ಬೆಂಗಳೂರು:ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವಂತಹ ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಪ್ರಮುಖ 10 ದೇವಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿಯು ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ವಾರ್ಷಿಕ ಅಂದಾಜು 100 ಕೋಟಿ ರೂ. ಆದಾಯದೊಂದಿಗೆ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ.
ಉಳಿದಂತೆ 90 ರಿಂದ 92 ಕೋಟಿ ರೂ. ಆದಾಯದೊಂದಿಗೆ ಉಡುಪಿಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ 2ನೇಸ್ಥಾನ, 40 ರಿಂದ 42 ಕೋಟಿ ರೂ. ಆದಾಯದೊಂದಿಗೆ ಕಟೀಲು ದುರ್ಗಾಪರಮೇಶ್ವರಿ 3ನೇ ಸ್ಥಾನ, 30 ರಿಂದ 33 ಕೋಟಿ ರೂ. ಆದಾಯದೊಂದಿಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ 4ನೇ ಸ್ಥಾನ, 15 ರಿಂದ 20 ಕೋಟಿ ರೂ. ಆದಾಯದೊಂದಿಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ 5ನೇ ಸ್ಥಾನ, 15 ರಿಂದ 17 ಕೋಟಿ ರೂ. ಆದಾಯದೊಂದಿಗೆ ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಸ್ಥಾನ 6ನೇ ಸ್ಥಾನ, 10 ರಿಂದ 12 ಕೋಟಿ ರೂ. ಆದಾಯದಿಂದ ಶ್ರೀ ಮಂದಾರ್ತಿ ದೇವಸ್ಥಾನ 7ನೇ ಸ್ಥಾನ ಪಡೆದುಕೊಂಡಿದೆ.
ಕೊಪ್ಪಳದ ಗುಳ್ಳಗಮ್ಮನ ದೇವಸ್ಥಾನ, ಬೆಂಗಳೂರಿನ ಬನಶಂಕರಿ ದೇವಸ್ಥಾನ ಮತ್ತು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ 8 ರಿಂದ 10 ಕೋಟಿ ರೂ. ಆದಾಯದೊಂದಿಗೆ ಕೊನೆಯ ಮೂರು ಸ್ಥಾನವನ್ನು ಪಡೆದುಕೊಂಡಿದೆ.(ದಿಗ್ವಿಜಯ ನ್ಯೂಸ್​)

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twenty + thirteen =
Remember me
