ಬೆಂಗಳೂರು:ಬೀದರ್​ನ ಕರ್ನಾಟಕ ಪಶುವೈದ್ಯಕಿಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಉಡುಪಿಯ ಪಿತ್ರೋಡಿ ಉದ್ಯಾವರದಲ್ಲಿರುವ ಯಶಸ್ವಿ ಫಿಶ್​ ಮೀಲ್​ ಹಾಗೂ ಫಿಶ್​ ಆಯಿಲ್​ ಸಂಸ್ಥೆ ನಡುವಿನ ಒಡಂಬಡಿಕೆಗೆ ಗುರುವಾರ ನಗರದ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಿ ಹಾಕಲಾಯಿತು.
ಒಪ್ಪಂದದ ಪ್ರಕಾರ ಮೀನುಗಾರಿಕಾ ಆಹಾರ ಹಾಗೂ ಮೀನು ಎಣ್ಣೆ ತಯಾರಿಕೆಗೆ ಮತ್ತು ಮೀನುಗಾರಿಕೆ ಕಾರ್ಯಕ್ರಮಗಳಿಗೆ ತ ತಾಂತ್ರಿಕ ಸಹಾಯವನ್ನು ಯಶಸ್ವಿ ಫಿಶ್​ ಮೀಲ್​ ಹಾಗೂ ಆಯಿಲ್​ ಸಂಸ್ಥೆಗೆ ನೀಡಲಿದೆ.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳು ವೈದ್ಯ ಮಾತನಾಡಿ, ದೇಶದಲ್ಲಿರುವ ನೀರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಮೀನುಗಾರಿಕೆ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದೆ. ಮೀನುಗಾರಿಕೆಯಿಂದ ನೇರವಾಗಿ ಹಾಗೂ ಪರೋಕ್ಷವಾಗಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಿದೆ. ಇಂದಿನ ಒಡಂಬಡಿಕೆಯಿಂದ ಮೀನುಗಾರರಿಗೆ ಹೆಚ್ಚಿನ ಸಹಕಾರಿಯಾಗುತ್ತದೆ. ಮೀನುಗಾರರು ಉಳಿದರೆ ಮಾತ್ರ ಉದ್ಯಮ ಉಳಿಯುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಪ್ರೋತ್ಸಾಹ ಹಾಗೂ ನೆರವನ್ನು ಇಲಾಖೆ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ಪಶುವೈದ್ಯಕಿಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿ.ವಿ. ಕುಲಪತಿ ಡಾ.ಕೆ.ಸಿ.ವೀರಣ್ಣ ಮಾತನಾಡಿ, ರೈತರ ಸಮಸ್ಯೆಗಳನ್ನು ಸಂಶೋಧನೆ ಮೂಲಕ ಪರಿಹರಿಸುವ ನಿಟ್ಟಿನಲ್ಲಿ ಕಪಪಮೀ ವಿ.ವಿ ಶ್ರಮಿಸುತ್ತಿದೆ. ಇದರ ಭಾಗವಾಗಿ ಯಶಸ್ವಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೂ ಸಹಾಯವಾಗಲಿದೆ. ಮೀನುಗಾರರು ಎದುರಿಸುತ್ತಿರುವ ಹಾಗೂ ಉದ್ಯಮರಂಗದ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮೀನುಗಾರಿಕಾ ಇಲಾಖೆ ನಿರ್ದೇಶಕ ದಿನೇಶ್​ ಕುಮಾರ್​ ಕಳ್ಳೇರ್​, ಉದ್ಯಮಿ ಸಾಧು ಸಾಲ್ಯಾನ್​, ಕರ್ನಾಟಕ ಪಶುವೈದ್ಯಕಿಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿ.ವಿ. ರಿಜಿಸ್ಟ್ರಾರ್​ ಎಸ್​.ಶಿವಶಂಕರ್​ ಮತ್ತಿತರರಿದ್ದರು.
ಯಶಸ್ವಿ ಫಿಶ್​ ಮೀಲ್​ ಹಾಗೂ ಆಯಿಲ್​ ಸಂಸ್ಥೆಯು ಕಪಪಮೀ ವಿ.ವಿಯನ್ನು ತ ತಾಂತ್ರಿಕ ಸಲಹೆಗಳಿಗಾಗಿ ಸಂಪರ್ಕಿಸಿದೆ. ಇದರಲ್ಲಿ ಮೀನುಗಾರಿಕಾ ೇತ್ರದ ಹೊಸ ತಂತ್ರಾನಗಳು, ಸಾಗರ ಮೀನುಗಾರಿಕಾ ಸಂಪನ್ಮೂಲಕ್ಕೆ ಸಂಬಂಧಿಸಿದ ಅಧ್ಯಯನ, ಕರ್ನಾಟಕ ಕರಾವಳಿ ಭಾಗದಲ್ಲಿ ಸಾಗರ ಮೀನುಗಾರಿಕೆಯ ಪ್ರಾಬಲ್ಯ ಹಾಗೂ ಬಳಕೆ ಪ್ರಮುಖವಾಗಿ ಸೇರಿವೆ. ಹಾಗೆಯೇ, ಯಶಸ್ವಿ ಫಿಶ್​ ಮೀಲ್​ ಹಾಗೂ ಆಯಿಲ್​ ಸಂಸ್ಥೆ, ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಿಂದ ಹೊಸದಾಗಿ ತೇರ್ಗಡೆಯಾಗಿರುವ ಮೀನುಗಾರಿಕಾ ಪದವೀಧರರಿಗೆ 6 ತಿಂಗಳ ಉದ್ಯೋಗ ತರಬೇತಿ ಹಾಗೂ ಈ ಕೈಗಾರಿಕೆಯ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪದವಿ ಕೋರ್ಸ್​ನ ಶೈಣಿಕತೆಯ ಭಾಗವಾಗಿ ನೀಡಲಿದೆ. ಇದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕಾರ್ಯಸೂಚಿಯ ಭಾಗವಾಗಿರುತ್ತದೆ.
ರಾಜ್ಯದಲ್ಲಿರುವ ಮೀನುಗಾರಿಕಾ ವಿಶ್ವವಿದ್ಯಾಲಯವನ್ನು ಉನ್ನತ ದರ್ಜೆಗೇರಿಸುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಪ್ರಯತ್ನ ಮುಂದುವರಿದಿದೆ. ಇದಕ್ಕೆ ಮೀನುಗಾರಿಕಾ ಕ್ಷೇತ್ರದ ಉದ್ದಿಮೆದಾರರ ಸಹಕಾರವೂ ಅಗತ್ಯ. ಇದರಿಂದ ವಿದ್ಯಾರ್ಥಿಗಳು ಬೇರೆ ರಾಜ್ಯಕ್ಕೆ ತೆರಳಿ ತರಬೇತಿ ಪಡೆಯುವುದು ತಪು$್ಪತ್ತದೆ.-ಮಂಕಾಳು ವೈದ್ಯ, ಮೀನುಗಾರಿಕೆ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 7 =
Remember me
