ಬೆಂಗಳೂರು:ಒಂದು ಕಾಲದಲ್ಲಿ ಸ್ಟಾರ್​ ಹೀರೋಯಿನ್​ಗಳಾಗಿದ್ದ ನಟಿಯರು ಇಂದು ಪೋಷಕ ಪಾತ್ರ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಸುಧಾರಾಣಿ, ಶ್ವೇತಾ ಕೂಡಾ ಸೇರಿದ್ದಾರೆ. ‘ಚೈತ್ರದ ಪ್ರೇಮಾಂಜಲಿ’ ಸಿನಿಮಾ ಮೂಲಕ ಗಮನ ಸೆಳೆದ ನಟಿ ಶ್ವೇತಾ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೂಲಕ ಕನ್ನಡದ ಕಿರುತೆರೆಗೆ ಕಂಬ್ಯಾಕ್‌ ಮಾಡಿದ್ದಾರೆ.
ಟಾಪ್​ ಹೀರೋಯಿನ್​ ಆಗಿ ಮಿಂಚಿ ಹಲವು ವರ್ಷಗಳ ನಂತರ ನಟಿಯನ್ನು ತೆರೆ ಮೇಲೆ ನೋಡಿದ ಅಭಿಮಾನಿಗಳಿಗೆ ಸಖತ್​ ಖುಷಿಯಾಗಿದೆ. ಸಿನಿಮಾ ಧಾರವಾಹಿಯಲ್ಲಿ ಶ್ವೇತಾ ಅವರನ್ನು ನೋಡಿ ಖುಷ್ ಆಗಿರುವ ನಿಮಗೆ ನಾವು ಇಂದು ಅವರ ರಿಯಲ್​ ಫ್ಯಾಮಿಲಿ ಪರಿಚಯ ಮಾಡಲಿದ್ದೇವೆ.
1992ರಲ್ಲಿ ‘ಚೈತ್ರದ ಪ್ರೇಮಾಂಜಲಿ’ ಸಿನಿಮಾ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ ಶ್ವೇತಾ, ಕನ್ನಡ, ಮಲಯಾಳಂನ ಸಾಕಷ್ಟು ಚಿತ್ರಗಳಲ್ಲೂ ಶ್ವೇತಾ ನಟಿಸಿದ್ದಾರೆ. ಸಿನಿಮಾಗಳ ಜತೆಗೆ ತಮಿಳಿನ ಕಿರುತೆರೆಯಲ್ಲೂ ಶ್ವೇತಾ ಹೆಸರು ಮಾಡಿದ್ದಾರೆ. ಮೂಲತಃ ತಮಿಳುನಾಡಿನವರಾದ ಈ ನಟಿಯ ಮೂಲ ಹೆಸರು ವಿನೋದಿನಿ. ಹೌದು, ಚೈತ್ರದ ಪ್ರೇಮಾಂಜಲಿ ಸಿನಿಮಾದ ಮೂಲಕ ಶ್ವೇತಾ ಎಂದೇ ಪ್ರಖ್ಯಾತಿ ಪಡೆದಂತಹ ಈ ನಟಿ, ಅಪ್ಪಟ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಬಾಲ ನಟಿಯಾಗಿ ತಮಿಳು ಚಿತ್ರರಂಗವನ್ನು ಪ್ರವೇಶ ಮಾಡಿ ಆನಂತರ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು.

ಸ್ಯಾಂಡಲ್​ವುಡ್​​ನಲ್ಲಿ ‘ಗೆಜ್ಜೆ ನಾದ’, ‘ಹೆತ್ತವರು’, ‘ಕರ್ಪೂರದ ಗೊಂಬೆ’, ‘ಮಿನುಗು ತಾರೆ’, ‘ಲಕ್ಷ್ಮೀ ಮಹಾಲಕ್ಷ್ಮೀ’ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಮಾಡುವ ವೇಳೆ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡಂತಹ ಈ ನಟಿ, ಶ್ರೀಧರ್ ಎಂಬುವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ವೇತಾ ಮದುವೆಯಾದ ಬಳಿಕ ನಟನೆಗೆ ಗುಡ್ ಬೈ ಹೇಳಿದರು.

ಆಕ್ಸಿಡೆಂಟ್​ನಿಂದ ಶ್ವೇತಾ ಪತಿ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡರು. ಎಲ್ಲೆಡೆ ಓಡಾಡಿ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ವೀಲ್​ ಚೇರ್​ನಲ್ಲಿಯೇ ಶ್ರೀಧರ್ ಓಡಾಡುತ್ತಿದ್ದರು. ಹೀಗೆ ಯಾರ ನೆರವು ಪಡೆಯದ ಶ್ವೇತಾ, ತಮ್ಮ ಪತಿಯ ಆರೈಕೆಯೊಂದಿಗೆ ಮನೆ ಜವಾಬ್ದಾರಿಯನ್ನು ತೆಗೆದುಕೊಂಡು ತಮಿಳಿನ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಅವರ ಪತಿ ಚೇತರಿಸಿಕೊಂಡು ಮೊದಲಿನಂತಾಗಿದ್ದಾರೆ. ಹೀಗೆ ಬಣ್ಣದ ಲೋಕದಲ್ಲಿಯೇ ಸಕ್ರಿಯರಾಗಿರುವ ಶ್ವೇತಾಗೆ ಇಬ್ಬರು ಮಕ್ಕಳಿದ್ದಾರೆ.
ಸದ್ಯ ಜೀ ಕನ್ನಡದಲ್ಲಿ ‘ಲಕ್ಷ್ಮೀ ನಿವಾಸ’ ಸೀರಿಯಲ್‌ ಮೂಲಕ ಶ್ವೇತಾ ಅವರ ಆಗಮನವಾಗಿದೆ. ತುಂಬು ಕುಟುಂಬದ ಸಂಸಾರದಲ್ಲಿ ಲಕ್ಷ್ಮೀಯಾಗಿ ಅವರ ಪಾತ್ರ ಸಾಗುತ್ತಿದೆ.
ಚಹಾ ಕುಡಿಯುವ ನೆಪದಲ್ಲಿ ಸರ್ಕಾರಿ ನೌಕರನನ್ನು ಮನೆಗೆ ಕರೆದು ಮಗಳನ್ನು ಕೊಟ್ಟು ಮದ್ವೆ ಮಾಡಿದ್ರು

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:five × four =
Remember me
