ಹಾಸನ: ಕೆನಡಾದ ಜಲಶೃಂಗ ನೀಡುವ ರಾಷ್ಟ್ರಮಟ್ಟದ ವಾಟರ್ಸ್ ನೆಕ್ಸ್ ್ಟ 2020 ವಾರ್ಷಿಕ ಪ್ರಶಸ್ತಿಗೆ ಮೂಲತಃ ಹಾಸನ ಜಿಲ್ಲೆಯ ಕನ್ನಡತಿ ಚಿತ್ರಾಗೌಡ ಆಯ್ಕೆಯಾಗಿದ್ದಾರೆ. ಇದೇ 11ರಂದು ಕೆನಡಾದಲ್ಲಿ ನಡೆದ ವರ್ಚುವಲ್ ವಾಟರ್ಸ್ ನೆಕ್ಸ್ಟ್ ಜಲಶೃಂಗದಲ್ಲಿ ಒಂಟಾರಿಯೋ ನಿವಾಸಿ ಚಿತ್ರಾಗೌಡ ಅವರನ್ನು ಸರ್ಕಾರೇತರ ನಾಯಕತ್ವ ವಿಭಾಗದಲ್ಲಿ ಪ್ರಶಸ್ತಿಗೆ ಆರಿಸಲಾಗಿದೆ.ಇದನ್ನೂ ಓದಿ:ತಿಂಗಳಲ್ಲಿ 41ಕ್ಕೇರಿದ ಸೋಂಕಿತರ ಸಂಖ್ಯೆ,  26 ಸೋಂಕಿತರು ಗುಣಮುಖ
ಜಲಮೂಲ ರಕ್ಷಣೆ, ಜಲಾನಯನ ಮೇಲ್ವಿಚಾರಣೆ ಮತ್ತು ಯೋಜನೆ, ಸಂರಕ್ಷಣಾ ಅಭ್ಯಾಸಗಳು ಮತ್ತು ಹವಾಮಾನ ಬದಲಾವಣೆಯ ಮೌಲ್ಯಮಾಪನ ಸೇರಿ ಜಲಸಂರಕ್ಷಣೆ ಕಾರ್ಯಕ್ರಮಗಳು ಮತ್ತು ನೀತಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅವರು ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಮಳೆನೀರು ಕೊಯ್ಲು, ಜಲಸಂರಕ್ಷಣೆ, ಭವಿಷ್ಯದ ಪೀಳಿಗೆಗೆ ನೀರಿನ ಉಳಿತಾಯ, ಅಲ್ಪಾವಧಿ-ದೀರ್ಘಾವಧಿಗೆ ನೀರಿನ ಬಳಕೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಶೋಧನೆ ನಡೆಸಿರುವ ಅವರು ಕೆನಡಾದ ಸ್ಥಳೀಯ ನಗರಾಡಳಿತ ಸಂಸ್ಥೆಗಳ ಜತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಚನ್ನರಾಯಪಟ್ಟಣ ತಾಲೂಕು ತಗಡೂರು ಗ್ರಾಮದ ಡಾ.ಹಾಲಪ್ಪಗೌಡ-ರತ್ನಮ್ಮ ದಂಪತಿಯ ಪುತ್ರಿ. ಮೈಸೂರಿನ ಜೆಸಿಇನಲ್ಲಿ ಪರಿಸರ ಇಂಜಿನಿಯರಿಂಗ್​ನಲ್ಲಿ ಬಿಇ ಪದವಿ ಪಡೆದಿದ್ದು, ಕೆನಡಾದಲ್ಲಿ ನೆಲೆಸಿ ಪರಿಸರ ಇಂಜಿನಿಯರಿಂಗ್​ನಲ್ಲಿ ಸ್ನಾತಕ ಪದವಿ ಗಳಿಸಿದ್ದಾರೆ. ಈ ಪ್ರಶಸ್ತಿ ಪಡೆದ ಮೊದಲ ಕನ್ನಡತಿ ಆಗಿರುವುದು ಇನ್ನೂ ಹೆಮ್ಮೆಯ ವಿಚಾರ. ಜಲಸಂರಕ್ಷಣೆ ಕ್ಷೇತ್ರದಲ್ಲಿ ಕೆಲಸ ಮಾಡುವ ಉತ್ಸಾಹವನ್ನು ಪ್ರಶಸ್ತಿ ಇಮ್ಮಡಿಗೊಳಿಸಿದೆ. ಸಾಧನೆಗೆ ಬೆನ್ನೆಲುಬಾಗಿದ್ದ ತಂದೆ ದಿ. ಡಾ.ಹಾಲಪ್ಪಗೌಡರಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ ಎಂದು ಚಿತ್ರಾ ತಿಳಿಸಿದ್ದಾರೆ.
ಅಫ್ರೀದಿ, ಶೀಘ್ರ ಗುಣಮುಖರಾಗಿ ಎಂದ ಗೌತಮ್ ಗಂಭೀರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − seven =
Remember me
