ಉತ್ತರಕನ್ನಡ:ಕಾರವಾರ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ವಿರೋಧಿಸಿ ಮೀನುಗಾರರ ಸಂಘಟನೆಗಳು ಇಂದು ಕಾರವಾರ ಬಂದ್​ಗೆ ಕರೆ ನೀಡಿದ್ದವು.
ಅದರಂತೆ ಕಾರವಾರ ಸಂಪೂರ್ಣ ಬಂದ್ ಆಗಿತ್ತು. ನಗರದ ವಿವಿಧ ಸಂಘಟನೆ ಮುಖಂಡರು, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸುಮಾರು 6 ಸಾವಿರಕ್ಕೂ ಅಧಿಕ ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು.ಈ ಮಧ್ಯೆ ಮಾಜಿ ಸಚಿವ ಪ್ರಮೋದ್​ ಮಧ್ವರಾಜ ಕಾರವಾರದ ಟ್ಯಾಗೋರ್​ ಕಡಲತೀರಕ್ಕೆ ಭೇಟಿ ನೀಡಿ ಯೋಜನೆಯ ಕಾಮಗಾರಿ ವೀಕ್ಷಿಸಿದರು.
ಬಳಿಕ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಅವರು, ಈ ಯೋಜನೆ ಸಾಗರಮಾಲಾ ಮೀನುಗಾರರ ಅನ್ನದ ಬಟ್ಟಲು ಕಸಿಯುವ ಯೋಜನೆಯಾಗಿದೆ. ಸಚಿವರು ಮೀನುಗಾರರಿಗೆ ಯಾವುದೇ ತೊಂದರೆ ಇಲ್ಲ ಎಂದಿದ್ದರು. ಒಮ್ಮೆ ಈ ಯೋಜನೆ ಸಂಪೂರ್ಣ ಜಾರಿಯಾದರೆ ಮೀನುಗಾರರು ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು.
ಹಿಂದೆ ಯೋಜನೆ ಜಾರಿಗೆ ಬರುತ್ತಿದ್ದಾಗಲೇ ಪ್ರತಿಭಟನೆ ಮಾಡಬೇಕಿತ್ತು. ನಮ್ಮ ತಂದೆ-ತಾಯಿಗೆ ಹಿಂದಿನಿಂದಲೂ ಕಾರವಾರದ ನಂಟು ಇದೆ. ನಮಗೆ ಕಾರವಾರ ಮತ್ತು ಉಡುಪಿ ಬೇರೆ ಅಲ್ಲ. ಈಗಾಗಲೇ ನೌಕಾನೆಲೆ ಯೋಜನೆಯಿಂದ ಮೀನುಗಾರರು ತೊಂದರೆ ಅನುಭವಿಸಿದ್ದಾರೆ. ಈಗ ಮತ್ತೆ ಇಲ್ಲಿಂದ ಎತ್ತಂಗಡಿ ಮಾಡುವುದು ಅಮಾನವೀಯ ಎಂದರು.
ಮೀನುಗಾರಿಕಾ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡುತ್ತೇನೆ. ಮೀನುಗಾರರ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
