ್ಥಿತರಿದ್ದರು.
ಬ್ಯಾನರ್-ಲಾಂಛನ ಅನಾವರಣಕ್ಕೂ ಮುನ್ನ ತಂಡದ ಕಲಾವಿದೆಯರು ವೀರ ಅಭಿಮನ್ಯು ಮತ್ತು ಭಕ್ತ ಚಂದ್ರಹಾಸ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಿದರು. ಕಲಾವಿದೆಯರಾದ ಕೆ.ಗೌರಿ, ಆಶಾ ರಾಘವೇಂದ್ರ, ಸುಮಾ ಅನಿಲ್ ಕುಮಾರ್, ಶಶಿಕಲಾ, ಅನ್ನಪೂರ್ಣೇಶ್ವರಿ, ಚೈತ್ರ ಆರ್. ಆಚಾರ್, ಅನುಷಾ ಸುರೇಶ್, ಚೈತ್ರಾ ಭಟ್, ಸೌಜನ್ಯಾ ನಾವುಡ, ದೀಕ್ಷಾ ಭಟ್, ಅಭಿಶ್ರೀ, ಸರಯೂ ವಿಠಲ್, ಕ್ಷಮಾ ಪೈ, ಮಾನ್ಯ, ಪವಿತ್ರ, ಗಗನ, ಸಹನಾ, ಧೃತಿ ಅಮ್ಮೆಂಬಳ ಭಾಗವಹಿಸಿದ್ದರು.
ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ನಾವುಡ, ವಿನಯ್ ರಾಜೀವ್ ಶೆಟ್ಟಿ, ಮೃದಂಗದಲ್ಲಿ ಸಂಪತ್ ಆಚಾರ್ಯ, ಚೆಂಡೆಯಲ್ಲಿ ಸುಬ್ರಹ್ಮಣ್ಯ ಎಂ. ಮತ್ತು ನರಸಿಂಹ ಆಚಾರ್ ಇದ್ದರು. ಎರಡೂ ಪ್ರಸಂಗಗಳನ್ನು ಯಕ್ಷ ಶ್ರೀನಿವಾಸ ಸಾಸ್ತಾನ ಮತ್ತು ಕೆ. ಗೌರಿ ನಿರ್ದೇಶಿಸಿದ್ದರು.
ಪತ್ನಿಯ ಸ್ಮರಣಾರ್ಥ ದೇವಸ್ಥಾನ ನಿರ್ಮಿಸಿ ಆಕೆಯ ಮೂರ್ತಿಗೆ ನಿತ್ಯವೂ ಪೂಜೆ ಸಲ್ಲಿಸುತ್ತಿರುವ ಪತಿ!

ಆ ಒಂದು ತಿಂಗಳ ಸಮಯದಲ್ಲಿ ಈ ಊರಲ್ಲಿ ಕಾಗೆಗಳೇ ಕಾಣಿಸುವುದಿಲ್ಲ!; ಕಾರಣವಾದರೂ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 16 =
Remember me
