ಕಾರವಾರ:ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಕಾಡಿಗೆ ಕರೆದೊಯ್ದು ಗುಂಡು ಹೊಡೆದ ಪತಿಯನ್ನು ಕದ್ರಾ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಗೋಯರ ಗ್ರಾಮದ ರಮೇಶ ದೇಸಾಯಿ ಬಂಧಿತ ಆರೋಪಿ. ಆತನ ಪತ್ನಿ ರಸಿಕಾ ತೀವ್ರವಾಗಿ ಗಾಯಗೊಂಡಿದ್ದು, ಸರ್ಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇದನ್ನೂ ಓದಿ:ಆಂಧ್ರದ ಎಲೂರಿನಲ್ಲಿ ನಿಗೂಢ ರೋಗ: 290 ಮಂದಿ ಅಸ್ವಸ್ಥ, ಓರ್ವ ಸಾವು, ವೈದ್ಯರಿಗೂ ಕಗ್ಗಂಟಾದ ಕಾರಣ
ಪತಿ-ಪತ್ನಿಯ ನಡುವೆ ಸದಾ ಜಗಳವಾಗುತ್ತಿತ್ತು. ಇದರಿಂದ ಡಿ.4 ರಂದು ಕಾಡಿಗೆ ಕರೆದೊಯ್ದು, ಕಾಡು ಪ್ರಾಣಿ ಹೊಡೆಯಲು ಇರುವ ಕಾಡತೂಸಿನಿಂದ ಗುಂಡು ಹಾರಿಸಿದ್ದ. ಆದರೆ, ಪತ್ನಿಯ ಭುಜ ಹಾಗೂ ಕಿಬ್ಬೊಟ್ಟೆಗೆ ಗಾಯವಾಗಿತ್ತು. ಆಕೆಯನ್ನು ತಂದು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದ. ಕಟ್ಟಿಗೆ ತರಲು ಕಾಡಿಗೆ ಹೋದಾಗ ಅಪರಿಚಿತ ಬೇಟೆಗಾರರು ಗುಂಡು ಹಾರಿಸಿ ಗಾಯವಾಯಿತು ಎಂದು ಹೇಳಿದ್ದ. ಕದ್ರಾ ಪೊಲೀಸ್ ಠಾಣೆಯಲ್ಲೂ ಇದೇ ರೀತಿ ದೂರು ನೀಡಿದ್ದ.
ಅನುಮಾನಗೊಂಡ ಪೊಲೀಸರು ಗಾಯಾಳು ರಸಿಕಾಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆಕೆ ನಡೆದ ಘಟನೆ ಬಾಯ್ಬಿಟ್ಟಿದ್ದಾಳೆ. ಪೊಲೀಸರು ರಮೇಶನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕೈ ಕಳೆದುಕೊಂಡು ಕೇರಳ ಯೋಧನ ಜೀವ ಉಳಿಸಿ, ಮದ್ವೆಯಾಗಿರುವ ಛತ್ತೀಸ್​ಗಢ ಮಹಿಳೆಯ ಹೊಸ ಸಾಹಸ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 7 =
Remember me
